ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಖಚಿತ!
ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ
Team Udayavani, Sep 17, 2020, 5:52 AM IST
ಶಿರಿಬೀಡು ಜಂಕ್ಷನ್ ಬಳಿ ವಾಹನ ನಿಲುಗಡೆ .
ಉಡುಪಿ: ನಗರದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವವರಿಗೆ ಬಿಸಿ ಮುಟ್ಟಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಟ್ರಾಫಿಕ್ ದಟ್ಟಣೆಗೆ ಪಾರ್ಕಿಂಗ್ ಸಮಸ್ಯೆ ಕಾರಣ ವಾಗಿದ್ದು ಈ ನಿಟ್ಟಿನಲ್ಲಿ ನಗರದ ಆಯಾ ಕಟ್ಟಿನ ಭಾಗಗಳಲ್ಲಿ ಟ್ರಾಫಿಕ್ ಪೊಲೀಸರು ಮಾರ್ಕಿಂಗ್ ಪ್ರಕ್ರಿಯೆ ನಡೆಸಲಿದ್ದಾರೆ.
ಒಂದು ಸಾವಿರ ರೂ.ದಂಡ ಕಟ್ಟದಿದ್ದರೆ ವಾಹನ ಸೀಝ್ ಅಸಮರ್ಪಕವಾಗಿ ಪಾರ್ಕ್ ಮಾಡಿದರೆ ಸಾವಿರ ರೂ.ದಂಡ ಕಟ್ಟಬೇಕಾಗುತ್ತದೆ. ಡಬಲ್ ಸೈಡ್ ಪಾರ್ಕ್ ಮಾಡಿದರೂ ಇಷ್ಟೇ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ. ಗುರುತಿಸಲಾಗಿರುವ ಮಾರ್ಕಿಂಗ್‌ನಿಂದ
ಹೊರಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ದರೆ ವಾಹನಕ್ಕೆ ಲಾಕ್ ಹಾಕಿ ದಂಡ ವಿಧಿಸಲಾಗುತ್ತದೆ.
ಎಲ್ಲೆಡೆ ಪಾರ್ಕಿಂಗ್ ಮಾಡುವವರಿಗೆ ಟ್ರಾಫಿಕ್ ಪೊಲೀಸರು ಪ್ರತಿನಿತ್ಯ ಎಚ್ಚರಿಕೆ ನೀಡಿದರೂ ಸಮಸ್ಯೆ ಪುನರಾವರ್ತನೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕಟ್ಟುನಿಟ್ಟು ದಂಡ ಪ್ರಯೋಗಕ್ಕೆ ಪೊಲೀಸರು ಮುಂದಾಗಿದೆ. ನಗರದ ಸಿಟಿ ಬಸ್ ನಿಲ್ದಾಣ, ಕೆ.ಎಂ.
ಮಾರ್ಗ, ತ್ರಿವೇಣಿ ಸರ್ಕಲ್, ನಗರಸಭೆಯ ಎದುರುಗಡೆ, ಶಿರಿಬೀಡು ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದೆ. ಕೆಲವೆಡೆ ಈಗಾಗಲೇ ಮಾರ್ಕಿಂಗ್ ಇದೆ. ಮಾರ್ಕಿಂಗ್ ಇಲ್ಲದ ಕಡೆಗಳಲ್ಲಿ ಮಾರ್ಕಿಂಗ್ ಮಾಡಿ ಅನಂತರ ವಾಹನ ಸವಾರರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಲಿದ್ದಾರೆ.
ವಾಹನ ಆಲ್ಟ್ರೇಷನ್ ಮಾಡಿದರೂ ದಂಡ!
ವಾಹನಗಳಲ್ಲಿ ಹೆಚ್ಚುವರಿ ಹಾರ್ನ್ ಅಳವಡಿಕೆ, ಟಿಂಟ್ ಗ್ಲಾಸ್‌ಗಳ ಅಳವಡಿಕೆ, ಹೆಲೋಜಿನ್ ಲೈಟ್, ಚೀನಾ ಲೈಟ್ ಅಳವಡಿಸುವುದು, ಸ್ಟಿಕ್ಕರ್‌ಗಳ ಅಳವಡಿಕೆ ಕಂಡು ಬಂದರೆ ಅಂತಹ ವಾಹನ ಗಳಿಗೂ 500 ರೂ.ಗಳ ದಂಡ ವಿಧಿಸಲಾಗುತ್ತದೆ. ವಾಹನ ಸವಾರರು ಎಲ್ಲ ರೀತಿಯ ಒರಿಜಿನಲ್ ದಾಖಲೆ ವಾಹನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ದಂಡ ಪಾವತಿಸುವುದು ಖಚಿತವಾಗಲಿದೆ.
ಏಕಾಏಕಿ ಕ್ರಮ: ಆಕ್ಷೇಪ
ಮಂಗಳವಾರ ಸಂಜೆ ಮಾರ್ಕಿಂಗ್ ಇಲ್ಲದ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳ ವಿರುದ್ಧ ಏಕಾಏಕಿ ಕ್ರಮ ಕೈಗೊಂಡಿದ್ದರಿಂದ ವಾಹನ ಸವಾರರಿಂದ ಆಕ್ಷೇಪ ವ್ಯಕ್ತವಾಯಿತು. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಮಾರ್ಕಿಂಗ್ ನಡೆಸಿದ ಬಳಿಕವಷ್ಟೇ ದಂಡ ವಿಧಿಸಲು ನಿರ್ಧರಿಸಲಾಯಿತು.
ನಿಯಮ ಉಲ್ಲಂಘಿಸಿದರೆ ದಂಡ ಖಚಿತ
ಹಲವಾರು ಬಾರಿ ಎಚ್ಚರಿಕೆ ನೀಡಿದರೂ ವಾಹನ ಸವಾರರು ಸಂಚಾರ ನಿಯಮ ಉಲ್ಲಂ ಸುತ್ತಿದ್ದಾರೆ. ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್, ಕರ್ಕಶ ಹಾರ್ನ್, ಕಣ್ಣು ಕುಕ್ಕುವ ಲೈಟ್‌ಗಳನ್ನು ಅಳವಡಿಸಿ ಅಪಘಾತ ಹಾಗೂ ಸಂಚಾರ ದಟ್ಟಣೆಗೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಮಾರ್ಕಿಂಗ್ ಮಾಡಲಿದ್ದಾರೆ. ಈ ನಿಯಮ ಉಲ್ಲಂಘಿಸಿದವರು ದಂಡ ಪಾವತಿಸಬೇಕಾಗುತ್ತದೆ.
-ಅಬ್ದುಲ್ ಖಾದರ್, ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.