Manipal: ಬ್ಯಾಂಕ್ ವಿವರ ಪಡೆದು ವಂಚನೆ
Team Udayavani, Aug 6, 2024, 8:31 PM IST
ಮಣಿಪಾಲ: ಬ್ಯಾಂಕ್‌ನ ಕಸ್ಟಮರ್ ಕೇರ್ ಎಂದು ಮಾಹಿತಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂ. ವನ್ನು ವರ್ಗಾವಣೆ ಮಾಡಿರುವ ಘಟನೆಯೊಂದು ಮಂಗಳವಾರ (ಆ.6) ನಡಡೆದಿದೆ.
ಮಣಿಪಾಲದ ಶೇಖ್ ಅಬ್ದುಲ್ ಖಾದರ್ ಅವರು ಅಮೆಜಾನ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಆ.5ರಂದು ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಐಸಿಐಸಿಐ ಬ್ಯಾಂಕ್ ಕಸ್ಟಮರ್ ಕೇರ್ ಸೆಂಟರ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ. ನಂತರ “ನಿಮ್ಮ ಕಾರ್ಡ್ ಬದಲಾವಣೆ ಮಾಡಲಿಕ್ಕಿದೆ’ ಎಂದು ಮಾಹಿತಿ ಪಡೆದುಕೊಂಡ ಸ್ವಲ್ಪ ಸಮಯದಲ್ಲೇ ಕ್ರೆಡಿಟ್ ಕಾರ್ಡ್‌ನಿಂದ 51,180 ರೂ. ಮತ್ತೂಂದು ಅಕೌಂಟ್‌ಗೆ ವರ್ಗಾವಣೆಯಾಗಿದೆ. ಸದ್ಯ ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿರಾರು ರೂ. ವರ್ಗಾವಣೆ
ಹೆರ್ಗದ ಸುಕೇಶ್ ಎಂಬುವವರಿಗೆ ಎಸ್‌ಬಿಐ ಹೆಸರಿನಲ್ಲಿ ಕರೆ ಮಾಡಿ ಲಿಂಕ್ ಕಳಿಸುವುದಾಗಿ ತಿಳಿಸಿದ್ದಾರೆ. ಲಿಂಕ್ ಕ್ಲಿಕ್ಕಿಸಿ ಸಾವಿರಾರು ರೂ. ಕಳೆದುಕೊಂಡ ಘಟನೆ ಮಂಗಳವಾರ (ಆ.6) ನಡೆದಿದೆ.
ಕರೆ ಮಾಡಿ ಲಿಂಕ್ ಕ್ಲಿಕ್ ಮಾಡಿದರೆ 9,657 ರೂ. ಬಹುಮಾನ ದೊರೆಯುವುದಾಗಿ ತಿಳಿಸಿದ್ಅದಾರೆ. ಸುಕೇಶ ಅವರು ಲಿಂಕ್ ಓಪನ್ ಮಾಡಿದ ಕೂಡಲೇ ಅವರ ಖಾತೆಯಲ್ಲಿದ್ದ 99,850 ರೂ. ಹಣ ವರ್ಗಾವಣೆಯಾಗಿದೆ. ಸದ್ಯ ಈ ಕುರಿತಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.