ಗಣಗಳ ಪತಿಯಾಗಿ ಗಣಪತಿಯ ಸಂದೇಶ
Team Udayavani, Aug 21, 2017, 7:50 AM IST
ಭಾಗ 2 : ಗಣಪತಿ ಹೆಸರು ಜನರ ಬಾಯಲ್ಲಿ ಹಾಸುಹೊಕ್ಕಾಗಿದೆ. ಈ ಹೆಸರು ಸಮೂಹವನ್ನು ಒಂದುಗೊಳಿಸುವ ಅರ್ಥವನ್ನು ಹೊಂದಿದೆ. ಗಣ= ಸಮೂಹ. ಪತಿ=ಮುಖ್ಯಸ್ಥ. ಇಡೀ ಸಮೂಹದ ಅಧ್ಯಕ್ಷತೆ ವಹಿಸುವವ ಎಂದರ್ಥ. ಸಂಘಟನೆಯೇ ಇವನ ಧ್ಯೇಯ ವಿನಾ ವಿಘಟನೆ ಅಲ್ಲ. ವಿಘಟನೆ ಸಹಜವೆಂಬಂತೆ ವರ್ತಿಸುವ ಮಾನವ ಪ್ರಪಂಚವನ್ನು ಮತ್ತೆ ಮತ್ತೆ ಸಂಘಟಿಸುವ ಕಾಯಕವನ್ನು ನಡೆಸುತ್ತಾನೆ.
ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಒಂದುಗೂಡಿಸಲು ಬಾಲಗಂಗಾಧರ ತಿಲಕರು ಈ ಅರ್ಥವನ್ನು ತಿಳಿದು ಗಣೇಶೋತ್ಸವವನ್ನು ಆರಂಭಿಸಿದ್ದಿರಬಹುದು. “ಮೊದಲೊಂದಿಪೆ ನಿನಗೆ ಗಣನಾಥ’ ಎಂಬ ಹಾಡಿನಂತೆ ದೇಶದ ಸ್ವಾತಂತ್ರ್ಯ ಕಾಯಕ ನಡೆಸಿದವರೂ ಗಣಪತಿಯನ್ನು ಮುಂದೆ ಮಾಡಿಕೊಂಡು ಆತನಿಗೆ ಪೂಜೆ ಸಲ್ಲಿಸಿದರು, ತಾತ್ವಿಕ ಅರ್ಥ ತಿಳಿದೋ ತಿಳಿಯದೆಯೋ ಎಂಬುದು ಬೇರೆ ಮಾತು. ತಿಳಿದೋ ತಿಳಿಯದೆಯೋ ನಾವು ಮಾಡುವ ಕೆಲಸಗಳು ಫಲಕೊಡುವುದಿಲ್ಲವೆ? ವಿಘ್ನನಿವಾರಕನೆಂಬ ಹೆಸರಂತೂ ಆತನಿಗೆ ಇದ್ದೇ ಇದೆ. ಈ ಮೂಲಕ ಸ್ವಾತಂತ್ರ್ಯ ಸಿಗಲು ಇದ್ದ ಅಡಚಣೆ ನಿವಾರಣೆಯಾಗಿದ್ದಿರಬಹುದು.
ಗಣಪತಿಯ ಹಬ್ಬಕ್ಕೆ ಕಲಾವಿದರ ಪಾತ್ರವಿದೆ, ವಾದ್ಯ ಸಂಗೀತದವರ ಪಾತ್ರವಿದೆ, ಮಣ್ಣಿನ ಕೆಲಸದವರಿಗೆ ಕೆಲಸವಿದೆ, ಅಡುಗೆಯವರು, ಕಾರ್ಮಿಕರು, ಪೂಜೆ ಮಾಡುವವರಿಲ್ಲದೆ ಈ ಯಾವುದೇ ಕೆಲಸ ನಡೆಯದು, ವ್ಯಾಪಾರಸ್ಥರಿಗೆ, ರೈತರಿಗೆ ಹೀಗೆ ನಾನಾ ಜನಸಮೂಹದ ಒಟ್ಟು ಸಂಘಟನೆಯಲ್ಲಿ ಗಣೇಶ ಪೂಜೆಗೊಳ್ಳುತ್ತಾನೆ. ಇದರಲ್ಲಿ ಬಡವರ ಪಾತ್ರವೂ ಇದೆ, ಸಿರಿವಂತನಿಗೂ ಪಾತ್ರವಿದೆ. ಇಲ್ಲಿ ಮಾತ್ರವಲ್ಲ ತಾತ್ವಿಕವಾಗಿಯೂ ಎಲ್ಲರೂ ಸಮಾನರು. ಅವರವರ ಕೆಲಸದಲ್ಲಿ ಅವರವರು ಪ್ರವೀಣರು, ಒಬ್ಬರು ಇನ್ನೊಂದು ಕ್ಷೇತ್ರದಲ್ಲಿ ದಡ್ಡರು. ಎಲ್ಲ ಕೆಲಸಗಳೂ ಸ್ವಸ್ಥ ಸಮಾಜಕ್ಕೆ ಅಗತ್ಯ. ಈಗ ಸಾರ್ವಜನಿಕ ಗಣೇಶೋತ್ಸವದಲ್ಲಿ ಇದರ ಅರ್ಥ ಇನ್ನಷ್ಟು ಸ್ಪಷ್ಟಗೊಳ್ಳುವಂತೆ ಕಾಣುತ್ತದೆ. ಪಕ್ಷ, ಜಾತಿ, ಹಣ, ಅಂತಸ್ತುಗಳಲ್ಲಿಯೇ ಮೈಮರೆಯುವ ಜನರು ಅವುಗಳೆಲ್ಲವನ್ನೂ ಕ್ಷಣ, ದಿನ ಮಾತ್ರವಾದರೂ ಮರೆತು ಒಂದುಗೂಡುವ ಪರಿಯನ್ನು “ಪವಾಡ’ ಎಂದು ಕರೆದರೂ ಪರವಾಗಿಲ್ಲ. ಇದು ಬುದ್ಧಿಪೂರ್ವಕವಾಗಿ ತಿಳಿದರೆ (ರಿಯಲೈಸೇಶನ್) ಪಕ್ಷ, ಜಾತಿ, ಹಣ, ಅಂತಸ್ತುಗಳಲ್ಲಿ ಮೈಮರೆಯುವ ಸಮಯ ಕ್ರಮೇಣ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿ ವ್ಯಕ್ತಿತ್ವ ವಿಕಾಸವಾಗುತ್ತದೆ. ಗಣೇಶನನ್ನು ಒಪ್ಪಲಿ ಬಿಡಲಿ ಸಾಮಾಜಿಕವಾಗಿ ಮಾತ ನಾಡುವವರೂ ಇದನ್ನು ಒಪ್ಪುತ್ತಾರೆ. ಇಲ್ಲಿ ಗಣೇಶನಿಗಿಂತಲೂ ಆತನ ತಣ್ತೀ ಮುಖ್ಯ.
ನಮ್ಮದು ಗಣತಂತ್ರ ವ್ಯವಸ್ಥೆಯ ದೇಶ. ಗಣರಾಜ್ಯ ಎನ್ನುತ್ತೇವೆ. ಗಣರಾಜ್ಯಕ್ಕೆ ರಾಷ್ಟ್ರಪತಿಯವರೇ ಮುಖ್ಯಸ್ಥರು. ತಾತ್ವಿಕವಾಗಿ ಹೇಳುವುದಾದರೆ ಎಲ್ಲಾ ಗಣಗಳಿಗೆ ಪತಿಯಾದ ಗಣಪತಿಯನ್ನು ವಿಶ್ವ ವ್ಯವಸ್ಥೆಗೆ ರಾಷ್ಟ್ರಪತಿ/ವಿಶ್ವಪತಿ ಎನ್ನಬಹುದು. ಈ ಕಾರಣದಿಂದಲೋ ಏನೋ ಆತನನ್ನು ವಿಶ್ವಂಭರ ಎಂದು ಕರೆದಿರಬಹುದು.
- ಸ್ವಾಮಿ
Also Read This… :
►Part 1►ಮಾನವ ಪ್ರಪಂಚಕ್ಕೆ ಪ್ರಾಣಿಪ್ರಿಯ ಶಿವ ಸಂದೇಶ : http://bit.ly/2xm3x0G
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.