Gangolli: ವಿದೇಶಿ ಉದ್ಯೋಗ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ
Team Udayavani, Jun 4, 2024, 9:45 PM IST
ಗಂಗೊಳ್ಳಿ: ಕೆನಡಾದಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿದ ಪ್ರಕರಣ ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗೊಳ್ಳಿಯ ಅಗಪಿತಾಸ್ ಪ್ರಂಕಿ ರೆಬೆರೋ (58) ಅವರು ವಂಚನೆಗೊಳಗಾದವರು. ರೆಬೆರೋ ಅವರ ಜಿ-ಮೇಲ್ ಖಾತೆಗೆ ಕಳೆದ ಎ. 20ರಂದು ಕೆನಡಾದಲ್ಲಿ ಕಾನ್‌ಕ್ರಿಜ್ (ಇಟncಜಿಛಿrಜಛಿ ಟffಜಿcಛಿr) ಅಧಿಕಾರಿ ಉದ್ಯೋಗಕ್ಕೆ ಆಫರ್ ನೀಡುವುದಾಗಿ ಸಂದೇಶ ಬಂದಿತ್ತು. ಅದರಲ್ಲಿ ಪ್ರತೀ ತಿಂಗಳು 6 ಸಾವಿರ ಡಾಲರ್ ಸಂಬಳ, ವಾರದಲ್ಲಿ 6 ದಿನ, ಪ್ರತೀ ದಿನ 8 ಗಂಟೆ ಕೆಲಸ, ಊಟ, ವಸತಿಯನ್ನು ಕಂಪೆನಿ ನೀಡಲಿದ್ದು, 2 ವರ್ಷಗಳ ಗುತ್ತಿಗೆ ಇರುವುದಾಗಿ ಅದರಲ್ಲಿತ್ತು.
ಉದ್ಯೋಗ ಪಡೆಯುವ ಉದ್ದೇಶದಿಂದ ರೆಬೆರೋ ಅವರು ಆಸಕ್ತಿಯಿರುವುದಾಗಿ ಮೇಲ್ ಮಾಡಿದ್ದಾರೆ. ಮೇ 4ರಂದು ಕೆನಡಾ ಇಮಿಗ್ರೇಶನ್ ಹಾಗೂ ವೀಸಾ ಸರ್ವಿಸ್‌ನ ಖಾತೆಯಿಂದ ಮೆಸೇಜ್ ಬಂದಿದ್ದು, ವೀಸಾ ಅಸೆಸ್ಮೆಂಟ್ ಅರ್ಜಿ ಹಾಗೂ ದಾಖಲೆಗಳು ನೀಡುವಂತೆ ಕೇಳಿದ್ದಾರೆ. ಅದರಂತೆ ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಿದ್ದಾರೆ.
ಆ ಬಳಿಕ ಮೇ 9ರಿಂದ ಮೇ 27ರ ವರೆಗೆ ರೆಬೆರೋ ಅವರಿಗೆ ಕೆನಡಾದಲ್ಲಿ ಉದ್ಯೋಗ ನೀಡುವ ಕುರಿತು ಮೇಲ್ ಮೂಲಕ ಮೆಸೇಜ್ ಕಳುಹಿಸಿ, ರೆಬೆರೋ ಅವರನ್ನು ನಂಬಿಸಿ, ಒಟ್ಟು 2,27,441 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಆ ವಂಚಕರು ಹಾಕಿಕೊಂಡು ವಂಚಿಸಿರುವುದಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.