ಬೇಡಿಕೆಯಷ್ಟು ಉತ್ಪಾದನೆಯಾಗದ ಶೇಂಗಾ: ಹೊರ ಜಿಲ್ಲೆಗಳ ಶೇಂಗಾ ಅವಲಂಬಿಸಿರುವ ಸಂಸ್ಕರಣ ಘಟಕಗಳು


Team Udayavani, Jun 2, 2023, 3:53 PM IST

ಬೇಡಿಕೆಯಷ್ಟು ಉತ್ಪಾದನೆಯಾಗದ ಶೇಂಗಾ: ಹೊರ ಜಿಲ್ಲೆಗಳ ಶೇಂಗಾ ಅವಲಂಬಿಸಿರುವ ಸಂಸ್ಕರಣ ಘಟಕಗಳು

ಉಡುಪಿ: “ಬಡವರ ಬಾದಾಮಿ’ ಎಂದೇ ಕರೆಸಿಕೊಳ್ಳುವ ನೆಲಗಡಲೆ ಅಥವಾ ಶೇಂಗಾವು ಜಿಲ್ಲೆಯಲ್ಲಿ ಈಗ ತೀವ್ರ ಅಭಾವ. ಸಂಸ್ಕರಣ ಘಟಕಗಳಿಗೆ ಸ್ಥಳೀಯ ಶೇಂಗಾ ನಿರೀಕ್ಷೆಯಷ್ಟು ಬರುತ್ತಿಲ್ಲ. ಅನಿವಾರ್ಯವಾಗಿ ಹೊರ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಕೋಟ, ಕುಂದಾಪುರ, ಬೈಂದೂರು ಭಾಗದಲ್ಲಿ ಸುಮಾರು 2000 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಇದರಲ್ಲಿ ಬಹುಪಾಲು ಬೆಳೆಗಾರರು ತಾವು ಬೆಳೆದ ಶೇಂಗಾವನ್ನು ಕುಟುಂಬದ ಬಳಕೆಗೆ ಇಟ್ಟುಕೊಂಡು ಅಲ್ಪ ಪ್ರಮಾಣದಷ್ಟು ಮಾತ್ರ ಮಾರುಕಟ್ಟೆಗೆ ನೀಡುತ್ತಿದ್ದಾರೆ. ಶೇಂಗಾವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವ ಕೃಷಿಕ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಹೀಗಾಗಿ ಜಿಲ್ಲೆಯಲ್ಲಿರುವ ಶೇಂಗಾ ಸಂಸ್ಕರಣ ಘಟಕದ ಮಾಲಕರು ಹೊರ ಜಿಲ್ಲೆಗಳಿಂದ ಶೇಂಗಾ ಆಮದು ಮಾಡಿಕೊಂಡು ಸಂಸ್ಕೃರಣೆ ಮಾಡಿ, ಮಾರುಕಟ್ಟೆಗೆ ನೀಡುವಂತಾಗಿದೆ.

ಸಾಮಾನ್ಯವಾಗಿ ಜಿಲ್ಲೆಯ ರೈತರು ಮುಂಗಾರು ಮತ್ತು ಹಿಂಗಾರಿನಲ್ಲಿ ಭತ್ತವನ್ನೇ ಪ್ರಧಾನವಾಗಿ ಬೆಳೆಯುತ್ತಾರೆ. ದ್ವಿದಳ ದಾನ್ಯಗಳಲ್ಲಿ ಶೇಂಗಾಕ್ಕೆ ಆದ್ಯತೆ ನೀಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬೀಡಾಡಿ ಹಸುಗಳು ಮತ್ತು ಕೆಲವು ಸಾಕು ಹಸುಗಳು ಗದ್ದೆಗಳಿಗೆ ಬಂದು ಶೇಂಗಾ ಬೆಳೆ ನಾಶ ಮಾಡುತ್ತಿರುವುದರಿಂದ ರೈತರು ಶೇಂಗಾ ಬೆಳೆಯಲು ಆಸಕ್ತಿ ತೋರುತ್ತಿಲ್ಲ. ಶೇಂಗಾ ಗದ್ದೆಗೆ ಹಸುಗಳು ಪ್ರವೇಶ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಅಥವಾ ಕೃಷಿ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಲ್ಲಿ ಶೇಂಗಾ ಬೆಳೆಗಾರರ ಸಂಖ್ಯೆ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಹಾಗೆಯೇ ಹವಾಮಾನ ವೈಪರಿತ್ಯ ಅಥವಾ ಶೇಂಗಾ ಬೀಜದ ಗುಣಮಟ್ಟ ಚೆನ್ನಾಗಿಲ್ಲದೇ ಇದ್ದಾಗ ಇಳುವರಿಯು ಕಡಿಮೆಯಾಗುತ್ತದೆ. ಈ ಬಗ್ಗೆಯೂ ಕೃಷಿಕರಿಗೆ ಅರಿವು ಮೂಡಿಸುವ ಜತೆಗೆ ಸೂಕ್ತ ಪರಿಹಾರ ನೀಡಬೇಕು. ಉತ್ತಮ ಗುಣಮಟ್ಟದ ಶೇಂಗಾ ಬೀಜಗಳನ್ನು ಕೃಷಿ ಇಲಾಖೆಯು ಸಂಸ್ಕರಣ ಘಟಕಗಳ ಮೂಲಕ ಸಂಸ್ಕರಿಸಿ, ರೈತರಿಗೆ ಸಬ್ಸಿಡಿ ದರದಲ್ಲಿ ವಿತರರಿಸುವ ವ್ಯವಸ್ಥೆ ಮಾಡಿದಾಗ ಶೇಂಗಾ ಉತ್ಪಾದನೆ ಹೆಚ್ಚಿಸಲು ಸಾಧ್ಯವಿದೆ ಎಂಬುದು ಕೃಷಿಕರ ಅಭಿಪ್ರಾಯವಾಗಿದೆ.

ಹೊರ ಜಿಲ್ಲೆಗಳಿಂದ ಆಮದು
ಉಡುಪಿ ಜಿಲ್ಲೆಯಲ್ಲಿ ಒಂದು ಬೃಹತ್‌ ಹಾಗೂ ಎರಡು ಸಣ್ಣ ಮಟ್ಟದ ಶೇಂಗಾ ಸಂಸ್ಕರಣ ಘಟಕವಿದೆ. ಸ್ಥಳೀಯವಾಗಿ ಸುಮಾರು 400ರಿಂದ 600 ಟನ್‌ ಶೇಂಗಾ ಉತ್ಪಾದನೆಯಾಗುತ್ತದೆ. ಅದರಲ್ಲಿ ಸ್ಥಳೀಯ ಸಂಸ್ಕರಣ ಘಟಕಕ್ಕೆ ಹೋಗುತ್ತಿರುವುದು ಸುಮಾರು 250ರಿಂದ 300 ಟನ್‌ ಮಾತ್ರ. ಬೃಹತ್‌ ಸಂಸ್ಕರಣ ಘಟಕದಲ್ಲಿ ದಿನಕ್ಕೆ 10 ಟನ್‌ ಶೇಂಗಾ ಸಂಸ್ಕರಣೆಯ ಸಾಮರ್ಥ್ಯವಿದ್ದರೂ ಸದ್ಯ 5 ಟನ್‌ ಮಾತ್ರ ಸಂಸ್ಕರಿಸಲಾಗುತ್ತಿದೆ. ಆದರೂ ತಿಂಗಳಿಗೆ 150 ಟನ್‌ ಶೇಂಗಾ ಬೇಕಾಗುತ್ತದೆ. ವರ್ಷ ಪೂರ್ತಿ ಘಟಕ ನಡೆಸಬೇಕಾದರೆ ಕನಿಷ್ಠ 1500 ಟನ್‌ ಶೇಂಗಾ ಬೇಕಾಗುತ್ತದೆ. ಹೀಗಾಗಿ ಗದಗ, ಲಕ್ಷ್ಮೀಶ್ವರ, ಸವಣೂರು, ಮುಂಡರಗಿ, ಚಳ್ಕೆರೆ, ತುಮಕೂರು ಭಾಗದಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದಾರೆ.

ಬೇಡಿಕೆ ಹೆಚ್ಚಿದೆ
ಶೇಂಗಾಕ್ಕೆ ಸದಾ ಬೇಡಿಕೆ ಇರುತ್ತದೆ. ರೈತರು ತಾವು ಬೆಳೆದ ಶೇಂಗಾವನ್ನು ಆರಂಭದಲ್ಲಿ ಕೆಜಿಗೆ 50ರಿಂದ 60 ರೂ.ಗಳಂತೆ ನೀಡುತ್ತಾರೆ. ಅದೇ ಸ್ವಲ್ಪ ದಿನಗಳ ಕಾಲ ಸಂಗ್ರಹಿಸಿಟ್ಟುಕೊಂಡು ನೀಡಿದರೆ ದರ ಇನ್ನಷ್ಟು ಹೆಚ್ಚು ಸಿಗುವ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಶೇಂಗಾ ಖರೀದಿ ದರ ಪ್ರತಿ ಕೆಜಿಗೆ 55 ರಿಂದ 65 ರೂ. ಇತ್ತು ಈ ವರ್ಷ ಅದು ಪ್ರತಿ ಕೆಜಿಗೆ 75ರಿಂದ 80 ಆಗುವ ಸಾಧ್ಯತೆಯೂ ಇದೆ. ಅಲ್ಲದೆ ಶೇಂಗಾ ಬೀಜದ ರಫ್ತು ದರ ಕೂಡ 110 ರಿಂದ 120 ರೂ. ಇದೆ. ಹೀಗಾಗಿ ಶೇಂಗಾ/ ಶೇಂಗಾ ಬೀಜಕ್ಕೆ ಎಲ್ಲ ಕಾಲದಲ್ಲೂ ಬೇಡಿಕೆ ಇರುತ್ತದೆ. ಶೇಂಗಾ ಎಣ್ಣೆ ಮತ್ತು ಶೇಂಗಾದಿಂದ ಚಿಕ್ಕಿ ಸಹಿತ ಹಲವು ಬಗೆಯ ಆಹಾರೋತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಬೇಡಿಕೆಯಷ್ಟು ಜಿಲ್ಲೆಯಲ್ಲಿ ಶೇಂಗಾ ಪೂರೈಕೆ ಇಲ್ಲ ಎನ್ನುತ್ತಾರೆ ಸಂಸ್ಕರಣ ಘಟಕದ ಮಾಲಕರು.

ನೂತನ ಕ್ರಮ ಅಗತ್ಯ
ಕರಾವಳಿಯ ಶೇಂಗಾವು ರುಚಿ ಹಾಗೂ ಗುಣಮಟ್ಟದಲ್ಲಿ ಖ್ಯಾತಿ ಪಡೆದಿದೆ. ಸ್ಥಳೀಯವಾಗಿ ಶೇಂಗಾ ಬೆಳೆಗಾರರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ/ ಕೃಷಿ ಇಲಾಖೆ ಒಂದಿಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು.
-ಶ್ರೀಗಣೇಶ್‌ ಗಾಣಿಗ, ಶೇಂಗಾ ಸಂಸ್ಕರಣ ಘಟಕದ ಮಾಲಕ

ಪ್ರಧಾನ ಬೆಳೆಯಾಗಿಲ್ಲ
ಗುಣಮಟ್ಟದ ಶೇಂಗಾ ಬೀಜವನ್ನು ಕೃಷಿ ಸಂಪರ್ಕ ಕೇಂದ್ರದಿಂದ ಸಬ್ಸಿಡಿ ದರದಲ್ಲಿ ಪ್ರತಿ ವರ್ಷ ನೀಡುತ್ತಾ ಬಂದಿದ್ದೇವೆ. ಜಿಲ್ಲೆಯ ಕೋಟ, ಕುಂದಾಪುರ, ಬೈಂದೂರು ಭಾಗದಲ್ಲಿ ಸುಮಾರು 2,000 ಎಕರೆಯಲ್ಲಿ ಶೇಂಗಾ ಬಿತ್ತನೆಯಾಗುತ್ತದೆ. ಪ್ರಧಾನ ಬೆಳೆಯಾಗಿ ಇದನ್ನು ಬೆಳೆಯುತ್ತಿಲ್ಲ.
– ಸತೀಶ್‌, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.