ಮಧುವಣಗಿತ್ತಿಯಂತೆ ಸಿಂಗಾರಗೊಂಡ “ಗುಲ್‌ಮೊಹರ್’
Team Udayavani, May 24, 2023, 3:55 PM IST
ಉಡುಪಿ: ರಂಗು ರಂಗಿನ ತರಹೇವಾರಿ ಹೂ ಗಳ ಸೌಂದರ್ಯ ನೋಡುವುದು ವಿಶಿಷ್ಟ ಆನಂದ. ಇಂತಹ ನಿಸರ್ಗದ ಸೊಬಗನ್ನು ಉಡುಪಿಯಲ್ಲೂ ಕಾಣಬಹುದು. ನಗರದ ಅಂದವನ್ನು ಗುಲ್‌ಮೊಹರ್ ಹೂಗಳು ಹೆಚ್ಚಿಸಿವೆ. ಎಪ್ರಿಲ್, ಮೇ ತಿಂಗಳಲ್ಲಿ ಈ ಪುಷ್ಪವು ಹೆಚ್ಚಾಗಿ ಕಾಣಸಿಗುತ್ತದೆ.
ಮೇ ತಿಂಗಳು ಬಂತೆಂದರೆ ಎಲ್ಲೆಲ್ಲೂ ಗುಲ್‌ಮೊಹರ್ ಹೂವುಗಳದ್ದೇ ದರ್ಬಾರ್. ಗುಲ್‌ಮೊಹರ್‌ನ ಬೆಡಗು, ಚಿತ್ತಾಕರ್ಷಕ ಸೌಂದರ್ಯ ಈ ಸುಡು ಬಿಸಿಲಿನ ದಾಹವನ್ನು ತಣಿಸುವಂತೆ ಮಾಡುತ್ತದೆ.
ಗುಲ್‌ಮೊಹರ್ ಹೂವಿನ ಭರಾಟೆ ನಗ ರದ ಸೌಂದರ್ಯದೊಂದಿಗೆ ಸೊಬಗು ನೀಡು ತ್ತಿವೆ. ನಗರದ ಅಜ್ಜರಕಾಡು, ಮಣಿಪಾಲ ಸಹಿತ ಮೊದಲಾದ ಕಡೆಗಳಲ್ಲಿ ಹೂವುಗಳು ಕಾಣ ಸಿಗುತ್ತದೆ. ರಸ್ತೆಯ ಇಕ್ಕೆಲ ಗ ಳಲ್ಲಿ ನೋಡುಗರ ಕಣ್ಣಿಗೆ ಮುದ ನೀಡಿ, ಮಧು ವಣ ಗಿತ್ತಿಯಂತೆ ಸಿಂಗಾರಗೊಂಡು ಸ್ವಾಗತ ಕೋರುತ್ತಿವೆ. ಮರದ ತುಂಬಾ ಕೆಂಪನೆಯ ಶೃಂಗಾರ. ಕೆಂಬಣ್ಣದ ಹೂವನ್ನು ಮುಡಿ ತುಂಬಾ ಹೊತ್ತು ನಿಂತಿರುವ ಗುಲ್‌ಮೊಹರ್ ಮರಗಳು ಇನ್ನಿಲ್ಲದಂತೆ ಬೀಗುತ್ತಿವೆ. ಈ ಹಿಂದೆ ರಸ್ತೆ ಬದಿಯಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿತ್ತು. ನಗರ, ಗ್ರಾಮೀಣ ಭಾಗದ ರಸ್ತೆಗಳನ್ನು ಅಗಲಗೊಳಿಸುವ ಭರಾಟೆಯಲ್ಲಿ ಹಲವಾರು ಮರಗಳು ಬಲಿಯಾಗಿವೆ.
ಮದುವೆ ಮನೆ ಚಪ್ಪರದಲ್ಲಿ…
ಹಿಂದೆಲ್ಲ ಮೇ ತಿಂಗಳಲ್ಲಿ ಮದುವೆಗಳು ಹೆಚ್ಚಾಗಿ ನಡೆಯುವುದರಿಂದ ಗ್ರಾಮೀಣ ಭಾಗ ಗಳಲ್ಲಿ ಮದುವೆ ಮನೆಯ ಚಪ್ಪರದ ಸೌಂದ ರ್ಯವನ್ನು ಹೆಚ್ಚಿಸಲು ಈ ಹೂವುಗಳನ್ನು ಹಾಕ ಲಾಗುತ್ತಿತ್ತು. ಹಿಂದೆ ಈ ಹೂಗಳ ಬಳಕೆಯೂ ಕೂ ಡ ಹೆಚ್ಚಾಗಿತ್ತು. ಈಗೆಲ್ಲ ಮದುವೆಗಳು ಹೊಟೇಲ್, ಕಲ್ಯಾ ಣ ಮಂಟಪಗಳ ಗೋಡೆಗಳ ಮಧ್ಯೆ ಸೇರಿ ಕೊಂಡು ಗುಲ್‌ಮೊಹರ್ ಬಣ್ಣದಿಂದ ವಂಚಿತವಾಗಿದೆ. ಗುಲ್‌ಮೊಹರ್ ಹಿಂದಿನ ಮಕ್ಕಳಿಗೆ ಅತ್ಯಂತ ಪ್ರೀತಿ ಪಾತ್ರವಾದದ್ದು. ಗ್ರಾಮೀಣ ಮಕ್ಕಳು ಬೇಸಗೆ ರಜೆಯಲ್ಲಂತೂ ಈ ಮರದಡಿ ದಿನ ಕಳೆಯುತ್ತಿದ್ದರು.
ಹಲವು ಹೆಸರುಗಳು
ಗುಲ್‌ಮೊಹರ್ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಹೂ ಬಿಡುವುದರಿಂದ ಇದನ್ನು ಮೇ ಫ್ಲವರ್ ಎಂದೂ ಕರೆಯುತ್ತಾರೆ. ಕೆಂಬಣ್ಣದಿಂದ ಆಗಸಕ್ಕೆ ಕಿಚ್ಚು ಹತ್ತಿಸಿದಂತೆ ಕಾಣುವುದರಿಂದ “ಫ್ಲೇಮ್ ಆಫ್ ದಿ ಫಾರೆಸ್ಟ್'(ಕಾಡಿನ ಕಿಚ್ಚು) ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಕತ್ತಿಕಾಯಿ ಮರ, ಕೆನ್ನಕೇಸರಿ, ಕೆಂಪು ತುರಾಯಿ, ದೊಡ್ಡ ರತ್ನಗಂಧಿ ಇತ್ಯಾದಿ ಹೆಸರುಗಳಿವೆ.
(ಚಿತ್ರ: ಆಸ್ಟ್ರೋಮೋಹನ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.