ಕೊಚ್ಚಿ ಹೋಗಲು ಸಿದ್ಧವಾಗಿದೆ ಮೋರಿ!
ಓಂತಿಬೆಟ್ಟು: ಅನುದಾನ ದೊರೆತರೂ ನಿವಾರಣೆಯಾಗದ ಸಮಸ್ಯೆ
Team Udayavani, Jun 5, 2020, 5:19 AM IST
ಉಡುಪಿ: ಕೊಡಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅಂಜಾರು, ಮಾಂಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡ ಅಲ್ಪ ಅವಧಿಯಲ್ಲಿ ರಸ್ತೆಗೆ ಹಾಕಿದ ಮೋರಿ ಹಾಗೂ ರಸ್ತೆಯ ಒಂದು ಬದಿ ಜರಿದಿದೆ. ಮಳೆಗೆ ಲಕ್ಷ ರೂ. ವೆಚ್ಚದ ಕಾಮಗಾರಿ ಇಲ್ಲಿ ಮಳೆ ನೀರು ಪಾಲಾಗುತ್ತಿದೆ. ಅನುದಾನ ದೊರೆತರೂ ಪೂರ್ತಿ ಸಮಸ್ಯೆ ನಿವಾರಣೆಯಾಗಿಲ್ಲ.
ಅಂಜಾರು, ಮಾಂಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಕಳೆದ 6 ವರ್ಷಗಳಿಂದ ರಸ್ತೆ ಅಭಿವೃದ್ಧಿಗಳ ಬೇಡಿಕೆ ಇಡಲಾಗಿತ್ತು. ಕೊನೆಗೂ ಸ್ಥಳೀಯರ ಬೇಡಿಕೆಯಂತೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ 10 ಲಕ್ಷ ರೂ. ಅನುದಾನ ಒದಗಿಸಿದ್ದರು.
ಓಂತಿಬೆಟ್ಟು ಶಾಲೆ ಸಮೀಪ ದುರ್ಗಾ ಕಲ್ಯಾಣ ಮಂಟಪದ ಬಳಿಯಿಂದ ಜಬ್ಬ ಮೇಸ್ತ್ರಿಯವರ ಮನೆ ತನಕ ಸುಮಾರು 200 ಮೀ. ಗಳಷ್ಟು ದೂರದ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ರಸ್ತೆ ಆರಂಭದ ಸ್ಥಳದಲ್ಲಿ ಮೋರಿ ಅಳವಡಿಕೆ ಕಾಮಗಾರಿ ನಡೆದಿತ್ತು. ಕಾಮಗಾರಿ ಎರಡು ತಿಂಗಳ ಹಿಂದೆ ಪೂರ್ಣಗೊಂಡು ಮಾರ್ಚ್ ತಿಂಗಳಲ್ಲಿ ಶಾಸಕರು ರಸ್ತೆಯನ್ನು ಉದ್ಘಾಟಿಸಿದ್ದರು.
ಸಮಸ್ಯೆ ಏನು?
ರಸ್ತೆ ಕಾಮಗಾರಿ ಆರಂಭಗೊಂಡ ಸ್ಥಳದಲ್ಲಿ ರಸ್ತೆಗೆ ಅಡ್ಡಲಾಗಿ ಮೋರಿ ಹಾಕಲಾಗಿದೆ. ಈ ಜಾಗ ಅಗಲ ಕಿರಿದಾಗಿದ್ದು, ತಗ್ಗು ಪ್ರದೇಶದಲ್ಲಿದೆ. ಇಲ್ಲಿ ಮೂರು ಮೋರಿ ಅಳವಡಿಸುವ ಬದಲು ಎರಡು ಮೋರಿ ಮಾತ್ರ ಹಾಕಲಾಗಿದೆ.
ಬೀದಿ ದೀಪಕ್ಕೂ ಬೇಡಿಕೆ
ರಸ್ತೆಯಲ್ಲಿ ರಾತ್ರಿ ಸಂಚರಿಸುವುದು ಅಪಾಯಕಾರಿ. ಈ ರಸ್ತೆಗೆ ಬೀದಿ ದೀಪ ಅಳವಡಿಸುವಂತೆ ಸ್ಥಳೀಯರು ಗ್ರಾ.ಪಂ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಹೆಚ್ಚಿನ ಅನುದಾನದ ಆವಶ್ಯಕತೆ
ಸಂಬಂಧಪಟ್ಟಂತೆ ಕಾಂಕ್ರೀಟ್ ರಸ್ತೆ ಉದ್ದವನ್ನು ಕಡಿಮೆಗೊಳಿಸದೆ ಎಲ್ಲ ಹಣವನ್ನು ಅದಕ್ಕೆ ಬಳಸಲಾಗಿದೆ. “ಯೂ” ಆಕೃತಿಯಲ್ಲಿ ಚರಂಡಿ ನಿರ್ಮಿಸಲು ಹೆಚ್ಚಿನ ಅನುದಾನದ ಆವಶ್ಯಕತೆಯಿರುತ್ತದೆ. ಅನುದಾನ ಸಿಕ್ಕಿದರೆ ಅದನ್ನು ಮಾಡಲು ಅಭ್ಯಂತರವಿಲ್ಲ ಎಂದು ಪಿಡಬ್ಲ್ಯುಡಿ ಎಂಜಿನಿಯರ್ ಸೋಮನಾಥ ಎನ್. ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.