ಬಂಗಾಲಕೊಲ್ಲಿ ವಾಯುಭಾರ ಕುಸಿತ: ಕರಾವಳಿಯಾದ್ಯಂತ ಸಿಡಿಲು, ಮಳೆ
Team Udayavani, Jan 6, 2021, 10:32 PM IST
ಮಂಗಳೂರು/ಉಡುಪಿ: ಬಂಗಾಲಕೊಲ್ಲಿ ಹಾಗೂ ಅರಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಬುಧವಾರವೂ ಸಿಡಿಲು ಸಹಿತ ಮಳೆಯಾಗಿದೆ. ಕಾಸರಗೋಡಿನ ಕೆಲವು ಪ್ರದೇಶಗಳಲ್ಲೂ ರಾತ್ರಿ ಮಳೆ ಸುರಿದಿದೆ.
ಚಾರ್ಮಾಡಿ, ಮುಂಡಾಜೆ, ಶಿಬಾಜೆ, ಗುರುವಾಯನಕೆರೆ, ಧರ್ಮಸ್ಥಳ, ಶಿಶಿಲ, ಅರಸಿನಮಕ್ಕಿ, ಮಡಂತ್ಯಾರು, ಮದ್ದಡ್ಕ, ಬಂಟ್ವಾಳ, ಪುತ್ತೂರು, ಉಪ್ಪಿನಂಗಡಿ, ಕಲ್ಲೇರಿ, ಕರಾಯ, ಸುಬ್ರಹ್ಮಣ್ಯ, ಸುಳ್ಯ, ಕೊಮ್ಮಮೊಗ್ರು, ಏನೆಕಲ್ಲು, ನೂಜಿಬಾಳ್ತಿಲ, ಬಿಳಿಮಲೆ, ಹರಿಹರ ಪಳ್ಳತ್ತಡ್ಕ, ಕಡಬ, ಸುಬ್ರಹ್ಮಣ್ಯ ಸಹಿತ ಸೇರಿದಂತೆ ಕರಾವಳಿ ಭಾಗದ ಹಲವೆಡೆ ಉತ್ತಮ ಮಳೆಯಾಗಿದೆ. ಮಂಗಳೂರು ನಗರದ ಕೆಲವೆಡೆ ರಾತ್ರಿ ವೇಳೆ ಸಾಧಾರಣ ಮಳೆಯಾಗಿದೆ.
ಉಡುಪಿ: ಉತ್ತಮ ಮಳೆ
ಕಾರ್ಕಳ, ಉಡುಪಿ,ಕಾಪು, ಬ್ರಹ್ಮಾವರ, ಕೋಟ, ಹೆಬ್ರಿ, ಕುಂದಾಪುರಕ್ಕೆ ಸೇರಿದ ವಿವಿಧ ಭಾಗದಲ್ಲಿ ಮಳೆಯಾಗಿದೆ. ಮಳೆಯ ನಿರೀಕ್ಷೆಯಲ್ಲಿ ಇರದ ಸಾರ್ವಜನಿಕರು ಸಂಜೆ ವೇಳೆಯಲ್ಲಿ ಮನೆಗೆ ಹೋಗಲು ಪರದಾಡಿದ ದೃಶ್ಯ ಉಡುಪಿ-ಮಣಿಪಾಲದಲ್ಲಿ ಕಂಡು ಬಂತು.
ಕಾರ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದು ತಾಸಿಗೂ ಅಧಿಕ ಹೊತ್ತು ಮಳೆಯಾಗಿದೆ. ರಸ್ತೆಯಲ್ಲಿ ನೀರು ಹರಿದು ಹೋಗುವಷ್ಟು ಮಳೆಯಾಗಿತ್ತು. ದಿಢೀರನೆ ಸುರಿದ ಮಳೆಗೆ ಜನಜೀವನ ಕೆಲ ಹೊತ್ತು ಅಸ್ತವ್ಯಸ್ತಗೊಂಡಿತ್ತು. ನಗರವಲ್ಲದೆ ನಕ್ರೆ, ಸಾಣುರು, ನಿಟ್ಟೆ, ಮಿಯಾರು, ಬಜಗೋಳಿ, ಮಾಳ, ಈದು, ತೆಳ್ಳಾರು,ಹಿರ್ಗಾನ, ಅಜೆಕಾರು, ಬೈಲೂರು ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗಿತ್ತು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಮಳೆ ಬಂದಿದ್ದು ಅಡಿಕೆ ಕೃಷಿಕರಿಗೆ ಸಂಕಷ್ಟ ಉಂಟಾಗಿದೆ. ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ ಮಳೆಯಿಂದ ಹಾನಿಯಾಗುವಂತಾಗಿದೆ. ಕುಂದಾಪುರ ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿದೆ. ಕುಂದಾಪುರ ನಗರ, ಬಸ್ರೂರು, ತೆಕ್ಕಟ್ಟೆ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ ಸುತ್ತಮುತ್ತ ಸಾಧಾರಣ ಮಳೆಯಾದರೆ, ಸಿದ್ದಾಪುರ,ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರನಾರಾಯಣ, ಗೋಳಿಯಂಗಡಿ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಉಳ್ಳೂರು 74 ಪರಿಸರದಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ.
ಎರಡು ದಿನ ಮಳೆ ಸಾಧ್ಯತೆ
ಪೂರ್ವದಿಕ್ಕಿನಿಂದ ಗಾಳಿ ಬೀಸುವ ಕಾರಣದಿಂದಾಗಿ ಚಳಿಗಾಲದಲ್ಲಿಯೂ ಮಳೆ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.