ಕೋಡಿ ಕ್ರಿಕೆಟರ್ನಿಂದ ಹೆಜಮಾಡಿ ಬೀಚ್ ಸ್ವತ್ಛತೆ
Team Udayavani, Apr 8, 2019, 6:30 AM IST
ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ಕಳೆದ ಹಲವು ವರ್ಷ ಗಳಿಂದ ಸಮಾಜಮುಖೀ ಕಾರ್ಯಗಳನ್ನೆಸಗು ತ್ತಿರುವ ಹೆಜಮಾಡಿ ಕೋಡಿಯ ಕೋಡಿ ಕ್ರಿಕೆಟರ್ ಸದಸ್ಯರು ಹೆಜಮಾಡಿಯ ಯಾರ್ಡ್‌ನಿಂದ ದಕ್ಷಿಣಕ್ಕೆ ಸುಮಾರು 2 ಕಿ.ಮೀ.ನಷ್ಟು ಬೀಚ್‌ನ ಸ್ವತ್ಛತಾ ಕಾರ್ಯ ನಡೆಸುವ ಮೂಲಕ ಗಮನ ಸೆಳೆದರು.
ಹೆಜಮಾಡಿಯಲ್ಲಿ ನಿರಂತರ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಅರ್ಹ ಫಲಾನುಭವಗಳಿಗೆ ಮನೆ ಕಟ್ಟಲು, ಮದುವೆಗಾಗಿ ಆರ್ಥಿಕ ನೆರವು, ಗ್ರಾಮ ವ್ಯಾಪ್ತಿಯ 10ನೇ ತರಗತಿಯ ಪ್ರತಿಭಾನ್ವಿತರಿಗೆ 10 ಸಾವಿರ ರೂ. ಬಹುಮಾನ, ಆಂಗ್ಲ ಮಾಧ್ಯಮ ಶಾಲೆಗೆ ನೆರವು,ಹಿರಿಯ ನಾಗರಿಕರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಉಚಿತ ಪ್ರವಾಸ ಆಯೋಜನೆ, ರಸ್ತೆ ದಾರಿದೀಪ ಅಳವಡಿಕೆ ಇತ್ಯಾದಿ ಸಮಾಜಮುಖೀ ಕಾರ್ಯಗಳಿಂದ ಕೋಡಿ ಕ್ರಿಕೆಟರ್ ಪ್ರಸಿದ್ದಿ ಪಡೆದಿದೆ.
ಹೆಜಮಾಡಿಯ ಬೀಚ್‌ನಲ್ಲಿ ಅತಿ ಹೆಚ್ಚು ತ್ಯಾಜ್ಯ ಸಂಗ್ರಹಗೊಂಡಿದ್ದು, ಕೋಡಿ ಕ್ರಿಕೆಟರ್ ಸದಸ್ಯರು 3 ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಗ್ರಾ.ಪಂ. ಹಾಗೂ ಗ್ರಾಮಸ್ಥರ ಗಮನ ಸೆಳೆದಿದ್ದಾರೆ.
ಈ ಸಂದರ್ಭ ಮಾತನಾಡಿದ ಕೋಡಿ ಕ್ರಿಕೆಟರ್ ಸಂಚಾಲಕ ಸತೀಶ್ ಕೋಟ್ಯಾನ್, ಹೆಜಮಾಡಿಯ ಕರಾವಳಿ ತೀರದಲ್ಲಿ ಎಣಿಕೆಗೂ ಮೀರಿ ತ್ಯಾಜ್ಯ ಸಂಗ್ರಹವಾಗಿದೆ. ಸ್ಥಳೀಯಾಡಳಿತ ಸೂಕ್ತವಾಗಿ ಸ್ಪಂದಿಸಿದಲ್ಲಿ ಮತ್ತಷ್ಟು ಸ್ವತ್ಛತಾ ಅಭಿಯಾನವನ್ನು ಕೋಡಿ ಕ್ರಿಕೆಟರ್ ಮೂಲಕ ಹಮ್ಮಿಕೊಳ್ಳಲಿದ್ದೇವೆ ಎಂದಿದ್ದಾರೆ.
ಕೋಡಿ ಕ್ರಿಕೆಟರ್ ಅಧ್ಯಕ್ಷ ಕಿರಣ್ ಪುತ್ರನ್, ಭೂಪಾಲ್ ಮೆಂಡನ್ ದುಬಾೖ, ಗಿರೀಶ್ ಮುಂಬಯಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.