ಮರಳು ಸಮಸ್ಯೆಗೆ ಮಂಗಳೂರಿನಲ್ಲಿ ಜ.7ಕ್ಕೆ ಹೈ-ಲೆವೆಲ್ ಕಮಿಟಿ ಮೀಟಿಂಗ್: ಸಿ.ಸಿ ಪಾಟಿಲ್
Team Udayavani, Jan 6, 2021, 12:53 PM IST
ಕಾರ್ಕಳ: ಕರಾವಳಿ ಭಾಗದ ಎರಡು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು.ಜ.7ರಂದು ಮಂಗಳೂರಿನಲ್ಲಿ ಕರಾವಳಿ ಭಾಗದ ಶಾಸಕರು ಮತ್ತು ಹೈ ಲೆವೆಲ್ ಅಧಿಕಾರಿಗಳ ಸಭೆಯಲ್ಲಿ ಕರಾವಳಿ ಜಿಲ್ಲೆಯ ಮರಳು ಸಮಸ್ಯೆಗೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಗಣಿ ಮತ್ತು ಭೂ ಗರ್ಭ ವಿಜ್ಞಾನ ಸಚಿವ ಸಿ.ಸಿ ಪಾಟೀಲ್ ಹೇಳಿದರು.
ಬಿಜೆಪಿ ಕಾರ್ಕಳ ಇದರ ವತಿಯಿಂದ ಗ್ರಾ.ಪಂ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗೆ ಕಾರಣಿಕರಾದ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಶ್ರಿ ಮಂಜುನಾಥ ಪೈ ಸಭಾಂಗಣದಲ್ಲಿ ಜ.6ರಂದು ನಡೆದ ಅಭಿನಂದನಾ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ ಕಾಂಗ್ರೆಸ್ ಗೆ ಅನುಮಾನದ ಅಜ್ಞಾನವಿದೆ. ಸೈನಿಕರು. ನ್ಯಾಯಲಯ, ಇಎಂವಿ, ಪೊಲೀಸರು. ಆಶಾ ಕಾರ್ಯಕರ್ತೆಯರು ಕೊನೆಗೆ ಕೊವಿಡ್ ಲಸಿಕೆ ಮೇಲೂ ಅನುಮಾನ ಪಡುವ ಕಾಂಗ್ರೆಸ್ ನಾಯಕರಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ದೂರದಿಂದಲೇ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ : ಅಭಿಮಾನಿಗಳಿಗೆ ಯಶ್ ಮನವಿ
ಸಚಿವರಾಗಲು ಸುನಿಲ್ ಆರ್ಹರು
ಕಾರ್ಕಳ ಅಭಿವ್ರದ್ದಿಯಲ್ಲಿ ಸಾಧನೆಗೈಯುವ ಮೂಲಕ ಗ್ರಾ.ಪಂ ನಲ್ಲೂ ಅಭೂತಪೂರ್ವ ಸಾಧನೆಯ ಹಿಂದೆ ಶಾಸಕ ಸುನಿಲ್ ಕುಮಾರ್ ಅಭಿವ್ರದ್ದಿಯ ಕೊಡುಗೆಯಿದ್ದು ಸಚಿವರಾಗಲು ಸುನಿಲ್ ಕುಮಾರ್ ಶಕ್ತರು ಎಂದು ಸಚಿವ ಸಿ.ಸಿ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಷ ನೀಡಿ ನನ್ನ ಹತ್ಯೆಗೆ ಯತ್ನಿಸಿದ್ರು…ಇಸ್ರೋ ವಿಜ್ಞಾನಿ ಮಿಶ್ರಾ ಸ್ಫೋಟಕ ಹೇಳಿಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.