Hiriydaka: ಹಳೆ ಕಟ್ಟಡಗಳ ತೆರವಿಗೆ ದಿನ ನಿಗದಿ

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಇತಿಹಾಸದ ಪುಟ ಸೇರಲಿವೆ ಹಲವು ಪ್ರಮುಖ ನಿರ್ಮಾಣಗಳು; ಸೆ. 28ರೊಳಗೆ ಅಂಗಡಿ ಬಿಡಲು ಪಂಚಾಯತ್‌ ಸೂಚನೆ; ಸೆ. 30ರಿಂದ ಕಟ್ಟಡಗಳ ತೆರವು ಕಾರ್ಯಾಚರಣೆ

Team Udayavani, Sep 22, 2024, 6:11 PM IST

11(1)

ಹಿರಿಯಡಕ: ರಾಷ್ಟ್ರೀಯ ಹೆದ್ದಾರಿ 169ಎ ವಿಸ್ತರಣೆಗಾಗಿ ಹಿರಿಯಡಕ ಪೇಟೆಯ ಹಲವು ಹಳೆ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನ ನಿಗದಿಯಾಗಿದೆ. ಇದರೊಂದಿಗೆ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದ ವಿದ್ಯಮಾನ ನಿವಾಗುವ ಕಾಲ ಸನ್ನಿಹಿತವಾಗಿವೆ.

ಹಿರಿಯಡಕ ಪೇಟೆಯ ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್‌ ಹಲವು ವರ್ಷಗಳ ಹಿಂದೆ ಯೋನೆ ರೂಪಿಸಿತ್ತು. ಆದರೆ ಹಲವಾರು ಕಾರಣಗಳಿಂದ ಯೋನೆಗೆ ತಡೆಯಾಗಿತ್ತು. ಇದೀಗ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅವುಗಳನ್ನು ತೆರವು ಮಾಡಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಇಲ್ಲಿನ ಬಹುತೇಕ ಹಳೆಕಟ್ಟಡಗಳು ಬೊಮ್ಮರಬೆಟ್ಟು ಗ್ರಾ.ಪಂ. ಅಧೀನದಲ್ಲಿವೆ. ಅಂಗಡಿ ಬಾಡಿಗೆದಾರರ ಕರಾರು ಮುಗಿದು ಒಂದು ತಿಂಗಳೇ ಕಳೆದಿದೆ. ಹೊಸ ಕರಾರು ಆಗಿಲ್ಲ. ಈ ತಿಂಗಳ 28ರೊಳಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ವ್ಯಾಪಾರಿಗಳಿಗೆ ಪಂಚಾಯತ್‌ ಸೂಚನೆ ನೀಡಿದೆ. ಸೆ. 29ರಂದು ಬಾಕಿ ಲೆಕ್ಕಾಚಾರಗಳನ್ನು ಚುಕ್ತಗೊಳಿಸಬೇಕು. ಸೆ. 30ರಿಂದ ಕಟ್ಟಡಗಳ ತೆರವು ಕಾರ್ಯಾ ಚರಣೆ ನಡೆಯಲಿದೆ ಎಂದು ಪಂಚಾಯತ್‌ ಮೂಲದಿಂದ ತಿಳಿದು ಬಂದಿದೆ. ರಾಜ್ಯ ಸರಕಾರವು ಕಟ್ಟಡ ತೆರವು ಮಾಡಿ ರಸ್ತೆಗೆ ಜಾಗ ಬಿಟ್ಟುಕೊಡುವಂತೆ ಪಂಚಾಯತ್‌ಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ರುಗಲಿದೆ.

ನಿಜವೆಂದರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದಾಗಲೇ ಕಟ್ಟಡ ತೆರವಿನ ಮಾತು ಕೇಳಿಬಂದಿತ್ತು. ಈ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಹೆಚ್ಚಿನ ಜಾಗ ದೇವರ ಹೆಸರಲ್ಲಿ
ಹಿರಿಯಡಕ ಪೇಟೆಯ ಹೆಚ್ಚಿನ ಕಟ್ಟಡಗಳು ಶತಮಾನ ಕಂಡಿವೆ. ಪೇಟೆ ವ್ಯಾಪ್ತಿಯ ಹೆಚ್ಚಿನ ಜಾಗವು ಶ್ರೀ ವೀರಭದ್ರ ದೇವರ ಹೆಸರಿನಲ್ಲಿವೆ. ಪಂಚಾಯತ್‌ ಅಧೀನದ ಕಟ್ಟಡಗಳು ಇರುವುದೂ ಇದೇ ಜಾಗದಲ್ಲಿ. ಈಗ ಇರುವ ಕಟ್ಟಡವನ್ನು ತೆರವು ಮಾಡಿದರೆ ಮುಂದಿನ ದಿನಗಳಲ್ಲಿ ಗ್ರಾ.ಪಂ.ಗೆ ಸ್ವಂತ ಕಟ್ಟಡ ನಿರ್ಮಿಸಲು ಜಾಗದ ಕೊರತೆ ಆಗಲಿದೆ, ಆದಾಯಕ್ಕೂ ಹೊಡೆತ ಬೀಳಲಿದೆ.

ನೋಟಿಸ್‌ ನೀಡಲಾಗಿದೆ.
ಸರಕಾರದ ಸುತ್ತೋಲೆಯ ಹಿನ್ನೆಲೆಯಲ್ಲಿ ಪಂಚಾಯತ್‌ ಅಧಿಧೀನದಲ್ಲಿರುವ ಕಟ್ಟಡದ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಕೈ ಜೋಡಿಸಬೇಕು.ಸ್ವ ಇಚ್ಛೆಯಿಂದ ಕಟ್ಟಡಗಳನ್ನು ತೆರವುಗೊಳಿಸಿ ಪಂಚಾಯತ್‌ತೆ ಸಹಕರಿಸಬೇಕು.
-ಶಕುಂತಳಾ ಶೆಟ್ಟಿ, ಅಧ್ಯಕ್ಷರು, ಬೊಮ್ಮರಬೆಟ್ಟು ಗ್ರಾ.ಪಂ.

ಹಿರಿಯಡಕ ಜಂಕ್ಷನ್‌ ಕಾಮಗಾರಿ ತತ್‌ಕ್ಷಣ ಪ್ರಾರಂಭ
ಈಗಾಗಲೇ ತ್ರೀಡಿ ನೋಟಿಫಿಕೇಶನ್‌ ಆಗಿರುವುದರಿಂದ ಗ್ರಾಮ ಪಂಚಾಯತ್‌ ಕಟ್ಟಡಗಳ ತೆರವು ಪ್ರಕ್ರಿಯೆಯ ಜೊತೆಗೆ ಉಳಿದ ಕಟ್ಟಡಗಳ ತೆರವು ಕಾಮಗಾರಿಯೂ ಕೂಡ ನಡೆಯಲಿದೆ ಎಂದು ಹೆದ್ದಾರಿ ಪ್ರಾದಿಕಾರದಿಂದ ಮಾಹಿತಿ ಲಭಿಸಿದೆ. ಜಾಗದ ಮಾಲಕರಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ಇಲ್ಲ. ಆದರೆ ಜಾಗ ಕಳೆದುಕೊಳ್ಳುವವರಿಗೆ ಜಾಗದ ಮಾಹಿತಿ ಮತ್ತು ಸಿಗುವ ಪರಿಹಾರದ ಹಣದ ಬಗ್ಗೆ ಮಾಹಿತಿಯನ್ನು ನೀಡುವ ತಿಳಿವಳಿಕೆ ಪತ್ರವನ್ನು ನೀಡಲಾ ಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ತಿಳಿಸಿದ್ದಾರೆ.

ಹೆದ್ದಾರಿ ಕಾಮಗಾರಿ ಎಷ್ಟಾಗಿದೆ, ಎಲ್ಲೆಲ್ಲಿ ಬಾಕಿ?
• ಮಲ್ಪೆಯಿಂದ ಮೊಳಕಾಲ್ಮುರ ವರೆಗಿನ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕರಾವಳಿ ಬೈಪಾಸ್‌ನಿಂದ ಪರ್ಕಳ ಹೈಸ್ಕೂಲ್‌ ತನಕ ಮೊದಲ ಹಂತದ ಕಾಮಗಾರಿ ಮುಗಿದಿದೆ. ಪರ್ಕಳದಲ್ಲಿ ಕಾಮಗಾರಿ ಬಾಕಿ ಇದೆ.
• ಪರ್ಕಳ ಹೈಸ್ಕೂಲಿನಿಂದ ಹೆಬ್ರಿ ವರೆಗಿನ 2ನೇ ಹಂತದ ಕಾಮಗಾರಿಯಲ್ಲಿ ಪರ್ಕಳ ಹೈಸ್ಕೂಲ್‌ನಿಂದ ಮದಗ ಶೇಡಿಗುಡ್ಡೆಯವರೆಗೆ ಅಗಲೀಕರಣ ಕೆಲಸ ಪೂರ್ತಿಯಾಗಿದೆ.
• ಓಂತಿಬೆಟ್ಟು ಶಾಲೆಯಿಂದ ಹಿರಿಯಡಕದವರೆಗೆ ಬಹುತೇಕ ಮುಗಿದಿದ್ದು, ಹಿರಿಯಡಕದ ಪೇಟೆಯ ಕೆಲಸ ನಡೆದರೆ ಪರ್ಕಳ ಹೈಸ್ಕೂಲಿನಿಂದ ಹಿರಿಯಡಕದವರೆಗೆ ಏಳು ಕಿಲೋಮೀಟರ್‌ ವಿಸ್ತರಣೆ ಕೆಲಸ ಮುಗಿದಂತಾಗುತ್ತದೆ.
• ಮದಗ, ಹಿರಿಯಡಕ ಪೆರ್ಡೂರು, ಶಿವಪುರಗಳಲ್ಲಿ ಕಾಮಗಾರಿ ನಡೆಯಬೇಕಿದೆ. ಈಗಾಗಲೇ ಮದಗ ವ್ಯಾಪ್ತಿಯಲ್ಲಿ ಕೆಲಸ ಪ್ರಾರಂಭವಾಗಿದೆ.
• ಪುತ್ತಿಗೆ ಸೇತುವೆ ಪೂರ್ಣವಾಗಿದೆ. ಶಿವಪುರ ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ.
• ಪೆರ್ಡೂರು ಪೇಟೆಯಲ್ಲಿ ದೇವಸ್ಥಾನದ ಮೂಲ ವಾಸ್ತುವಿಗೆ ಧಕ್ಕೆ ಬರೆದಂತೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡುವಂತೆ ಹೈಕೋರ್ಟ್‌ ಸೂಚಿಸಿದೆ.

-ದಿವಾಕರ ಹಿರಿಯಡಕ

ಟಾಪ್ ನ್ಯೂಸ್

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Nandini

Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

MP Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ

Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ

1-asasa

Lingayat ಪಂಚಮಸಾಲಿ 2A ಹೋರಾಟ: ವಕೀಲರ ಸಮಾವೇಶದಲ್ಲಿ 3 ನಿರ್ಣಯ ಅಂಗೀಕಾರ

mbಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಸಲ್ಲ: ಸಚಿವ ಎಂ.ಬಿ.ಪಾಟೀಲ್‌ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಸಲ್ಲ: ಸಚಿವ ಎಂ.ಬಿ.ಪಾಟೀಲ್‌

Minister MB Patil: ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಸಲ್ಲ

PSI Parshuram ಕುಟುಂಬಕ್ಕೆ ಪರಿಹಾರ ಕೊಡಿ: ಛಲವಾದಿ ಆಗ್ರಹ

PSI Parshuram ಕುಟುಂಬಕ್ಕೆ ಪರಿಹಾರ ಕೊಡಿ: ಛಲವಾದಿ ಆಗ್ರಹ

Rain: ಸೆ.23 ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ

Rain: ಸೆ.23 ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hiriydaka: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು

Court-1

Udupi: ಚೆಕ್‌ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ

12

Manipal: ಪಾರ್ಕಿಂಗ್‌ ತಾಣವಾಗುತ್ತಿರುವ ಬಸ್‌ ನಿಲ್ದಾಣಗಳು!

puttige

Puthige Swamiji; ಗೀತಾರ್ಥ ಚಿಂತನೆ 42: ಆನಂದಕ್ಕಾಗಿ ಕೆಲಸ, ಕೆಲಸದಲ್ಲಿ ಆನಂದ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4

Hiriydaka: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು

Court-1

Udupi: ಚೆಕ್‌ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Nandini

Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

MP Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ

Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.