ನಗರದಲ್ಲಿ ಜಲಪ್ರಳಯ: ಪ್ರಕೃತಿ ವಿಕೋಪ ಎದುರಿಸಲು ಉಡುಪಿ ಜಿಲ್ಲಾಡಳಿತ ಎಷ್ಟು ಸನ್ನದ್ಧ?
ಒಂದು ದಿನದ ಮಳೆಗೆ ಜಲಪ್ರಳಯ? ಕೃತಕ ನೆರೆಗೆ ಯಾರು ಕಾರಣ?
Team Udayavani, Sep 20, 2020, 2:05 PM IST
ಉಡುಪಿ: ರವಿವಾರ ವರುಣನ ಅರ್ಭಟಕ್ಕೆ ಉಡುಪಿ ಜಿಲ್ಲೆ ತತ್ತರಿಸಿ ಹೋಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಸಿದ್ಧತೆ ಕೊರತೆಯಿಂದಾಗಿ ಜನರು ಸರಿಯಾದ ಸಮಯಕ್ಕೆ ಸಹಾಯ ದೊರಕದೆ ಜನರು ಪರದಾಡಿದರು.
ನಗರದಲ್ಲಿ ಜಲಪ್ರಳಯ
ಉಡುಪಿಯಲ್ಲಿ 1982ರ ಬಳಿಕ ಇದೇ ಮೊದಲ ಬಾರಿ ಮಹಾಮಳೆಯಾಗಿದೆ. ಸುಮಾರು 50ರಿಂದ 70 ಅಸುಪಾಸಿನ ವರ್ಷದವರಿಗೆ ಇದರ ನೆನಪಿದೆ. ಆದರೆ ಆ ಸಂದರ್ಭದಲ್ಲಿ ಮಹಾಮಳೆಯಾದರೂ ಈ ಪ್ರಮಾಣದಲ್ಲಿ ಮಳೆಯ ನೀರು ಜಲಪ್ರಳಯದ ರೂಪವನ್ನು ಪಡೆದುಕೊಂಡಿರಲಿಲ್ಲ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.
ವಿಕೋಪ ಎದುರಿಸಲು ಸನ್ನದ್ಧಗೊಂಡಿಯೇ?
ಪ್ರಸ್ತುತ ಸಾಲಿನ ಮಳೆಗಾಲದಲ್ಲಿ ಸಂಭಾವ್ಯ ತುರ್ತು ಪರಿಸ್ಥಿತಿ ಎದುರಿಸಲು ಉಡುಪಿ ಜಿಲ್ಲೆ ಸನ್ನದ್ಧಗೊಂಡಿಯೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಇದಕ್ಕೆ ಕಾರಣ ನಗರ ಹಾಗೂ ತಾಲೂಕಿನಲ್ಲಿ ಸೂಕ್ತ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯದ ಹಿನ್ನಲೆಯಲ್ಲಿ ಜನರು ಭಯದಲ್ಲಿ ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಜಿಲ್ಲಾಡಳಿತ ಪ್ರಕೃತಿ ವಿಕೋಪ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು.
ಇದನ್ನೂ ಓದಿ: ಮಲ್ಪೆ: 3 ಬೋಟ್ ಮುಳುಗಡೆ, ಕಲ್ಲುಬಂಡೆಯ ಆಶ್ರಯ ಪಡೆದು ದಡ ಸೇರಿದ ಮೀನುಗಾರರು
ಇದನ್ನೂ ಓದಿ:ದಶಕದ ಮಳೆಗೆ ಬೆಚ್ಚಿದ ಕೃಷ್ಣನಗರಿ: ಕ್ರೇನ್, ದೋಣಿ ಬಳಸಿ ಜನರ ರಕ್ಷಣೆ, ಲಕ್ಷಾಂತರ ರೂ. ನಷ್ಟ
ಸಹಾಯವಾಣಿ ವ್ಯರ್ಥ
ನಗರಸಭೆ ಹಾಗೂ ಉಡುಪಿ ತಾಲೂಕಿನ ವಿವಿಧ ಪ್ರದೇಶದಲ್ಲಿ ರಾತ್ರಿ 11ರ ಬಳಿಕ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಮುಂಜಾನೆ 2.45 ವೇಳೆಗೆ ನೀರು ಸಾರ್ವಜನಿಕರ ಮನೆ ನುಗ್ಗಿ, ಪರಿಸ್ಥಿತಿಯನ್ನು ಕಂಗೆಡೆಸಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿದರೆ ‘ವಾಹನ ಹೊರಟಿದೆ ಶೀಘ್ರದಲ್ಲಿ ಬಂದು ನಿಮ್ಮನ್ನು ರಕ್ಷಿಸಲಿದೆ’ ಎಂದು ಸಹಾಯವಾಣಿಯ ಸಿಬಂದಿ ಉತ್ತರಿಸುತ್ತಿದ್ದರು. ಆದರೆ ಗಂಟೆಗಳು ಕಳೆದರೂ, ಸಹಾಯವಾಣಿ ನೆರವು ಮಾತ್ರ ಸಿಕ್ಕಿಲ್ಲ ಎಂದು ಉಪ್ಪೂರಿನ ನಿವಾಸಿ ರಂಜನ್ ಉದಯವಾಣಿಗೆ ತಿಳಿಸಿದ್ದಾಾರೆ.
ಇದನ್ನೂ ಓದಿ:ಉಡುಪಿಗೆ 250 ಜನರ ಎಸ್ ಡಿಆರ್ ಎಫ್ ತಂಡ, ಒಂದು ರಕ್ಷಣಾ ಹೆಲಿಕಾಪ್ಟರ್: ಬಸವರಾಜ ಬೊಮ್ಮಾಯಿ
ಸಿದ್ಧತೆ ಕೇವಲ ಬುರುಡೆಯೇ?
ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಗಮನಿಸಿದರೆ, ಮಾನ್ಸೂನ್ ಸಿದ್ಧತೆ ಎನ್ನುವುದು ಪತ್ರಿಕೆ ಪ್ರಕಟನೆ ಸೀಮಿತವೇ ಎನ್ನುವ ಅನುಮಾನ ಉಂಟಾಗುತ್ತಿದೆ. ಜಿಲ್ಲೆಯ 7 ತಹಶೀಲ್ದಾರ್ ನೇತೃತ್ವದಲ್ಲಿ ಮುಂಗಾರು ಪ್ರಾಕೃತಿಕ ವಿಕೋಪ ಎದುರಿಸಲು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಅಗತ್ಯವಿರುವ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತದೆ. ಗ್ರಾಮಸ್ಥರು ಹಾಗೂ ಪಿಡಿಒಗಳ ಜಂಟಿ ಸಭೆ ನಡೆಸಿ, ತುರ್ತು ಸ್ಪಂದನೆಗಾಗಿ ಗ್ರಾ.ಪಂ. ಮಟ್ಟದಲ್ಲಿ ಈಜುಗಾರರು, ದೋಣಿ, ಜೆಸಿಬಿ ಮಾಲಕರು, ಟಿಪ್ಪರ್, ಕ್ರೇನ್, ಸರಕು ಸಾಗಾಟದ ವಾಹನ, ಮರ ಕತ್ತರಿಸುವವರು ಸೇರಿ ಎಲ್ಲರ ನೇತೃತ್ವದಲ್ಲಿ ಸಮಿತಿ ರಚಿಸಿ ಸಿದ್ಧಗೊಂಡಿರಬೇಕು. ಆದರೆ ಈ ಬಾರಿ ಜಿಲ್ಲಾಡಳಿತ ಈ ಎಲ್ಲ ಸಿದ್ಧತೆ ಸಂಪೂರ್ಣವಾಗಿ ಮಾಡಿಕೊಂಡಿದ್ದರೆ, ಜನರು ಏಕೆ ಇಷ್ಟು ಪರದಾಡಬೇಕಾಯಿತು ಎಂಬ ಪ್ರಶ್ನೆ ಮೂಡುತ್ತಿದೆ.
ಉಪ್ಪೂರಿನಲ್ಲಿ ಮುಂಜಾನೆ 6ರ ಬಳಿಕ ನೀರಿನ ಪ್ರಮಾಣ ಭಾರೀ ಏರಿಕೆಯಾಗಿದೆ. ಈ ಬಗ್ಗೆ ಜಿಲ್ಲಾ ಸಹಾಯವಾಣಿಗೆ ಕರೆ ಮಾಡಿದರೂ 10ಗಂಟೆಯ ವರೆಗೂ ಯಾವುದೇ ರಕ್ಷಣಾ ಕಾರ್ಯ ನಡೆದಿಲ್ಲ. ಈ ಪ್ರದೇಶದಲ್ಲಿ ನೂರಾರು ಮನೆಗಳು ಜಲಾವೃತವಾಗಿತ್ತು ಎನ್ನುತ್ತಾರೆ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಉಪ್ಪೂೂರು ನಿವಾಸಿ ರಂಜನ್.
ಚಿತ್ರಗಳು: ಆಸ್ಟ್ರೋ ಮೋಹನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.