Udupi ಬನ್ನಂಜೆಯಲ್ಲಿ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆ ಉದ್ಘಾಟನೆ

Team Udayavani, Aug 25, 2023, 10:29 AM IST

3-jayalakshmi-silks

ಉಡುಪಿ: ರಾ.ಹೆ. 169ಎ ಸನಿಹದ ಬನ್ನಂಜೆಯಲ್ಲಿ ನಿರ್ಮಿಸಿರುವ ಸಮುಚ್ಚಯದಲ್ಲಿ ಜಯ ಲಕ್ಷ್ಮೀ ಸಿಲ್ಕ್ಸ್ ನ ಉದ್ಘಾಟನೆ ಗುರುವಾರ ನಡೆಯಿತು.

ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಎಂಡಿ ಮತ್ತು ಸಿಇಒ ಡಾ| ಮಹಾಬಲೇಶ್ವರ ಎಂ.ಎಸ್‌. ಉದ್ಘಾಟಿಸಿ ಮಾತನಾಡಿ, ಉಡುಪಿಯ ವರ್ಣಮಯ ಇತಿಹಾಸದೊಂದಿಗೆ ಹೆಸರಾಂತ ಜವುಳಿ ಮಳಿಗೆ ಜಯಲಕ್ಷ್ಮೀ ಸಿಲ್ಕ್ಸ್ ಸೇರಿಕೊಂಡು ಮತ್ತಷ್ಟು ಸುಂದರಗೊಳಿಸಿದೆ. ಉದ್ಯಮವೊಂದು ಯಶಸ್ವಿಗೊಂಡರೆ ಅದರೊಂದಿಗೆ ಊರು/ ನಗರ ಅಭಿವೃದ್ಧಿ ಹೊಂದುತ್ತದೆ. ಈ ಉದ್ಯಮವು ಜಯ ಸಾಧಿಸಿ, ಲಕ್ಷ್ಮೀಯನ್ನು ಒಲಿಸಿಕೊಂಡು ಯಶಸ್ವಿ ಯಾಗಲಿ ಎಂದು ಹಾರೈಸಿದರು.

ಪ್ರಥಮ ಅಂತಸ್ತಿನ ಸೀರೆ ವಿಭಾಗವನ್ನು ಉದ್ಘಾಟಿಸಿದ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌, ಸಿಬಂದಿಯ ನಗುಮೊಗದ ಸೇವೆಯೊಂದಿಗೆ ಉತ್ತಮ ಗುಣಮಟ್ಟದ ಬಟ್ಟೆಬರೆಗಳನ್ನು ಗ್ರಾಹಕರಿಗೆ ಒದಗಿಸಿದಾಗ ವಸ್ತ್ರೋದ್ಯಮ ಬೆಳವಣಿಗೆ ಕಾಣುತ್ತದೆ. ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

5ನೇ ಅಂತಸ್ತಿನ ಬ್ರ್ಯಾಂಡೆಡ್‌ ಮೆನ್ಸ್‌ ವೇರ್‌ ಉದ್ಘಾಟಿಸಿದ ಉದ್ಯಾವರ ಹಲೀಮಾ ಸಬ್ಜು ಆಡಿಟೋರಿಯಂನ ಹಾಜಿ ಅಬ್ದುಲ್‌ ಜಲೀಲ್‌ ಸಾಹೇಬ್‌, ನೆಲ ಅಂತಸ್ತಿನ ಹ್ಯಾಂಡ್‌ಲೂಮ್‌ ವಿಭಾಗ ಉದ್ಘಾಟಿಸಿದ ಮಾಂಡವಿ ಬಿಲ್ಡರ್ ನ ಎಂಡಿ ಜೆರ್ರಿ ವಿನ್ಸೆಂಟ್‌ ಡಯಾಸ್‌, 4ನೇ ಅಂತಸ್ತಿನ ಎತ್ನಿಕ್‌ ವೇರ್‌ ವಿಭಾಗ ಉದ್ಘಾಟಿಸಿದ ಕರ್ಣಾಟಕ ಬ್ಯಾಂಕ್‌ನ ಜಿಎಂ ರವಿಚಂದ್ರನ್‌ ಶುಭಾಶಂಸನೆಗೈದರು.

3ನೇ ಅಂತಸ್ತಿನ ಲೈಫ್ಸ್ಟೈಲ್‌ ವಿಭಾಗವನ್ನು ಎಸ್‌.ಪಿ. ಹಾಕೆ ಅಕ್ಷಯ ಮಚ್ಚೀಂದ್ರ, ಎತ್ನಿಕ್‌ವೇರ್‌, ಕಿಡ್ಸ್‌ ವಿಭಾಗವನ್ನು ಆನಂದ್‌ ಟ್ರಾವೆಲ್ಸ್‌ ನ ಮಾಲಕ ಎ.ಎಂ. ಡಿ’ಸೋಜಾ, ನಟರಾದ ದಯಾ ಶೆಟ್ಟಿ, ಹರೀಶ್‌, ಮೆನ್ಸ್‌ವೇರ್‌ ವಿವಿಧ ವಿಭಾಗವನ್ನು ಉದ್ಯಮಿ ವಾಸುದೇವ ಕಾಮತ್‌, ಲೆಕ್ಕಪರಿಶೋಧಕ ನವೀನ್‌ ನಾಯಕ್‌, ಗಾಗ್ರಾ ವಿಭಾಗವನ್ನು ನಟಿ ಅನ್ಶಾ ಉದ್ಘಾಟಿಸಿದರು.

ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌, ಶಾಸಕ ಯಶ್‌ಪಾಲ್‌ ಎ. ಸುವರ್ಣ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಕಾಂಚನ್‌ ಹ್ಯುಂಡೈ ಮಾಲಕ ಪ್ರಸಾದ್‌ರಾಜ್‌ ಕಾಂಚನ್‌, ಸಂಸ್ಥೆಯ ಮಾಲಕರಾದ ವೀರೇಂದ್ರ ಹೆಗ್ಡೆ, ರವೀಂದ್ರ ಹೆಗ್ಡೆ, ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ, ಅಪರ್ಣಾ ರವೀಂದ್ರ ಹೆಗ್ಡೆ, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು. ಶಾಲಿನಿ ಜಿ. ಶಂಕರ್‌ ಪ್ರಥಮ ಗ್ರಾಹಕಿಯಾಗಿ ರೇಷ್ಮೆ ಸೀರೆ ಖರೀದಿಸಿದರು.

ಕರ್ಣಾಟಕ ಬ್ಯಾಂಕ್‌ ವತಿಯಿಂದ ಸಂಸ್ಥೆಯ ಮಾಲಕರನ್ನು ಗೌರವಿಸಲಾಯಿತು. ಅವಿನಾಶ್‌ ಕಾಮತ್‌ ನಿರೂಪಿಸಿ, ವಂದಿಸಿದರು.

ಟೆಕ್ಸ್‌ಟೈಲ್ಸ್‌ ವ್ಯವಹಾರದಲ್ಲಿ 2ನೇ ಸ್ಥಾನ

2ನೇ ಅಂತಸ್ತಿನ ದುಬಾರಿ ಬೆಲೆಯ ಸೀರೆ ವಿಭಾಗ ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ದೇಶದ ವಿಜ್ಞಾನಿಗಳು ಚಂದ್ರಲೋಕವನ್ನು ಅವಲೋಕಿಸುವ ಅವಕಾಶವನ್ನು ಒದಗಿಸಿಕೊಟ್ಟರೆ, ಜಯಲಕ್ಷ್ಮೀ ಸಿಲ್ಕ್$Õನವರು ಉಡುಪಿಯ ಜನತೆಗೆ ಟೆಕ್ಸ್‌ಟೈಲ್ಸ್‌ನ ಅವಲೋಕನ ಮಾಡಿಸಿದ್ದಾರೆ. ಕ್ವಾಲಿಟಿ, ಗ್ಯಾರಂಟಿ, ಸರ್ವಿಸ್‌ ಸಮರ್ಪಕವಾಗಿದ್ದರೆ ಉದ್ಯಮ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಟೆಕ್ಸ್‌ಟೈಲ್ಸ್‌ ವ್ಯವಹಾರದಲ್ಲಿ 2ನೇ ಸ್ಥಾನ ಗಳಿಸಿದ ಸಂಸ್ಥೆ ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಗಳಿಸಲಿ. ಸಾವಿರಾರು ಜನರಿಗೆ ಉದ್ಯೋಗಾವಕಾಶ ನೀಡಿದ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ಟಾಪ್ ನ್ಯೂಸ್

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.