ಕೋವಿಡ್ ಕಾಲಘಟ್ಟದಲ್ಲಿ ಹೆಚ್ಚಿದ ಪ್ಲಾಸ್ಟಿಕ್ ತ್ಯಾಜ್ಯ
ನಿವಾರಣೆಗೆ ನಗರಸಭೆಯಿಂದ ಶತಪ್ರಯತ್ನ , ಗಾಂಧೀ ಜಯಂತಿಯಂದು ಜನಜಾಗೃತಿ
Team Udayavani, Oct 2, 2020, 5:45 AM IST
ಉಡುಪಿ: ನಿಷೇಧದ ಬಳಿಕ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಹಿಡಿತಕ್ಕೆ ಬಂದಿದ್ದರೂ, ಇದೀಗ ಕೊರೊನಾದಿಂದಾಗಿ ಗಣನೀಯವಾಗಿ ಏರಿಕೆಯಾಗಿದೆ. ಇದನ್ನು ಹತೋಟಿಗೆ ತರಲು ಅ. 2 ಗಾಂಧೀ ಜಯಂತಿಯಂದು ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ನಗರಸಭೆ ಆಯೋಜಿಸಿದೆ.
ನಗರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ಆದರೆ ಲಾಕ್‌ಡೌನ್ ಬಳಿಕ ನಗರದಲ್ಲಿ ಏಕಾಏಕಿಯಾಗಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿದೆ. ಕೋವಿಡ್ ಸಂದರ್ಭ “ಯೂಸ್ ಆ್ಯಂಡ್ ತ್ರೋ’ ಸಾಮಗ್ರಿ ಬಳಕೆ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ವಸ್ತುಗಳಲ್ಲೇ ಆಹಾರ ನೀಡುತ್ತಿರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯ ಏರಿಕೆಯಾಗಿದೆ ಎನ್ನಲಾಗಿದೆ.
ಏತನ್ಮಧ್ಯೆ ಅಲ್ಲಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ
ಇತರ ತ್ಯಾಜ್ಯಗಳನ್ನು ತುಂಬಿ ರಸ್ತೆ ಬದಿ ಎಸೆಯುವವರಿದ್ದು ಇವರ ಮೇಲೂ ಕಣ್ಗಾವಲು ಇರಿಸಲಾಗಿದೆ. ತಿಂಗಳಿಗೆ 28.35 ಮೆ. ಟನ್ ಪ್ಲಾಸ್ಟಿಕ್ ನಗರಸಭೆ ವ್ಯಾಪ್ತಿಯಲ್ಲಿ ಆಗಸ್ಟ್‌ನಲ್ಲಿ ಸುಮಾರು 68.98 ಮೆಟ್ರಿಕ್ ಟನ್ ಒಣ ತ್ಯಾಜ್ಯ, 130 ಮೆಟ್ರಿಕ್ ಟನ್ ಹಸಿ ತ್ಯಾಜ್ಯ, 3 ಮೆಟ್ರಿಕ್ ಟನ್ ಸ್ಯಾನಿಟರಿ ತ್ಯಾಜ್ಯ, 120 ಮೆಟ್ರಿಕ್ ಟನ್ ಮಿಶ್ರ ಕಸ , 4.2 ಮೆಟ್ರಿಕ್ ಟನ್ ಗ್ಲಾಸ್ ಹಾಗೂ ಇ ವೇಸ್ಟ್ ಸೇರಿದಂತೆ ಇತರ ಒಟ್ಟು 370 ಮೆಟ್ರಿಕ್ ಟನ್ ಕಸ ಕೇವಲ 17 ವಾರ್ಡ್‌ಗಳಲ್ಲಿ ಉತ್ಪತ್ತಿಯಾಗಿದೆ. ಅದರಲ್ಲಿ 28.35 ಮೆಟ್ರಿಕ್ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯವಿದೆ.
1.76 ಲ.ರೂ. ದಂಡ !
2019ರ ಎಪ್ರಿಲ್‌ನಿಂದ 2020ರ ಮಾರ್ಚ್ ಅಂತ್ಯದ ವರೆಗೆ ಮರುಬಳಕೆಯಾಗದ 39.9 ಟನ್ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗೆ ರವಾನಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಗೆ ರಾಷ್ಟ್ರೀಯ ಹಸುರು ಪೀಠವು 2019ರ ಆ.27ರಂದು ಆದೇಶ ಹೊರಡಿಸಿತ್ತು. ಇದರ ವಸ್ತುಗಳ ಮಾರಾಟ ಕಂಡುಬಂದರೆ ಮೊದಲ ಬಾರಿಗೆ 1,000 ರೂ., ಎರಡನೇ ಬಾರಿಗೆ 2,000 ರೂ. ದಂಡ ವಿಧಿಸಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿ ಉದ್ದಿಮೆ ಪರವಾನಿಗೆ ರದ್ದುಗೊಳಿಸುವ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ನಗರಸಭೆ ಅಧಿಕಾರಿಗಳು ಇಲ್ಲಿಯವರೆಗೆ ವಿವಿಧ ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿ, ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ, 1.76 ಲ.ರೂ. ದಂಡ ಸಂಗ್ರಹಿಸಿದ್ದಾರೆ.
ವಿವಿಧ ಜಾಗೃತಿ ಕಾರ್ಯಕ್ರಮ
ನಗರಸಭೆ ಪ್ಲಾಸ್ಟಿಕ್ ಬಳಕೆ ಯಿಂದಾಗುವ ತೊಂದರೆಗಳ ಕುರಿತು ಜನರಿಗೆ ವಿವಿಧ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ ಚಿಟಾ³ಡಿಯಲ್ಲಿ 855, ವಂಡಭಾಂಡೇಶ್ವರದಲ್ಲಿ 824 ಬಟ್ಟೆ ಚೀಲಗಳನ್ನು ವಿತರಿಸಲಾಗಿದೆ. ಅಧಿಕಾರಿಗಳು 244 ಅಂಗಡಿಗಳಿಗೆ ಭೇಟಿ ಅವರಲ್ಲಿ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದ್ದಾರೆ.
ದಿಢೀರ್ ಕಾರ್ಯಾಚರಣೆ ನಡೆಸಿ ದಂಡ
ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರ ವಹಿಸಲಾಗುತ್ತಿದೆ. ಕಾಲಕಾಲಕ್ಕೆ ಅಂಗಡಿಗಳ ಮೇಲೆ ದಿಢೀರ್ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗಿದೆ. ಅದರ ಹೊರತಾಗಿಯೂ ಮನೆಗಳಿಂದ ಬರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಅದನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳಹಿಸಲಾಗುತ್ತಿದೆ.
-ಸ್ನೇಹ, ಪರಿಸರ ಎಂಜಿನಿಯರ್, ಉಡುಪಿ ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.