ಹೆಚ್ಚುತ್ತಿರುವ ಬೈಕ್ ಅಪಘಾತಗಳು; ರಸ್ತೆಯಲ್ಲಿ ಮೀನಿನ ತ್ಯಾಜ್ಯ ನೀರು
Team Udayavani, Nov 1, 2022, 9:13 AM IST
ಮಲ್ಪೆ: ಕಳೆದ ಒಂದೂವರೆ ತಿಂಗಳಿನಿಂದ ಮಲ್ಪೆ ಸುತ್ತಮುತ್ತ ಮುಖ್ಯವಾಗಿ ಕಲ್ಮಾಡಿ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿವೆ. ಮೀನು ಸಾಗಾಟದ ಲಾರಿಗಳಿಂದ ಸೋರಿಕೆಯಾಗುತ್ತಿರುವ ತ್ಯಾಜ್ಯ ನೀರು ಅಪಘಾತಕ್ಕೆ ಕಾರಣವಾಗಿದ್ದು, ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಹೆಚ್ಚಾಗಿ ಬೆಳಗ್ಗಿನ ಜಾವದಲ್ಲಿ ಸಂಚರಿಸುವ ಮೀನಿನ ವಾಹನಗಳಿಂದ ಸುರಿಯುವ ನೀರಿನಲ್ಲಿ ಎಣ್ಣೆಯ ಅಂಶ ಇರುವುದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ಡಾಗಿ ಅಪ ಘಾತಗಳಾಗುತ್ತಿವೆ.
ಮಲ್ಪೆಯಲ್ಲಿರುವ ಎಲ್ಲ ವಾಹನಗಳಲ್ಲೂ ತ್ಯಾಜ್ಯ ನೀರು ಶೇಖರಣೆಗಾಗಿ ವ್ಯವಸ್ಥೆಗಳಿದ್ದರೂ ಹೆಚ್ಚಿನ ವಾಹನಗಳು ಅದರ ಗೇಟ್‌ವಾಲ್‌ಗಳನ್ನು ತೆರೆದಿಟ್ಟು ಮುಖ್ಯರಸ್ತೆ, ಸ್ಪೀಡ್ ಬ್ರೇಕರ್ ರಸ್ತೆಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ತ್ಯಾಜ್ಯನೀರನ್ನು ಹೊರಚೆಲ್ಲುತ್ತದೆ. ಕಳೆದ ಕೆಲವು ವಾರಗಳಿಂದ ಕಲ್ಮಾಡಿ ರಸ್ತೆಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದೆ.
ಮೀನು ಸಾಗಿಸುವ ವಾಹನಗಳಿಗೆ ನೀರು ರಸ್ತೆಯಲ್ಲಿ ಚೆಲ್ಲದಂತೆ ಕೆಲವೊಂದು ನಿಯಮಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ ಎಲ್ಲರೂ ನಿಯಮಗಳನ್ನು ಪಾಲಿಸಿದರೂ, ಈಗ ನಿಯಮ ಗಾಳಿಯಲ್ಲಿ ತೂರಿಹೋಗಿದೆ. ಕಳೆದ ಒಂದು ವಾರಗಳಿಂದ ನಿರಂತರ ಕಲ್ಮಾಡಿಯಲ್ಲಿ ಸ್ಕೂಟರ್ ಸ್ಕಿಡ್ಡಾಗಿ ಅಪಘಾತಗಳು ಸಂಭವಿಸುತ್ತಿವೆ. ದಿನಾ ಬೆಳಗ್ಗೆ ಇವರನ್ನು ಎಬ್ಬಿಸುವುದು ಸ್ಥಳೀಯರ ದಿನಚರಿಯಾಗಿದೆ ಎನ್ನುತ್ತಾರೆ ಪ್ರೇಮ್ ಕಲ್ಮಾಡಿ.
2 ನಿಮಿಷದಲ್ಲಿ 2 ಅಪಘಾತಗಳು
ಸೋಮವಾರ ಬೆಳಗ್ಗೆ 2 ನಿಮಿಷಗಳ ಅಂತರದಲ್ಲಿ ಎರಡು ಅಪಘಾತಗಳು ನಡೆದಿವೆ. ಸ್ಕೂಟರ್ ಸವಾರರು ಚಿಂತಾಜನಕ ಸ್ಥಿತಿಯಲ್ಲಿದ್ದು, ಆಸ್ಪತ್ರೆ ಸೇರಿದ್ದಾರೆ. ಪೊಲೀಸರು ಮೀನು ಸಾಗಾಟದ ವಾಹನಗಳ ಮೇಲೆ ನಿಗಾ ಇಡಬೇಕು. ವಾಹನ ಸವಾರರು ಈ ವೇಳೆಯಲ್ಲಿ ಸಾಧ್ಯವಾದಷ್ಟು ನಿಧಾನವಾಗಿ ಚಲಿಸಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ.
ನಿಯಮ ಪಾಲಿಸಿ: ಪ್ರತಿದಿನ ಬೆಳಗ್ಗೆ 6 ರಿಂದ 8-30ರ ವರೆಗೆ ಅಪಘಾತಗಳು ನಡೆಯುತ್ತದೆ. ವಾಹನಗಳು ಮೀನಿನ ನೀರನ್ನು ರಸ್ತೆಯುದ್ದಕ್ಕೂ ಹರಿಸುತ್ತಾ ಹೋಗುವುದರಿಂದ ದ್ವಿಚಕ್ರ ಸವಾರರು ಸ್ವಲ್ಪ ಬ್ರೇಕ್ ಹಾಕಿದರೂ ರಸ್ತೆಗೆ ಬೀಳುವುದು ಗ್ಯಾರಂಟಿ. ಬಿಸಿಲು ಬಂದಾಗ ಈ ಸಮಸ್ಯೆ ಇರುವುದಿಲ್ಲ. ಎಲ್ಲ ವಾಹನಗಳ ಚಾಲಕರು ಜಾಗ್ರತೆ ವಹಿಸಬೇಕು ಮತ್ತು ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪೊಲೀಸರು ಈ ಬಗ್ಗೆ ನಿಗಾವಹಿಸಿಬೇಕು. –ಸುಂದರ್ ಜೆ. ಕಲ್ಮಾಡಿ, ನಗರಸಭಾ ಸದಸ್ಯರು, ಕಲ್ಮಾಡಿ ವಾರ್ಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Childhood Days: ಮರಳಿ ಬಾರದ ಬಾಲ್ಯ ಜೀವನ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.