121 ಮಕ್ಕಳ ಮನೆ ಅಂಗಳದಲ್ಲೇ ಅನುರಣಿಸಿದ ರಾಷ್ಟ್ರಗೀತೆ
ನಲ್ಲೂರು ಶಾಲೆಯಲ್ಲಿ ವಿಶಿಷ್ಟ ಶೈಲಿಯಲ್ಲಿ ಸ್ವಾತಂತ್ರ್ಯೋತ್ಸವ
Team Udayavani, Aug 16, 2021, 6:23 AM IST
ಕಾರ್ಕಳ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮವನ್ನು ಮಕ್ಕಳು ಈ ಬಾರಿ ಕೊರೊನಾ ಕಾರಣಕ್ಕೆ ಕಳೆದುಕೊಳ್ಳುವ ಸ್ಥಿತಿ ಬಂದಿ ತ್ತು. ಮಕ್ಕಳಲ್ಲಿ ಸಂಭ್ರಮ ಕಳೆಗುಂದದಂತೆ ಮಾಡುವ ಪ್ರಯತ್ನವನ್ನು ನಲ್ಲೂರು ಸ.ಹಿ.ಪ್ರಾ ಶಾಲೆಯ ಶಿಕ್ಷಕರು ರವಿವಾರ ನಡೆಸಿದ್ದರು. ಈ ಮಾದರಿ ಪ್ರಯತ್ನ ಮಕ್ಕಳಲ್ಲಿ ದೇಶಾಭಿಮಾನ ಜೀವಂತ ವಾಗಿರಿಸಿದ್ದಲ್ಲದೆ, 75ರ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಮಕ್ಕಳಲ್ಲಿ, ಹೆತ್ತವರಲ್ಲಿ ಸ್ಮರಣೀಯವಾಗಿಸಿದೆ.
ನಲ್ಲೂರು ಸರಕಾರಿ ಶಿಕ್ಷಕರು ಮಕ್ಕಳ ಮನೆಯಂಗಳದಲ್ಲೆ ಸ್ವಾತಂತ್ರ್ಯೋತ್ಸವ ಎನ್ನುವ ಹೊಸದೊಂದು ಕಲ್ಪನೆಯೊಂದಿಗೆ ಅಂತಹದ್ದೊಂದು ವಾತಾವರಣವನ್ನು ಸೃಷ್ಟಿಸಿದ್ದರು. ಶಾಲೆಯ ಪ್ರತೀ ಮಕ್ಕಳ ಮನೆಯ ಅಂಗಳದಲ್ಲೂ ಧ್ವಜಾರೋಹಣ ನಡೆಸಿ ಅಂಗಳದಲ್ಲೇ ಜನಗಣಮನ ರಾಷ್ಟ್ರಗೀತೆ ಅನುರಣಿ ಸುವಂತೆ ಮಾಡಿದ್ದಾರೆ.
ನಲ್ಲೂರು ಸ.ಹಿ.ಪ್ರಾ ಶಾಲೆಯಲ್ಲಿ 121 ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಕೊಠಡಿಗಳಲ್ಲಿ ಪಠ್ಯದ ಚಟುವಟಿಕೆ ವರ್ಷದಿಂದ ನಡೆದಿಲ್ಲ. ಶಾಲೆಯ ಪ್ರತೀ ಮಕ್ಕಳು ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುವಂತೆ ಎರಡು ದಿನಗಳ ಹಿಂದೆಯೇ ಮಕ್ಕಳಿಗೆ, ಹೆತ್ತವರಿಗೆ ಶಿಕ್ಷಕರು ತಿಳಿಸಿದ್ದರು. ಸ್ವಾತಂತ್ರ್ಯೋತ್ಸವದ ದಿನ ಶಾಲೆಯಲ್ಲಿ ನಡೆಯುವ ಹೊತ್ತಲ್ಲೇ ಮಕ್ಕಳ ಮನೆಯ ಅಂಗಳದಲ್ಲಿ ಶಾಲೆಯ ಧ್ವನಿವರ್ಧಕದ ಮೂಲಕ ನೀಡಿದ ಸೂಚನೆಯಂತೆ ಧ್ವಜಾರೋಹಣ ನಡೆಸಿ ಮೊಳಗಿದ ವಂದೇಮಾತರಂ, ರಾಷ್ಟ್ರಗೀತೆ ಆಲಿಸಿಕೊಂಡು ಮಕ್ಕಳು ಗೌರವವಂದನೆ ಸಲ್ಲಿಸಿ ಸ್ವಾತಂತ್ರ್ಯ ಆಚರಿಸಿಕೊಂಡರು. ಶಿಕ್ಷಕರ ಈ ಪ್ರಯತ್ನ ಯಶಸ್ವಿಯಾಗಿತ್ತು.
ಮಕ್ಕಳ ಭಾಷಣಕ್ಕೆ ಹೆತ್ತವರೇ ಕಿವಿ!
ಪ್ರತೀ ಮಕ್ಕಳು ಧ್ವಜಾ ರೋ ಹಣ ಬಳಿಕ ದೇಶ, ಹುತಾತ್ಮರ ಬಗ್ಗೆ ಒಂದೆ ರಡು ಮಾತುಗಳನ್ನು ಆಡಬೇಕಿತ್ತು. ಹೆತ್ತವರೇ ಇವರ ಭಾಷಣಗಳಿಗೆ ಕಿವಿಯಾಗಿದ್ದರು. ಮಕ್ಕಳು ಮನೆಯಲ್ಲಿ ನಡೆಸಿದ ಸ್ವಾತಂತ್ರ್ಯ ದಿನಾಚರಣೆಯ ಎಲ್ಲ ಪೊಟೋಗಳನ್ನು ಶಿಕ್ಷಕರಿಗೆ ಕಳುಹಿಸಿದ್ದರು.
ಮಕ್ಕಳಲ್ಲಿ ಸಂಭ್ರಮ
ಮಕ್ಕಳಲ್ಲಿ ಶಾಲೆಯ ವಾತಾವರಣವನ್ನು ಹಿಡಿದಿಡುವ ಪ್ರಯತ್ನ ಹಿಂದಿನಿಂದಲೂ ನಡೆಸುತ್ತ ಬಂದಿದ್ದೇವೆ. ಈ ಬಾರಿ ಮಕ್ಕಳು ಸ್ವಾತಂತ್ರ್ಯ ಸಂಭ್ರಮವನ್ನು ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಮನೆಯಲ್ಲೆ ಹೆತ್ತ ವರ ಸಹಕಾರದಿಂದ ಈ ರೀತಿ ಸ್ವಾತಂತ್ರ್ಯ ದಿನಾಚರಣೆಯ ವಾತಾವರಣವನ್ನು ಸೃಷ್ಟಿಸಿದ್ದೇವೆ. ಊರಿಗೆಲ್ಲ ಅಮೃತ ಮಹೋತ್ಸವದ ಪರಿಮಳ ಪಸರಿಸಿದೆ.
– ನಾಗೇಶ್, ಮುಖ್ಯ ಶಿಕ್ಷಕರು. ಸ.ಹಿ.ಪ್ರಾ ಶಾಲೆ ನಲ್ಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.