ಚಿರತೆಯಷ್ಟೇ ವೇಗವಾಗಿ ಸಾಯುತ್ತಿದೆ ಅದರ ಸಂತತಿ
Team Udayavani, Jul 15, 2019, 10:02 AM IST
ಮಣಿಪಾಲ: ಒಂದೆಡೆ ಕಾಡನ್ನು ಉಳಿಸುವತ್ತ ಸರಕಾರ ಮನಸ್ಸು ಮಾಡುತ್ತಿದೆ. ಕಾಡು ಪ್ರಾಣಿಗಳ ಸಂರಕ್ಷಣೆಯ ಪ್ರಯತ್ನವೂ ನಡೆಯು ತ್ತಿದೆ. ಇವೆಲ್ಲದರ ನಡುವೆ ಭಾರತದಲ್ಲಿ ಚಿರತೆಗಳ ಸಾವಿನ ಪ್ರಮಾಣ ಆಘಾತಕಾರಿ ಏರಿಕೆ ಕಂಡಿದೆ. ಹಲವು ಕಾರಣಗಳಿಂದ ಅವು ಸಾವನ್ನಪ್ಪುತ್ತಿದ್ದು ಈ ವರ್ಷದ ಮೊದಲ 4 ತಿಂಗಳುಗಳಲ್ಲಿ ಸಾವಿನ ಸಂಖ್ಯೆ 218ಕ್ಕೆ ಏರಿದೆ.
ಕಳೆದ ಇಡೀ ವರ್ಷದಲ್ಲಿ ದೇಶಾದ್ಯಂತ 500 ಚಿರತೆಗಳು ಸಾವನ್ನಪ್ಪಿದ್ದವು. ಆದರೆ 2019ರ ಮೊದಲ ನಾಲ್ಕು ತಿಂಗಳು ಗಳಲ್ಲೇ ಶೇ. 40ರಷ್ಟು ಚಿರತೆಗಳು ಮೃತಪಟ್ಟಿವೆ. ಇದು ಅತೀ ದೊಡ್ಡ ಸಂಖ್ಯೆಯೂ ಹೌದು.
ಪ್ರತಿದಿನ 1 ಚಿರತೆ ಸಾವು
ಭಾರತದಲ್ಲಿ ಪ್ರತಿ ದಿನ 1 ಚಿರತೆ ಯಾವುದೋ ಒಂದು ಕಾರಣಕ್ಕೆ ಸಾವನ್ನಪ್ಪುತ್ತಿದೆ. ಹುಲಿಗಳಿಗೆ ಹೋಲಿಸಿ ದರೆ ಚಿರತೆಗಳ ಜೀವನ ಹೆಚ್ಚು ಅಪಾಯದಲ್ಲಿದೆ. ಬೇಟೆಯಾಡಿ ಸಾವು, ರೈಲು ಹಳಿ ಮತ್ತು ರಸ್ತೆ ಅಪಘಾತಗಳಲ್ಲಿ ದುರ್ಮರಣ ಹೆಚ್ಚಾಗಿದೆ. ಮೊದಲ 2019ರ ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ 35 ಚಿರತೆಗಳು ಈ ಮೂಲಕವೇ ಸಾವನ್ನಪ್ಪಿವೆ. ಕೆಲವು ಭಾಗಗಳಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಉದಾಹರಣೆಗಳೂ ಇವೆ.
ರಸ್ತೆ ವಿಸ್ತರಣೆಯಿಂದ ಅಪಾಯ
ಕಾಡಿನ ಮಧ್ಯೆ ನಿರ್ಮಿಸುತ್ತಿರುವುದು ಪ್ರಾಣಿಗಳ ಸಾವಿಗೆ ಕಾರಣ ಎಂದು ಹೇಳಲಾಗುತ್ತದೆ. ಪ್ರಾಣಿಗಳ ವಾಸ ಸ್ಥಾನಕ್ಕೆ ಮಾನವರು ಲಗ್ಗೆ ಇಟ್ಟ ಕಾರಣ ಅವು ಹೆದರಿ ಓಡುತ್ತವೆ. ಇಂತಹ ಸಂದರ್ಭ ಅಪಘಾತಗಳ ಮೂಲಕ ಸಾಯುತ್ತಿವೆ. ಭಾರತದಲ್ಲಿ ಪ್ರತಿ ದಿನ 21 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 45 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಇದೆ. ಈ ಅಭಿವೃದ್ಧಿ ಕಾರ್ಯವೂ ಕಾಡುಪ್ರಾಣಿ ಸಾವಿಗೆ ಒಂದು ಕಾರಣ.
ವಿದ್ಯುತ್ ಸ್ಪರ್ಶ
ಅಭಿವೃದ್ಧಿ ಕಾರ್ಯವೂ ಸಸ್ಯ ಸಂಪತ್ತಿನ ಜತೆಗೆ ಪ್ರಾಣಿ ಸಂಪತ್ತಿನ ವಿನಾಶಕ್ಕೆ ಕಾರಣವಾಗುತ್ತಿದೆ. 2017ರಲ್ಲಿ ಶೇ. 9ರಷ್ಟಿದ್ದ ಚಿರತೆ ಸಾವು 2018ಕ್ಕೆ ಶೇ.1.2ಕ್ಕೆ ಏರಿಕೆ ಕಂಡಿದೆ. 2019ರ ಮೊದಲ 4 ತಿಂಗಳು ಶೇ.2.3ಕ್ಕೆ ಜಿಗಿದಿದೆ.
ಬೇಟೆ ಮೂಲಕ ಸಾವು
ಚಿರತೆಗಳ ಸಾವಿಗೆ ಅವು ಬೇಟೆಯಾಡುವ ಸಂದರ್ಭವೂ ಒಂದು ಕಾರಣ ವಾಗಿದೆ. 2015ರಲ್ಲಿ 64 ಚಿರತೆಗಳು ಬೇಟೆಯಾಡಿ ಸಾವನ್ನಪ್ಪಿವೆ. 2016ರಲ್ಲಿ 83, 2017ರಲ್ಲಿ 47 ಮತ್ತು 2018ರಲ್ಲಿ 66 ಮೃತಪಟ್ಟಿವೆ. ಜನರ ಬೇಟೆ 2015ರಲ್ಲಿ 127 ಚಿರತೆಗಳ ಸಾವಿಗೆ ಕಾರಣವಾಗಿದ್ದರೆ, 2016ರಲ್ಲಿ ಈ ಸಂಖ್ಯೆ 154ಕ್ಕೆ ಏರಿದೆ. 2017ರಲ್ಲಿ 159 ಚಿರತೆ ಸಾವನ್ನಪ್ಪಿದ್ದವು.
ಅತೀ ಹೆಚ್ಚು ಚಿರತೆ ಇರುವ ರಾಜ್ಯಗಳು;
ಮಧ್ಯಪ್ರದೇಶ 1,817
ಕರ್ನಾಟಕ 1,129
ಮಹಾರಾಷ್ಟ್ರ 905
ಛತ್ತೀಸ್‌ಗಢ 846
ತಮಿಳುನಾಡು 815
ಅತೀ ಹೆಚ್ಚು ಚಿರತೆ ಸಾಯುವ ರಾಜ್ಯಗಳು;
ಉತ್ತರಾಖಂಡ 93 (703)
ಮಹಾರಾಷ್ಟ್ರ 90 (905)
ಮಣಿಪಾಲ ಸ್ಪೆಷಲ್ ಡೆಸ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.