ಬಹುಮುಖ ವ್ಯಕ್ತಿತ್ವದ ಸಂತ ಶೀರೂರು ಶ್ರೀ ಅಸ್ತಂಗತ
Team Udayavani, Jul 20, 2018, 5:25 AM IST
ಉಡುಪಿ: ಶ್ರೀ ಶೀರೂರು ಮಠದ ಮೂವತ್ತನೆಯ ಯತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಗುರುವಾರ ಬೆಳಗ್ಗೆ ಅಸ್ತಂಗತರಾದರು. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಜು.18ರ ಮುಂಜಾವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಜು. 19ರ ಬೆಳಗ್ಗೆ 8.30ರ ವೇಳೆಗೆ ಅಸ್ತಂಗತರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
1964ರ ಜೂ. 8ರಂದು ಜನಿಸಿದ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ಹರೀಶ ಆಚಾರ್ಯ. ಅವರನ್ನು ಶ್ರೀವಾಮನತೀರ್ಥ ಪರಂಪರೆಯ ಶೀರೂರು ಮಠದ 30ನೆಯ ಸ್ವಾಮೀಜಿಯಾಗಿ 1971ರ ಜು. 2ರಂದು ದ್ವಂದ್ವ ಮಠವಾದ ಶ್ರೀ ಸೋದೆ ಮಠದ ಹಿಂದಿನ ಸ್ವಾಮೀಜಿ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ನಿಯುಕ್ತಿಗೊಳಿಸಿದ್ದರು.
ಶ್ರೀಗಳು ಬಹುಮುಖೀ ವ್ಯಕ್ತಿತ್ವದವರಾಗಿದ್ದರು. ಸಂಗೀತ, ಚಿತ್ರಕಲೆಯಲ್ಲೂ ಬಹಳ ಆಸಕ್ತಿ ಹೊಂದಿದ್ದರು. ಮೂರು ಬಾರಿ ಪರ್ಯಾಯ ಪೀಠವನ್ನು ಅಲಂಕರಿಸಿದ್ದರು. ಶ್ರೀ ಕೃಷ್ಣನನ್ನು ವಿಶಿಷ್ಟವಾಗಿ ಅಲಂಕರಿಸುವಲ್ಲಿ ಜನಪ್ರಿಯರಾಗಿದ್ದ ಅವರು, ತಮ್ಮ ಪರ್ಯಾಯ ಅವಧಿಯಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದರು.
ದೂರು, ಮರಣೋತ್ತರ ಪರೀಕ್ಷೆ
ಶ್ರೀಗಳ ಮರಣದ ಬಗ್ಗೆ ಪೂರ್ವಾಶ್ರಮದ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅನಂತರ ಮೆರವಣಿಗೆಯೊಂದಿಗೆ ಶ್ರೀಕೃಷ್ಣ ಮಠದ ರಥಬೀದಿ, ಶೀರೂರು ಮಠಕ್ಕೆ ಕರೆತಂದು ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ ವೃಂದಾವನಸ್ಥಗೊಳಿಸಲಾಯಿತು.
ಅಂತಿಮ ದರ್ಶನ: ಶ್ರೀಗಳು ಅಸ್ತಂಗತರಾದ ಸುದ್ದಿ ಕೇಳುತ್ತಲೇ ನೂರಾರು ಮಂದಿ ಆಸ್ಪತ್ರೆ, ಶವಾಗಾರ, ಅನಂತರ ಶ್ರೀಕೃಷ್ಣ ಮಠದ ರಥಬೀದಿ, ಶೀರೂರು ಮಠಕ್ಕೆ ಆಗಮಿಸಿದರು. ರಥಬೀದಿಯಲ್ಲಿ ಸಾವಿರಾರು ಮಂದಿ ಭಕ್ತರು ಅಂತಿಮ ನಮನ ಸಲ್ಲಿಸಿದರು. ಶ್ರೀಗಳ ಸಾವು ಅಸಹಜ ಎಂದು ಅವರ ಸೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಪೊಲೀಸರೂ ಶೀರೂರು ಮೂಲಮಠ ಮತ್ತು ರಥಬೀದಿಯಲ್ಲಿರುವ ಶೀರೂರು ಮಠವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ವಿವಾದ: ಇತ್ತೀಚೆಗೆ ಶೀರೂರು ಮಠದ ಪಟ್ಟದ ದೇವರನ್ನು ಶ್ರೀಕೃಷ್ಣ ಮಠದಿಂದ ಶ್ರೀ ಲಕ್ಷ್ಮೀವರತೀರ್ಥರಿಗೆ ಹಿಂದಿರುಗಿಸದೆ ಇರಲು ಇತರ ಏಳು ಮಠಾಧೀಶರು ಶ್ರೀಕೃಷ್ಣ ಮಠದಲ್ಲಿ ಸಭೆ ನಡೆಸಿ ಒಮ್ಮತದ ತೀರ್ಮಾನ ತೆಗೆದುಕೊಂಡ ಬಳಿಕ ವಿವಾದ ಉಂಟಾಗಿತ್ತು. ಈ ತೀರ್ಮಾನದ ವಿರುದ್ಧ ಕ್ರಿಮಿನಲ್ ದಾವೆ ಹೂಡುವುದಾಗಿ ಶೀರೂರು ಶ್ರೀಗಳು ಸೋಮವಾರ ತಿಳಿಸಿದ್ದರು.
ಆ ಎರಡು ದಿನಗಳು…
ಜುಲೈ 18
– ಮುಂಜಾವ 1.05ಕ್ಕೆ ಮಣಿಪಾಲ ಆಸ್ಪತ್ರೆಗೆ ದಾಖಲು
– ಇಡೀ ದಿನ ಶ್ರೀಗಳ ಆರೋಗ್ಯ ಗಂಭೀರವೆಂಬ ಸುದ್ದಿ.
– ರಾತ್ರಿ ವೇಳೆ ಯಾವುದೇ ಮಾಹಿತಿ ನೀಡಲು ವೈದ್ಯರ ನಿರಾಕರಣೆ.
ಜುಲೈ 19
– ಬೆಳಗ್ಗೆ 8.30ರ ವೇಳೆಗೆ ಅಸ್ತಂಗತರಾದ ಘೋಷಣೆ
– ಬೆಳಗ್ಗೆ 10.45: ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಂದ ಮಾಧ್ಯಮಗಳಿಗೆ ಮಾಹಿತಿ. ಶಂಕಿತ ವಿಷಕಾರಕ ಅಂಶಗಳು ಪತ್ತೆಯಾದ ವಿಚಾರ ಬಹಿರಂಗ.
– 11.00: ಶವಾಗಾರಕ್ಕೆ ರವಾನೆ.
– 3.45: ಶವಾಗಾರದಿಂದ ರಥಬೀದಿಗೆ ಮೆರವಣಿಗೆ.
– 4.25: ರಥಬೀದಿ ಪ್ರವೇಶ
– 6.00: ಶೀರೂರು ಮೂಲ ಮಠಕ್ಕೆ ಪ್ರಯಾಣ.
– 7.00: ಮೂಲಮಠ ತಲುಪಿ 8 ಗಂಟೆಗೆ ವೃಂದಾವನ ಪ್ರವೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.