Overpass ಬದಲು ಮತ್ತೆ ಅಂಡರ್‌ ಪಾಸ್‌ ಯೋಜನೆ

ಬೆಳುವಾಯಿ ಪೇಟೆ: ಜನರಿಗೆ ತೊಂದರೆಯಾಗುವ ಯೋಜನೆ ಬದಲಾವಣೆಗೆ ಆಗ್ರಹ

Team Udayavani, Aug 12, 2023, 4:19 PM IST

14-karkala

ಕಾರ್ಕಳ: ಬೆಳುವಾಯಿ ಪೇಟೆಯಲ್ಲಿ ಅಂಡರ್‌ ಪಾಸ್‌ ಬದಲಾಗಿ ಮೇಲ್ಸೇತುವೆ ನಿರ್ಮಿಸುವುದಾಗಿ ಹೇಳಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಈಗ ಪುನಃ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಮುಂದಾಗಿದ್ದು ಜನರಿಂದ ವಿರೋಧ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಂಗಳೂರಿನ ಕುಲಶೇಖರ-ಮೂಡಬಿದ್ರೆ ಕಾರ್ಕಳದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ದಿಲೀಪ್‌ ಬಿಲ್ಡ್‌ ಕಾಸ್‌ ಕಂಪೆನಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದು ರಸ್ತೆ 45 ಕಿ. ಮೀ ಉದ್ದ, 45 ಮೀಟರ್‌ ಅಗಲ ಇರಲಿದೆ. ಅಂಡರ್‌ ಪಾಸ್‌ ಬೇಕಿರಲಿಲ್ಲ.

ಯೋಜನೆಯ ಪ್ರಾರಂಭದಲ್ಲಿ ಬೆಳುವಾಯಿ ಪೇಟೆಯಲ್ಲಿ ಮೇಲ್ಸೇತುವೆ ನಿರ್ಮಿಸುವುದಾಗಿ ಇಲಾಖೆಯವರು ಹೇಳಿದ್ದರು. ಆದರೀಗ ಅದನ್ನು ರದ್ದು ಮಾಡಿ ಅಂಡರ್‌ ಪಾಸ್‌ ನಿರ್ಮಿಸಲಾಗುತ್ತಿದೆ. ಇದು ಚಿಕ್ಕ ಪೇಟೆಯಾಗಿದ್ದು, ಅಂಡರ್‌ ಪಾಸ್‌ ಅಗತ್ಯವಿಲ್ಲ. ಅಳಿಯೂರಿನಿಂದ ಬರುವ ಮುಖ್ಯ ರಸ್ತೆ ಮಾತ್ರ ಇಲ್ಲಿ ಹೆದ್ದಾರಿಯನ್ನು ಸೇರುತ್ತದೆ. ವಾಹನ ಸವಾರರು ಸರ್ವೀಸ್‌ ರಸ್ತೆಯಲ್ಲಿ ಮೂಡುಬಿದಿರೆ ಅಥವಾ ಕಾರ್ಕಳ ಕಡೆಗೆ ತೆರಳಬಹುದು. ಆದರೂ ಅಂಡರ್‌ ಪಾಸ್‌ ನಿರ್ಮಿಸುತ್ತಿರುವುದು ಸರಿಯಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

ಈ ಸಂಬಂಧ ಬೆಳುವಾಯಿಯ ಕೆಲವು ಪ್ರಮುಖರು ಸಂಸದರನ್ನು ಮತ್ತು ಹೆದ್ದಾರಿ  ಇಲಾಖೆಯ ಅಧಿಕಾರಿಗಳನ್ನು ಐದಾರು ಬಾರಿ ಭೇಟಿ ಮಾಡಿ ಸಮಸ್ಯೆ ವಿವರಿಸಿದರು. ಆಗ ಅಂಡರ್‌ ಪಾಸ್‌ ಮಾಡುವ ಸಂದರ್ಭ ಕೆಲವು ಬದಲಾವಣೆ ಮಾಡಿ ಮೂರು ಕಡೆ ತೆರೆದ ರಸ್ತೆ ಮಾಡುವ ಭರವಸೆ ದೊರೆತಿತ್ತು. ಸುಮಾರು 150 ಮೀ.ನಷ್ಟು ತೆರೆದ ಜಾಗ ಸಿಗಲಿದೆ ಎನ್ನುವುದಾಗಿಯೂ ಹೇಳಿದ್ದರು. ಅವೆಲ್ಲವೂ ಈಗ ಹುಸಿಯಾಗಿದೆ.

ಚಿಕ್ಕಪೇಟೆ ಬೆಳುವಾಯಿ ಇಬ್ಟಾಗ

ಆದರೀಗ ಕೇವಲ 40 ಮೀ.ನಷ್ಟು ತೆರೆದ ಜಾಗ ಮಾತ್ರ ಬಿಡಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ಈ ಚಿಕ್ಕ ಪೇಟೆಯನ್ನು ಎರಡು ಭಾಗಗಳನ್ನಾಗಿ ಮಾಡಿದರೆ ಹೆ¨ªಾರಿಯ ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಅಂಗಡಿಗಳಿಗೆ ಹೋಗಲು ಜನರು ಸುತ್ತು ಬಳಸಿ ಹೋಗಬೇಕಾಗಲಿದೆ. ಇದರಿಂದ ಜನರು ಮತ್ತು ವ್ಯಾಪಾರಿಗಳಿಗೆ ಅನಾನುಕೂಲವಾಗಲಿದೆ.

ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ತೆಗೆದಿರುವ ಪಿಲ್ಲರ್‌ಗಳ ತನಕ ಎರಡು ಬದಿಯಲ್ಲಿ ಮಣ್ಣು ತುಂಬಿಸಿ ಅಂಡರ್‌ ಪಾಸ್‌ ನಿರ್ಮಿಸುವುದರಿಂದ ಪೇಟೆಯ ಒಂದು ಬದಿ ಮತ್ತೂಂದು ಬದಿಗೆ ತೋರದು. ಜತೆಗೆ ಇಲ್ಲಿರುವ ಮಾರ್ಕೆಟ್‌ ಇಕ್ಕಟ್ಟಿನಿಂದ ಕೂಡಿದ್ದು, ಇಲ್ಲಿ ವ್ಯವಹಾರ ಮಾಡಲು ಸಾಕಷ್ಟು ಜಾಗವಿಲ್ಲ. ಇದರ ಜತೆಗೆ ಆಟೋರಿಕ್ಷಾ, ಟೆಂಪೋ ಚಾಲಕರು ತಮ್ಮ ಗಾಡಿಗಳನ್ನು ನಿಲ್ಲಿಸಲು ಜಾಗ ಸಿಗದು ಎನ್ನುತ್ತಾರೆ. ಹಾಗಾಗಿ ಈ ವ್ಯವಸ್ಥೆ ಈ ಪೇಟೆಗೆ ಸೂಕ್ತವಾಗಿಲ್ಲ ಎನ್ನುವ ಅಸಮಾಧಾನ ಸ್ಥಳೀಯರದ್ದು.

ಸಂಕಷ್ಟದ ಮೇಲೆ ಸಂಕಷ್ಟ

ಎರಡೂ ಬದಿಗಳಲ್ಲಿ ತಂಗುದಾಣ ಇಲ್ಲದೆ ಪ್ರಯಾಣಿ ಕರು ಪರದಾಡುವಂತಾಗಿದೆ. ಪೇಟೆಯಲ್ಲಿ ಕನಿಷ್ಠ 200 ಮೀ.ನಷ್ಟು ತೆರೆದ ಜಾಗ ಸಿಕ್ಕಿದಲ್ಲಿ ಒಂದಿಷ್ಟು ಸಮಸ್ಯೆಗಳು ಪರಿಹಾರವಾಗಬಹುದು. ಕಾಮಗಾರಿ ಇನ್ನೂ ಪಿಲ್ಲರ್‌ ಹಂತದಲ್ಲಿದೆ.

ಬದಲಾವಣೆಗೆ ಅವಕಾಶವಿರುವುದರಿಂದ ಸ್ಥಳೀಯ ಆಗತ್ಯಗಳಿಗೆ ಅನುಗುಣವಾಗಿ ಯೋಜನೆ ಮಾರ್ಪಾಡು ಮಾಡಬೇಕೆಂಬುದು ಸ್ಥಳೀಯರ ಆಗ್ರಹ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪ್ರಮುಖರು ಅಧಿಕಾರಿಗಳು, ಸಂಸದರಿಗೆ ಮತ್ತೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಅದು ಫ‌ಲಿಸದಿದ್ದರೆ ಹೋರಾಟ ಅನಿವಾರ್ಯ ಎಂಬುದು ಸ್ಥಳೀಯರ ಅಭಿಪ್ರಾಯ.

ಆರಂಭದಲ್ಲಿ ಮೇಲ್ಸೆತುವೆ ಅಂದಿದ್ದರು. ಬಳಿಕ ಅಂಡರ್‌ಪಾಸ್‌ ಎಂದಾಗಿದೆ. ಸ್ಥಳದಲ್ಲಿ 200 ಮೀ .ಮೀ. ತೆರೆದಿಡುವಂತೆ ನಾವು ಕೆಲ ಪ್ರಮುಖರೆಲ್ಲ ಸೇರಿ ಸಂಸದರು, ಶಾಸಕರಿಗೆ ಮನವಿ ಮಾಡಿದ್ದೆವು. ಹೆದ್ದಾರಿ ಇಲಾಖೆ 75 ಮೀ.ಗೆ ಒಪ್ಪಿಕೊಂಡಿತ್ತು. ಈಗ ಅದನ್ನೂ ಬಿಟ್ಟಿಲ್ಲ. ಸ್ಥಳೀಯರು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎನ್ನುತ್ತಾರೆ ಯೋಜನೆ ವಿರುದ್ಧ ಹೋರಾಡುತ್ತಿರುವವರಲ್ಲಿ ಒಬ್ಬರಾದ ಭಾಸ್ಕರ್‌ ಎಸ್‌. ಕೋಟ್ಯಾನ್‌ ತಿಳಿಸಿದ್ದಾರೆ.

ಇಲಾಖೆಗೆ ಪತ್ರ ಬರೆಯಲಾಗಿದೆ: ಅಂಡರ್‌ಪಾಸ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿತ್ತು. –ಸುಶೀಲಾ, ಅಧ್ಯಕ್ಷೆ , ಗ್ರಾ.ಪಂ. ಬೆಳುವಾಯಿ

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.