Maravanthe ಮೀನುಗಾರಿಕಾ ರಸ್ತೆ ಅಭಿವೃದ್ಧಿಗೆ ಮೀನಮೇಷ
| ಹೊರಬಂದರು ಸಂಪರ್ಕಿಸುವ ರಸ್ತೆ ಹೊಂಡಮಯ | ಮೀನುಗಾರಿಕೆಗೆ ಹೊರಟ ಮೀನುಗಾರರಿಗೆ ಸಂಕಷ್ಟ
Team Udayavani, Aug 14, 2024, 2:04 PM IST
ಮರವಂತೆ: ಇಲ್ಲಿನ ಮೀನುಗಾರಿಕಾ ಹೊರಬಂದರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಅಭಿವೃದ್ಧಿಗೆ ಕಳೆದ 2-3 ವರ್ಷಗಳಿಂದ ಮೀನಮೇಷ ಎಣಿಸುತ್ತಿದ್ದು, ಇದರಿಂದ ಮೀನು ಸಾಗಾಟಕ್ಕೆ, ಮೀನುಗಾರರಿಗೆ ಬರಲು ತೊಂದರೆಯಾಗುತ್ತಿದೆ.
ಹೆದ್ದಾರಿಯಿಂದ ಮರವಂತೆಯ ಹೊರಬಂದರನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ಕೇವಲ 500-600 ಮೀ. ಅಷ್ಟೆ ಕಾಂಕ್ರಿಟೀಕರಣಕ್ಕೆ ಬಾಕಿ ಇದೆ. ಇನ್ನುಳಿದ 1 ಕಿ.ಮೀ.ನಷ್ಟು ದೂರದ ರಸ್ತೆಗೆ 3 ವರ್ಷದ ಹಿಂದೆ ಕಾಂಕ್ರೀಟ್ ಕಾಮಗಾರಿ ಆಗಿದೆ. ಕಾಮಗಾರಿ ಬಾಕಿ ಇರುವ ಕಡೆ ರಸ್ತೆಯು ಸಂಪೂರ್ಣ ಹೊಂಡಮಯಗೊಂಡಿದ್ದು, ವಾಹನ ಸವಾರರು ಪ್ರಯಾಸಪಟ್ಟುಕೊಂಡು ಸಂಚರಿಸುವಂತಾಗಿದೆ.
ಮೀನು ಸಾಗಾಟಕ್ಕೆ ಸಂಕಷ್ಟ
ಮೀನುಗಾರಿಕಾ ರಜೆ ಮುಗಿಸಿ, ಈಗ ತಾನೇ ಹೊಸ ಋತುವಿನ ಮೀನುಗಾರಿಕೆ ಆರಂಭಗೊಂಡಿದೆ. ಹೆದ್ದಾರಿಯಿಂದ ಮೀನು ಸಾಗಾಟದ ವಾಹನಗಳು ಬಂದರಿಗೆ ಇದೇ ಮಾರ್ಗವಾಗಿ ಬರಬೇಕಿದೆ. ಇದಲ್ಲದೆ ಐಸ್ ಪೂರೈಸುವ ವಾಹನಗಳು ಸಹ ಇಲ್ಲಿಂದಲೇ ಸಂಚರಿಸಬೇಕು. ಬೆಳಗ್ಗೆ ಬೇಗ ಮೀನುಗಾರಿಕೆಗೆ ಬರುವ ಮೀನುಗಾರರು ಬೈಕ್‌ನಲ್ಲಿ ಇದೇ ಮಾರ್ಗವಾಗಿ ಬರಬೇಕಿದೆ. ಪ್ರತಿ ನಿತ್ಯ ನೂರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಆದರೂ ಈ ರಸ್ತೆಯ ಅಭಿವೃದ್ಧಿಗೆ ಮಾತ್ರ ಪ್ರತೀ ವರ್ಷ ಮೀನಾಮೇಷ ಎಣಿಸುತ್ತಿದ್ದಾರೆ.
ಎಲ್ಲರಿಗೂ ಮನವಿ
ಮರವಂತೆ ಮೀನುಗಾರಿಕಾ ಹೊರಬಂದರು ಸಂಪರ್ಕಿಸುವ ರಸ್ತೆಯ 500 ಮೀ. ನಷ್ಟು ದೂರದವರೆಗಿನ ಕಾಂಕ್ರಿಟೀಕರಣ ಬಾಕಿಯಿದೆ. ಇದರ ಅಭಿವೃದ್ಧಿಗೆ ಅನುದಾನ ನೀಡುವಂತೆ ನಾವು ಪಂಚಾಯತ್ ವತಿಯಿಂದ ಶಾಸಕರು, ಸಂಸದರು ಹಾಗೂ ಮೀನುಗಾರಿಕಾ ಸಚಿವರಿಗೂ ಮನವಿ ಕೊಟ್ಟಿದ್ದೇವೆ. ಅನುದಾನ ಕೊಡುವ ಭರವಸೆ ನೀಡಿದ್ದಾರೆ. – ಲೋಕೇಶ್ ಖಾರ್ವಿ, ಅಧ್ಯಕ್ಷರು, ಮರವಂತೆ ಗ್ರಾ.ಪಂ.
ಇನ್ನೆಷ್ಟು ವರ್ಷ ಬೇಕು?
ಕಳೆದ 2-3 ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಎಂದು ನಾವು ಇಲ್ಲಿಗೆ ಭೇಟಿ ನೀಡಿದ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಮೀನುಗಾರಿಕಾ ಇಲಾಖೆಯವರಿಗೂ ಮನವಿ ಮಾಡಿಕೊಂಡಿದ್ದೇವೆ. ಆದರೆ ಈವರೆಗೆ ಬಾಕಿ ಉಳಿದ ರಸ್ತೆಯ
ಅಭಿವೃದ್ಧಿ ಬಗ್ಗೆ ಮಾತ್ರ ಯಾರೂ ಗಮನಹರಿಸುತ್ತಿಲ್ಲ. ಇಲ್ಲಿ ಸುಮಾರು 200 ಕ್ಕೂ ಮಿಕ್ಕಿ ದೋಣಿಗಳಿವೆ. ಸುಮಾರು 5 ಸಾವಿರದಷ್ಟು ಮೀನುಗಾರರಿಗೆ ಈ ಬಂದರು ಜೀವನಾಧಾರವಾಗಿದೆ. ಈ ರಸ್ತೆಯ ಅಭಿವೃದ್ಧಿಗೆ ಇನ್ನೆಷ್ಟು ವರ್ಷ ಬೇಕು ಎನ್ನುವುದಾಗಿ ಮೀನುಗಾರರು ಪ್ರಶ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.