ಮನೆ ಮನೆಗೆ ಗಂಗೆ ಹರಿಸಲು ನಡಿಯುತ್ತಿದೆ ಭಗೀರಥ ಯತ್ನ
ಕಾರ್ಕಳ ವಿಧಾನಸಭಾ ಕ್ಷೇತ್ರ ಜಲಜೀವನ್ ಯೋಜನೆಯಡಿ 2024ರ ವೇಳೆಗೆ ಎಲ್ಲ ಮನೆ ತಲುಪುವ ಗುರಿ
Team Udayavani, Feb 11, 2022, 5:59 PM IST
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಎಲ್ಲ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ್- ಜಲಮಿಷನ್ ಯೋಜನೆ ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಅನುಷ್ಠಾನ ಹಂತದಲ್ಲಿದ್ದು, 2024ರ ವೇಳೆಗೆ ಕ್ಷೇತ್ರದ ಹಳ್ಳಿಗಳ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಹರಿಸುವ ಗುರಿ ಹೊಂದಲಾಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯ ಸರಕಾರ ಅನುಷ್ಠಾನ ಗೊಳಿಸುತ್ತಿರುವ ಮನೆ ಮನೆಗೆ ಗಂಗೆಯಡಿ ಮುಂದಿನ ಎರಡು ವರ್ಷದಲ್ಲಿ ಕಾರ್ಕಳ , ಹೆಬ್ರಿ ತಾಲೂಕುಗಳ ಪ್ರತಿ
ಮನೆಗೂ ಕುಡಿಯುವ ನಳ್ಳಿ ನೀರು ಸರಬರಾಜು ಆಗಲಿದೆ.
ಉಭಯ ತಾಲೂಕಿನಲ್ಲಿ 46 ಸಾವಿರ ಮನೆಗಳಿಗೆ ಜಲವಿಷನ್ ಯೋಜನೆಯಡಿ ನೀರು ಸಂಪರ್ಕ ಸರಬರಾಜು ಮಾಡಲಾಗುತ್ತಿದೆ. 2024 ಅವಧಿಗೆ ಮುಂಚಿತವೇ 2023ರ ವೇಳೆಗೆ ಎಲ್ಲ ಮನೆಗೂ ನೀರು ಹರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಪ್ರಯತ್ನನಡೆಯುತ್ತಿವೆ. ಕಾಮಗಾರಿಗಳಿಗೆ ತ್ವರಿತ ವೇಗ ನೀಡಲಾಗಿದೆ. ಇದೇ ವೇಗದಲ್ಲಿ ಮುಂದುವರಿದಲ್ಲಿ ಅವಧಿ ಮುಂಚಿತವೇ ನಿಗದಿತ ಗುರಿ ಸಾಧನೆ ಸಾಧ್ಯಗೊಂಡು ಗಂಗೆ ಪ್ರತಿ ಮನೆ ತಲುಪಲಿದೆ. ಉಭಯ ತಾಲೂಕಿನಲ್ಲಿ ಮೂರು ಹಂತಗಳಲ್ಲಿ ಸುಮಾರು 129.74 ಕೋ.ರೂ.ವೆಚ್ಚದಲ್ಲಿ ಜಲವಿಷನ್ ಯೋಜನೆಯಡಿ ಕೆಲಸಗಳು ಆರಂಭಗೊಂಡು ಪ್ರಗತಿ ಹಂತದಲ್ಲಿದೆ.
2020 -21ರಲ್ಲಿ ಕಾರ್ಕಳ 31.61 ಕೋ.ರೂ. ಹಾಗೂ ಹೆಬ್ರಿ 12.41 ಕೋ.ರೂ ಸೇರಿ ಒಟ್ಟು 52.2 ಕೋ.ರೂ ವೆಚ್ಚದಲ್ಲಿ ಉಭಯ ತಾಲೂಕುಗಳಲ್ಲಿ 195 ಕಡೆ ಕೆಲಸಗಳು ನಡೆದಿವೆ. ಕಾರ್ಕಳದಲ್ಲಿ 147, ಹೆಬ್ರಿಯಲ್ಲಿ 48 ಕಡೆ ಕೆಲಸಗಳಾಗಿವೆ.
ಮೂರು ಹಂತದಲ್ಲಿ ಅನುಷ್ಠಾನ
ತಾಲೂಕಿನಲ್ಲಿ ಮೊದಲ ಹಂತದಲ್ಲಿ 29,504 ಮನೆಗಳನ್ನು ಗುರುತಿಸಲಾಗಿದೆ. ಈ ಪೈಕಿ 9,766 ಮನೆಗಳಿಗೆ ಈ ಮೊದಲೇ ಅಂದರೆ 2020ರ ಎಪ್ರಿಲ್ ತಿಂಗಳಲ್ಲಿ ಸಂಪರ್ಕನೀಡಲಾಗಿದೆ. ಮೊದಲ ಹಂತದಲ್ಲಿ 19,738 ಮನೆಗಳಿಗೆ ಸಂಪರ್ಕ ನೀಡಬೇಕಾಗಿತ್ತು. 2021ರಲ್ಲಿ 7,489 ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಸಾಕಷ್ಟು ನೀರಿನ ಮೂಲ
ಆಶ್ರಯವಿರುವ ಕಾರಣಕ್ಕೆ ಸುಮಾರು 6,730 ಕುಟುಂಬಗಳು ಸರ್ವೆ ವೇಳೆ ನೀರು ಬೇಡ ಎಂದಿದ್ದಾರೆ.
2021-22ರ ಸಾಲಿನಲ್ಲಿ ನಾಲ್ಕು ಕಾಮಗಾರಿಗಳಿಗೆ ಮಂಜೂರಾತಿ ದೊರಕಿದೆ. 195 ಕೆಲಸಗಳ ಪೈಕಿ 131 ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. 93 ನೀರಿನ ಟಾಂಕಿ ಮಂಜೂರಾತಿಗೊಂಡಿದೆ. ಹೆಬ್ರಿ ತಾಲೂಕಿನಲ್ಲಿ 2021-22ರಲ್ಲಿ 3.2 ಕೋ.ರೂ ವೆಚ್ಚದಲ್ಲಿ ನಾಲ್ಕು ಕಾಮಗಾರಿಗಳು ನಡೆದಿವೆ. 981 ಮನೆಗಳನ್ನು ಗುರುತಿಸಲಾಗಿದ್ದು, ಈಗಾಗಲೇ 316 ಮನೆಗಳಿಗೆ ನೀರು ಒದಗಿಸಲಾಗಿದೆ. 665 ಮನೆಗಳಿಗೆ ಸಂಪರ್ಕ ನೀಡಬೇಕಿದೆ. ಬಾಕಿ ಉಳಿದ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ.
2021-22ರಲ್ಲಿ ಹೆಚ್ಚುವರಿ ಯೋಜನೆ ವಿಸ್ತರಿಸಲಾಗಿದ್ದು, 74.22 ಕೋ.ರೂ. ವೆಚ್ಚದಲ್ಲಿ 28,952 ಮನೆಗಳಿಗೆ ಸಂಪರ್ಕ
ಕಲ್ಪಿಸಲು ಸರ್ವೆ ಕಾರ್ಯ ನಡೆಯುತ್ತಿದೆ. ವಿಧಾನ ಸಭಾಕ್ಷೇತ್ರದಲ್ಲಿ 34 ಗ್ರಾ.ಪಂ.ಗಳ ಎಲ್ಲ ಮನೆಗಳಿಗೆ ಕುಡಿ
ಯುವ ನೀರು ಪೂರೈಸುವ ಯೋಜನೆ ಜಲವಿಷನ್ ಯೋಜನೆ ಒಳಗೊಂಡಿದೆ. 2023ರ ವೇಳೆಗೆ ಎಲ್ಲ ಕಾಮಗಾರಿ
ಗಳನ್ನು ಪೂರ್ಣಗೊಳಿಸಲು ಸಣ್ಣ ನೀರಾವರಿ ಇಲಾಖೆ ನಿರ್ಧರಿಸಿದ್ದು, ಪ್ರಾಕೃತಿಕ ವಿಕೋಪ ಇನ್ನಿತರ ಸಮಸ್ಯೆಗಳಿಂದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದೆ ಇದ್ದಲ್ಲಿ 2023ರ ಮಾರ್ಚ್ ವೇಳೆಗೆ ಎಲ್ಲ ಮನೆಗಳಿಗೆ ನೀರು ತಲುಪಿಸುವ ಕಾರ್ಯವಾಗಲಿದೆ. ಅಡ್ಡಿಗಳು ಎದುರಾಗದಿದ್ದಲ್ಲಿ 2024ರ ವೇಳೆಗೆ ಎಲ್ಲ ಮನೆ ತಲುಪಿಸಲು ಇಲಾಖೆ ಸನ್ನದ್ಧವಾಗಿದೆ.
ವಾರಾಹಿಯಿಂದಲೂ
ಹರಿದು ಬರಲಿದೆ ಗಂಗೆ !
ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಸಮಗ್ರ ಕುಡಿಯುವ ನೀರಿನ ಈಗಿರುವ ವಿವಿಧ ಯೋಜನೆಗಳ ಜತೆ ವಾರಾಹಿಯಿಂದಲೂ ಉಭಯ ತಾಲೂಕಿಗೆ ನೀರು ಹರಿಸುವ ಯೋಜನೆ ಪ್ರಸ್ತಾವನೆಯಲ್ಲಿದೆ. ಇದು ಸರಕಾರಿ ಮಟ್ಟದಲ್ಲಿ ಪ್ರಸ್ತಾವನೆ ದೊರೆತು ಅನುಮೋದನೆ ಈಗಾಗಲೇ ದೊರೆತಿದೆ. 1,515 ಕೋ.ರೂ. ಬೃಹತ್ ಮೊತ್ತದ ವಾರಾಹಿ ಯೋಜನೆ ಇದಾಗಿದ್ದು, ಜಿಲ್ಲೆಯ ಉಡುಪಿ, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕುಂದಾಪುರ ತಾಲೂಕುಗಳ ಜನತೆಗೆ ಕುಡಿಯುವ ನೀರು ಒದಗಿಸುವ ಈ ಬೃಹತ್ ಯೋಜನೆ ಕಾರ್ಯಗತವಾದಲ್ಲಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ನಿವಾರಣೆಯಾಗಬಹುದೆಂದು ನಂಬಲಾಗಿದೆ. ಶಾಶ್ವತ ಪರಿಹಾರ ದೊರಕುವ ವಿಶ್ವಾಸವೂ ಇದೆ.
2023ಕ್ಕೆ ಪೂರ್ಣಗೊಳಿಸಲು ಪ್ರಯತ್ನ
ಪ್ರತಿ ಮನೆಗೂ ನೀರು ಹರಿಸುವ ಯೋಜನೆಯನ್ವಯ ತ್ವರಿತವಾಗಿ ಕಾಮಗಾರಿ ನಡೆಸಲಾಗುತ್ತಿದೆ. 2024ರ
ನಿಗದಿತ ಗುರಿ ತಲುಪುವ ಮುಂಚಿತ 2023ಕ್ಕೆ ಪೂರ್ಣ ಗೊಳಿಸಿ, ಗುರಿ ಸಾಧಿಸುವಲ್ಲಿ ಪ್ರಯತ್ನಿಸ ಲಾಗುತ್ತಿದೆ. -ಸುರೇಂದ್ರನಾಥ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಕುಡಿಯುವ ನೀರು ಸರಬರಾಜು, ನೈರ್ಮಲ್ಯ ಉಪವಿಭಾಗ ಕಾರ್ಕಳ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.