ಜ. 15, 16: ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ, ನೂತನ ಬಿಂಬ ಪ್ರತಿಷ್ಠೆ
ಜಾಥಾಕ್ಕೆ ಮಣಿಪಾಲ ಗ್ರೂಪ್ ಮುಖ್ಯಸ್ಥ ಡಾ| ರಂಜನ್ ಪೈ ಚಾಲನೆ ನೀಡಲಿದ್ದಾರೆ
Team Udayavani, Jan 12, 2023, 10:05 AM IST
ಉಡುಪಿ: ಅವಧೂತ ಪರಂಪರೆಯ ಪ್ರಮುಖ ಕೇಂದ್ರ ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠೆ ಕಾರ್ಯಕ್ರಮ ಜ. 15 ಮತ್ತು 16ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
61 ವರ್ಷಗಳ ಹಿಂದೆ ಮಂದಿರವು ಸಾಧ್ವಿ ಸೀತಾ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಿರ್ಮಾಣವಾಗಿತ್ತು. ನಿರಂತರ ಭಜನೆ, ಸತ್ಸಂಗ, ನಿತ್ಯ ಪೂಜೆ, ಬಾಲ ಭೋಜನ, ಸಾಧುಸಂತರಿಗೆ ಆಶ್ರಯ, ದಾನಗಳಿಂದಾಗಿ ನಗರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿ ಸಿದ್ದ ಈ ಮಂದಿರ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದಾಗ ಮುಂಬಯಿ ಮೂಲದ ಉದ್ಯಮಿ ಕೆ.ಕೆ. ಆವರ್ಸೆಕರ್ ಸಹಕಾರದಲ್ಲಿ 4 ಕೋ.ರೂ. ವೆಚ್ಚ ದಲ್ಲಿ ಮರುನಿರ್ಮಾಣಗೊಂಡಿದೆ. ಮಂದಿರದ ವಾಸ್ತು ಶೈಲಿ ಗಣೇಶ ಪುರಿಯಲ್ಲಿರುವ ನಿತ್ಯಾನಂದ ಮಂದಿರದ ಮಾದರಿಯಲ್ಲಿದೆ ಎಂದರು.
ವಿಗ್ರಹ ಮೆರವಣಿಗೆ ಜ. 15ರಂದು ಗಣೇಶ ಪುರಿಯಿಂದ ಆಗಮಿಸಿರುವ ನಿತ್ಯಾನಂದ ಸ್ವಾಮಿ ವಿಗ್ರಹವನ್ನು ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಜೋಡುಕಟ್ಟೆ ವರೆಗೆ ವಾಹನ ಜಾಥಾದಲ್ಲಿ ತರಲಾಗುವುದು. ಜಾಥಾಕ್ಕೆ ಮಣಿಪಾಲ ಗ್ರೂಪ್ ಮುಖ್ಯಸ್ಥ ಡಾ| ರಂಜನ್ ಪೈ ಚಾಲನೆ ನೀಡಲಿದ್ದಾರೆ. ಜೋಡುಕಟ್ಟೆ ಯಿಂದ ಭವ್ಯ ಶೋಭಾಯಾತ್ರೆ ನಡೆಯಲಿದೆ.
6.30ಕ್ಕೆ ಸಭಾ ಕಾರ್ಯಕ್ರಮ ದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕನ್ಯಾಡಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಮೂಡು ಬಿದಿರೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾ ನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರ ಸ್ವಾಮೀಜಿ, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ವಿನಯ ಗುರೂಜಿ ಆಶೀರ್ವಚನ ನೀಡಲಿದ್ದಾರೆ.
ಉದ್ಯಮಿ ಕೆ.ಕೆ. ಆವರ್ಸೆಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ರಘುಪತಿ ಭಟ್, ಉದ್ಯಮಿ ಡಾ| ಜಿ. ಶಂಕರ್, ನಿತ್ಯಾನಂದ ಖೋಡೆ, ಪುರುಷೋತ್ತಮ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾಂಞಂಗಾಡ್‌ನ ನಿತ್ಯಾನಂದ ಗುರು ವಿದ್ಯಾಕೇಂದ್ರದ ವಿಶ್ವಸ್ತ ಮೋಹನ್ ನಂಬಿಯಾರ್, ಗೌರವಾಧ್ಯಕ್ಷರಾದ ಎ.ಪಿ. ಗಿರೀಶ್, ಎಂ.ಎಂ.ಪಡಿಯಾರ್, ಡಾ| ರಘುವೀರ್ ಪೈ, ಗೋವಾ ಸಂಚಾಲಕ ಶಶಿಕುಮಾರ್ ಶೆಟ್ಟಿ, ಸಂಚಾಲಕ ಮಹಾಬಲ ಕುಂದರ್, ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಜ. 16ರಂದು ಕಲಶಾಭಿಷೇಕ
ವೇ| ಮೂ| ಹಯಗ್ರೀವ ತಂತ್ರಿ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ಕಾರ್ಯ ನಡೆಯಲಿದ್ದು, ಬೆಳಗ್ಗೆ 7.50ಕ್ಕೆ ಭಗವಾನ್ ನಿತ್ಯಾನಂದ ಸ್ವಾಮಿಗಳ ಬಿಂಬ ಪುನಃ ಪ್ರತಿಷ್ಠೆ, ಜೀವ ಕಲಾಶಾಭಿಷೇಕ ಪ್ರಸನ್ನ ಪೂಜೆ, 9.30ಕ್ಕೆ ನಿತ್ಯಾನಂದ ಸ್ವಾಮಿಗೆ 108 ಕಲಶ ಸಹಿತ ಪ್ರಸನ್ನ ಪೂಜೆ, 11.30ಕ್ಕೆ ಮಹಾಪೂಜೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮ, ಸಂತಸಮಾಗಮ, ರಾಷ್ಟ್ರೀಯ ಮಟ್ಟದ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಭಜನೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.