ಕರಾವಳಿಯ ಜನರಿಗೆ ಉದ್ಯೋಗ ಸೃಷ್ಟಿ ನನ್ನ ಮೊದಲ ಆದ್ಯತೆ: ಪ್ರಸಾದ್‌ರಾಜ್ ಕಾಂಚನ್
ಕಡೆಕಾರು ಕುತ್ಪಾಡಿ ಭಾಗದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆ
Team Udayavani, May 7, 2023, 2:52 PM IST
ಮಲ್ಪೆ: ಕರಾವಳಿಯ ಜನರಿಗೆ ಉದ್ಯೋಗ ಸೃಷ್ಟಿ ನನ್ನ ಮೊದಲ ಆದ್ಯತೆ. ಶಾಂತಿ ಸೌಹಾರ್ದತೆ ಗಟ್ಟಿ ಮಾಡಿದರೆ ಕರಾವಳಿಗೆ ದೇಶ ವಿದೇಶಗಳಿಂದ ಬಂಡವಾಳ ಹರಿದು ಬರುತ್ತದೆ. ನಮ್ಮ ಊರಿನ ಯುವ ಪ್ರತಿಭೆಗಳಿಗೆ ಇಲ್ಲೇ ಉದ್ಯೋಗ ನೀಡುವ ಉದ್ಯಮಗಳನ್ನು ಸ್ಥಾಪನೆ ಮಾಡಲು ನಾನು ಕಂಕಣ ಬದ್ಧನಾಗಿದ್ದೇನೆ. ನನ್ನ ಎಲ್ಲಾ ಶಕ್ತಿ ಮೀರಿ ಜಿಲ್ಲಾ ಕೇಂದ್ರವಾಗಿದ್ದ ಉಡುಪಿಯನ್ನು ಸರ್ವತೋಮುಖವಾಗಿ ಬೆಳೆಸಿ ದೇಶ ವಿದೇಶಗಳ ಗಮನ ಉಡುಪಿಯ ಕಡೆಗೆ ಸೆಳೆಯುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್‌ಹೇಳಿದರು.
ಅವರು ಕಡೆಕಾರು ಕುತ್ಪಾಡಿ ಭಾಗದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು. ನಾರಾಯಣ ಗುರು ಅಭಿವೃದ್ಧಿ ಮಂಡಳಿಗೆ 1250 ಕೋ.ರೂಕಾಂಗ್ರೆಸ್ ನಾಯಕ ಸದಾಶಿವ ಅಮೀನ್ ಕಟ್ಟೆಗುಡ್ಡೆ ಮಾತನಾಡಿ, ನಾರಾಯಣ ಗುರು ಅಭಿವೃದ್ಧಿ ಮಂಡಳಿಗೆ ಕಾಂಗ್ರೆಸ್ ರೂ. 1250 ಕೋಟಿ ಮೀಸಲಿಡಲಿದೆ. ಕರಾವಳಿಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಿ ವಿಶೇಷ ಐಟಿ ಹಾಗೂ ಗಾರ್ಮೆಂಟ್ಸ್ ಹಬ್ ವಲಯ ರಚನೆ ಮಾಡುವ ಭರವಸೆ ಕರಾವಳಿಯ ಅಭಿವೃದ್ಧಿಗೆ ವೇಗ ನೀಡುವ ವಿಚಾರವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಸುರೇಶ್ ಶೆಟ್ಟಿ ಬನ್ನಂಜೆ ಮಾತನಾಡಿ, ಉಡುಪಿ ನಗರದ ಅನೇಕ ಭಾಗಗಳಲ್ಲಿ ಪ್ರಚಾರ ಕೆಲಸಕ್ಕೆ ಹೋದಾಗ ಜನ ಬಿಜೆಪಿಯನ್ನು ನಿಂದಿಸುವುದು ಕಂಡು ಬಂತು. ಡ್ರೈನೇಜ್ ನೀರು ಬಾವಿ ಸೇರಿ ಹಾಳಾಗಿವೆ. ಸಣ್ಣಮಳೆ ಬಂದರೂ ಮನೆ ಒಳಗೆ ನೀರು ಬರುವ ಪರಿಸ್ಥಿತಿ. ಬನ್ನಂಜೆ, ಶಿರಿಬೀಡು, ಕಡಿಯಾಳಿ, ಗುಂಡಿಬೈಲಿನಲ್ಲಿದೆ. ಉಡುಪಿ ನಗರದ ಜನ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ ಎಂದರು.
ಮೀನುಗಾರರಿಗೆ ಬಂಪರ್ ಸೌಲಭ್ಯಗಳು
ಪ್ರತಿಯೊಬ್ಬ ಮೀನುಗಾರರಿಗೆ ಹತ್ತು ಲಕ್ಷ ರೂ. ವಿಮೆ ಸೌಲಭ್ಯ, ಪ್ರತಿ ಮೀನುಗಾರ ಮಹಿಳೆಗೆ ಒಂದು ಲಕ್ಷ ರೂ. ಬಡ್ಡಿ ರಹಿತ ಸಾಲ, ಆಧುನಿಕ ಸುಸಜ್ಜಿತ ಬೋಟ್ ಖರೀದಿಸಲು ರೂ. 25 ಲಕ್ಷದವರೆಗೆ ಸಹಾಯಧನ, ಡಿಸೇಲ್ ಸಹಾಯ ಧನ ರೂ. 25 ಕ್ಕೆ ಏರಿಕೆ, ಪ್ರಮಾಣವನ್ನು 300 ರಿಂದ 500 ಲೀಟರ್‌ಗೆ ಏರಿಕೆ ಇವೆಲ್ಲವೂ ಕಾಂಗ್ರೆಸ್ ಸರಕಾರ ಬಂದರೆ ಖಚಿತವಾಗಿ ಜಾರಿ ಆಗುವ ಯೋಜನೆಗಳು ಎಂದು ಜಿ. ಪಂ. ಮಾಜಿ ಸದಸ್ಯ ದಿವಾಕರ ಕುಂದರ್ ಹೇಳಿದರು.
ಬಿಜೆಪಿಗೆ ಸುಳ್ಳೆ ಮನೆ ದೇವರು
ಕಾಂಗ್ರೆಸ್ ಮುಖಂಡ ಕೀರ್ತಿ ಶೆಟ್ಟಿ ಅಂಬಲಪಾಡಿ ಮಾತನಾಡಿ, ಬಿಜೆಪಿಯ ಮುಖಂಡರು ಸುಳ್ಳನ್ನೇ ತಮ್ಮ ಮನೆ ದೇವರನ್ನಾಗಿ ಮಾಡಿದ್ದಾರೆ. ರಾಷ್ಟ್ರಮಟ್ಟದಿಂದ ಉಡುಪಿಯವರೆಗೆ ಬಿಜೆಪಿ ಮುಖಂಡರು ಮಾತನಾಡುವುದು ಸುಳ್ಳು ಮಾತ್ರ. ಡಬಲ್ ಇಂಜಿನ್ ಇದ್ದೂ ಇನ್ನೂ ಇಂದ್ರಾಳಿ ಸೇತುವೆಯನ್ನು ಒಂದಿಂಚು ಅಗಲ ಮಾಡಲು ಇವರಿಂದ ಆಗಲಿಲ್ಲ. ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ ಆದರೂ ನಳಿನ್ ಕುಮಾರ್ ಕಟೀಲ್ ರಸ್ತೆ ಚರಂಡಿ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಸರಕಾರ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಈ ಬಾರಿ ಬರುವುದು ಖಚಿತ. ಇದು ಮುಂದಿನ ವರ್ಷ ಲೋಕಸಭಾ ಚುನಾವಣೆಗೂ ದಿಕ್ಸೂಚಿ ಆಗಿ ಮುಂದಿನ ವರ್ಷ ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಸರಕಾರ ಬರಲಿದೆ. ಎಲ್ಲಾ ಜನರನ್ನು ಶಾಶ್ವತವಾಗಿ ಮೂರ್ಖರನ್ನಾಗಿ ಮಾಡಿ ಇಡಲು ಸಾಧ್ಯ ಇಲ್ಲ ಎಂದು ಬಿಜೆಪಿಗೆ ಸದ್ಯದಲ್ಲೇ ಅರಿವಾಗಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ ಹೇಳಿದರು.
ಕಾಂಗ್ರೆಸ್ ಸಾಧನೆ ತನ್ನ ಸಾಧನೆ ಎನ್ನುತ್ತಿದೆ ಬಿಜೆಪಿ
ಕಾಂಗ್ರೆಸ್ ಮಾಡಿದ ಸಾಧನೆಗಳನ್ನೇ ತಾನು ಮಾಡಿದ ಸಾಧನೆ ಎಂದು ಹೋದಲೆಲ್ಲಾ ಹೇಳುವ ಬಿಜೆಪಿ ಮುಖಂಡರಿಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವಾ? ಮೋದಿ ಸರಕಾರ ಉದ್ಘಾಟನೆ ಮಾಡಿದ ಎಲ್ಲವೂ ಡಾ| ಮನಮೋಹನ್ ಸಿಂಗ್ ಸರಕಾರ ಮಾಡಿದ ಯೋಜನೆಗಳನ್ನು ಎಂಬುದು ಮತದಾರರಿಗೆ ಮನ ಮುಟ್ಟುವಂತೆ ಹೇಳುವ ಕೆಲಸ ಉಡುಪಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಿದೆ ಎಂದು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನಕರ ಹೇರೂರ್ ಹೇಳಿದರು.
ಮುಖಂಡರಾದ ವಾಮನ ಬಂಗೇರ, ಮಹಾಬಲ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ಪ್ರಶಾಂತ್ ಪೂಜಾರಿ, ಆನಂದ ಪೂಜಾರಿ, ಮಿಥುನ್ ಅಮೀನ್, ಶಬರೀಶ್ ಸುವರ್ಣ, ಬಾಲಕೃಷ್ಣ ಪೂಜಾರಿ, ಮಮತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಲಕ್ಷ್ಮಣ್, ಭಾಸ್ಕರ ದೇವಾಡಿಗ, ಅಣ್ಣಯ್ಯ ಸೇರಿಗಾರ್, ನಾಸೀರ್, ನಶೀಶ್, ಆರ್. ಕೆ. ರಮೇಶ್ ಪೂಜಾರಿ, ಜ್ಯೋತಿ ಹೆಬ್ಟಾರ್, ಜಯಶ್ರೀ ಶೇಟ್, ಸತೀಶ್ ಕುಮಾರ್ ಮಂಚಿ, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.