ಕಾಪು ತಾಲೂಕು ಮತ ಎಣಿಕೆ ಪೂರ್ಣ: ರಾತ್ರಿ 1.45ಕ್ಕೆ ಪೂರ್ಣಗೊಂಡ ಮತ ಎಣಿಕೆ
ಬಿಜೆಪಿ 151, ಕಾಂಗ್ರೆಸ್ 115, ಗ್ರಾಮಾಭಿವೃದ್ಧಿ, ಪಕ್ಷೇತರ, ಎಸ್.ಡಿ.ಪಿ.ಐಗೆ ತಲಾ 8 ಸ್ಥಾನ
Team Udayavani, Dec 31, 2020, 1:50 AM IST
ಕಾಪು: ಕಾಪು ತಾಲೂಕಿನ 290 ಸ್ಥಾನಗಳ ಪೈಕಿ ಬಜೆಪಿ ಬೆಂಬಲಿತರು 151 ಕಾಂಗ್ರೆಸ್ ಬೆಂಬಲಿತರು 115, ಪಕ್ಷೇತರ 8, ಎಸ್.ಡಿ.ಪಿ.ಐ 8, ಬೆಳಪು ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಗ್ರಾಮಾಭಿವೃದ್ಧಿ ಸಮಿತಿಯು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
16 ಗ್ರಾಮ ಪಂಚಾಯತ್ ಗಳ 142 ಮತಗಟ್ಟೆಯಲ್ಲಿ, 100 ಸ್ಥಾನಗಳಲ್ಲಿ 290 ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದ್ದು, 650 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
290 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 280 ಸ್ಥಾನಗಳಿಗೆ ಕಾಂಗ್ರೆಸ್, ಬಿಜೆಪಿ ಬೆಂಬಲಿತರ ಜೊತೆಗೆ ಎಸ್.ಡಿ.ಪಿ.ಐ ಮತ್ತು ಪಕ್ಷೇತರರೂ ತೀವ್ರ ಸ್ಪರ್ಧೆಯೊಡ್ಡಿದ್ದರು.
ಬಿಜೆಪಿ 10, ಕಾಂಗ್ರೆಸ್ 5 , ಗ್ರಾಮಾಭಿವೃದ್ಧಿ 1 ಗ್ರಾಮ ಪಂಚಾಯತ್ ನಲ್ಲಿ ಆಡಳಿತ : ಕಾಪು ತಾಲೂಕಿನ 16 ಗ್ರಾಮ ಪಂಚಾಯತ್ ಗಳ ಪೈಕಿ ಎಲ್ಲೂರು, ಪಲಿಮಾರು, ಮುದರಂಗಡಿ, ಇನ್ನಂಜೆ, ಪಡುಬಿದ್ರಿ, ಬಡಾ, ಬೆಳ್ಳೆ, ಮಜೂರು, ಹೆಜಮಾಡಿ, ಕುತ್ಯಾರು ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಹಾಗೂ ತೆಂಕ, ಶಿರ್ವ, ಕೋಟೆ, ಕುರ್ಕಾಲು, ಕಟಪಾಡಿ ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಮತ್ತು ಬೆಳಪುವಿನಲ್ಲಿ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಗ್ರಾಮಾಭಿವೃದ್ಧಿ ಸಮಿತಿಯು ಆಡಳಿತದ ಚುಕ್ಕಾಣಿ ಹಿಡಿಯಲಿದೆ.
ಪಲಿಮಾರಿನಲ್ಲಿ ಬಿಜೆಪಿ ಆಡಳಿತ : ಪಲಿಮಾರು 14 ಸ್ಥಾನಗಳಲ್ಲಿ 9 ಬಿಜೆಪಿ ಬೆಂಬಲಿತರು ಮತ್ತು 7 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.
ಎಲ್ಲೂರಿನಲ್ಲಿ ಬಿಜೆಪಿಗೆ ಮತ್ತೆ ಆಡಳಿತ: ಎಲ್ಲೂರು ಗ್ರಾಮ ಪಂಚಾಯತ್ 14 ಸ್ಥಾನಗಳಲ್ಲಿ 10 ಬಿಜೆಪಿ ಬೆಂಬಲಿತರು ಮತ್ತು 4 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.
ಬೆಳಪು ಮತ್ತೆ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡ : ಬೆಳಪು ಗ್ರಾಮ ಪಂಚಾಯತ್ ನಲ್ಲಿ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಗ್ರಾಮಾಭಿವೃದ್ಧಿ ಸಮಿತಿ 8, ಬಿಜೆಪಿ 1 ಮತ್ತು ಎಸ್.ಡಿ.ಪಿ.ಐ 2 ಸ್ಥಾನಗಳನ್ನು ಗೆದ್ದಿವೆ.
ಕುತ್ಯಾರಿನಲ್ಲಿ ಅರಳಿದ ಬಿಜೆಪಿ : ಕುತ್ಯಾರು ಗ್ರಾಮ ಪಂಚಾಯತ್ ನ 14 ಸ್ಥಾನಗಳ ಪೈಕಿ 10 ಬಿಜೆಪಿ ಬೆಂಬಲಿತರು ಮತ್ತು 4 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಇವರಲ್ಲಿ ಬಿಜೆಪಿ -2, ಕಾಂಗ್ರೆಸ್-2 ಅವಿರೋಧ ಆಯ್ಕೆ ನಡೆದಿತ್ತು.
ಹೆಜಮಾಡಿಯಲ್ಲಿ ಬಿಜೆಪಿ ಜಯ : ಹೆಜಮಾಡಿ ಗ್ರಾಮ ಪಂಚಾಯತ್ ನ 21 ಸ್ಥಾನಗಳ ಪೈಕಿ 16 ಬಿಜೆಪಿ ಬೆಂಬಲಿತ, 4 ಕಾಂಗ್ರೆಸ್ ಬೆಂಬಲಿತರು ಮತ್ತು 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 1 ಸ್ಥಾನ ಕ್ಕೆ ಅವಿರೋಧ ಆಯ್ಕೆ ನಡೆದಿತ್ತು.
ಕೋಟೆಯಲ್ಲಿ ಕಾಂಗ್ರೆಸ್ ಗೆ ಜೈ : ಕೋಟೆ ಗ್ರಾಮ ಪಂಚಾಯತ್ ನ15 ಸ್ಥಾನಗಳ ಪೈಕಿ 8 ಕಾಂಗ್ರೆಸ್ ಬೆಂಲಿತರು ಮತ್ತು 7 ಮಂದಿ ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದ್ದಾರೆ.
ಮಜೂರು ಮತ್ತೆ ಬಿಜೆಪಿಗೆ : ಮಜೂರು ಗ್ರಾಮ ಪಂಚಾಯತ್ ನ 13 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 8 ಮತ್ತು ಕಾಂಗ್ರೆಸ್ ಬೆಂಬಲಿತರು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬೆಳ್ಳೆಯಲ್ಲಿ ಬಿಜೆಪಿ ಕಮಾಲ್ : ಬೆಳ್ಳೆ ಗ್ರಾಮ ಪಂಚಾಯತ್ ನ 18 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 16 ಮತ್ತು ಕಾಂಗ್ರೆಸ್ ಬೆಂಬಲಿತರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಕುರ್ಕಾಲು ಕಾಂಗ್ರೆಸ್ ಪಾಲು : ಕುರ್ಕಾಲು ಗ್ರಾಮ ಪಂಚಾಯತ್ ನ 14 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 4 ಮತ್ತು ಕಾಂಗ್ರೆಸ್ ಬೆಂಬಲಿತರು 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನಂಜೆಯಲ್ಲಿ ಬಿಜೆಪಿ ಜಯ : ಇನ್ನಂಜೆ ಗ್ರಾಮ ಪಂಚಾಯತ್ ನ 13 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 7 ಮತ್ತು ಕಾಂಗ್ರೆಸ್ ಬೆಂಬಲಿತರು 3 ಮತ್ತು ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬಡಾ (ಉಚ್ಚಿಲ)ದಲ್ಲಿ ಬಿಜೆಪಿ : ಬಡಾ ಉಚ್ಚಿಲ ಗ್ರಾಮ ಪಂಚಾಯತ್ ನ 21 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 11 ಮತ್ತು ಕಾಂಗ್ರೆಸ್ ಬೆಂಬಲಿತರು 6 ಮತ್ತು ಎಸ್.ಡಿ.ಪಿ.ಐ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಶಿರ್ವದಲ್ಲಿ ಕಾಂಗ್ರೆಸ್ ಗೆ ಜಯಮಾಲೆ : ಶಿರ್ವ ಗ್ರಾಮ ಪಂಚಾಯತ್ ನ 34 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 12 ಮತ್ತು ಕಾಂಗ್ರೆಸ್ ಬೆಂಬಲಿತರು 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಮುದರಂಗಡಿಯಲ್ಲಿ ಬಿಜೆಪಿಗೆ ಅಧಿಕಾರ : ಮುದರಂಗಡಿ ಗ್ರಾಮ ಪಂಚಾಯತ್ ನ 15 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 10 ಮತ್ತು ಕಾಂಗ್ರೆಸ್ ಬೆಂಬಲಿತರು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ತೆಂಕದಲ್ಲಿ ಕಾಂಗ್ರೆಸ್ : ತೆಂಕ ಗ್ರಾಮ ಪಂಚಾಯತ್ ನ 11 ಸ್ಥಾನಗಳ ಪೈಕಿ 5 ಬಿಜೆಪಿ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತರು 6 ಕ್ಷೇತ್ರಗಳಲ್ಲಿ, ಜಯ ಸಾಧಿಸಿದ್ದಾರೆ.
ಪಡುಬಿದ್ರಿಯಲ್ಲಿ ಬಿಜೆಪಿಗೆ ಅವಕಾಶ : ಪಡುಬಿದ್ರಿ ಗ್ರಾಮ ಪಂಚಾಯತ್ ನ 34 ಸ್ಥಾನಗಳ ಪೈಕಿ 16 ಬಿಜೆಪಿ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತರು 12 ಕ್ಷೇತ್ರಗಳಲ್ಲಿ, ಎಸ್.ಡಿ.ಪಿ.ಐ 2, ಪಕ್ಷೇತರ 4 ಸಾಧಿಸಿದ್ದಾರೆ.
ಕಟಪಾಡಿಯಲ್ಲಿ ಕಾಂಗ್ರೆಸ್ ಗೆ ಗೆಲುವು: ಕಟಪಾಡಿ ಗ್ರಾಮ ಪಂಚಾಯತ್ ನ 26 ಸ್ಥಾನಗಳ ಪೈಕಿ 10 ಬಿಜೆಪಿ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತರು 16 ಕ್ಷೇತ್ರಗಳಲ್ಲಿ, ಜಯ ಸಾಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.