ಉಳ್ಳಾಲ ದರ್ಗಾ: ಹಬ್ಬ ಆಚರಣೆ ವಿವಾದ; ಘರ್ಷಣೆ


Team Udayavani, Jun 27, 2017, 3:45 AM IST

26-REPORT-1.jpg

ಉಳ್ಳಾಲ: ಉಳ್ಳಾಲದಲ್ಲಿ ಈದ್‌ ಉಲ್‌ ಫಿತ್ರ ಆಚರಣೆ ವಿಚಾರದಲ್ಲಿ ನಡೆದ ಗೊಂದಲ ಸೋಮವಾರ ಗಂಭೀರ ಸ್ವರೂಪ ಪಡೆದಿದ್ದು, ಈದ್‌ ನಮಾಜ್‌ಗೆ ಬಂದಿದ್ದ ಸಾವಿರಾರು ಜನರು ದರ್ಗಾಕ್ಕೆ ಬೀಗ ಹಾಕಿರುವುದನ್ನು ಖಂಡಿಸಿ ದರ್ಗಾದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡರೆ ಇನ್ನೋರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳ್ಳಾಲ ದರ್ಗಾ ಸಮಿತಿ ಸದಸ್ಯ ಮಹಮ್ಮದ್‌ ಆಳೇಕಲ ಮತ್ತು ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್‌ ರಿಲ್ವಾನ್‌ ಗಾಯಗೊಂಡವರು. ಇವರಲ್ಲಿ ಮಹಮ್ಮದ್‌ ಅಳೇಕಲ ಅವರಿಗೆ ಗಂಭೀರ ಗಾಯವಾಗಿದ್ದು, ದಾಂಧಲೆ ಸಂದರ್ಭದಲ್ಲಿ ಹಲ್ಲೆಗೀಡಾದವರಿಗೆ ಪೊಲೀಸರು ರಕ್ಷಣೆ ನೀಡಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು.

ಘಟನೆಯ ವಿವರ: ಈದ್‌ ಉಲ್‌ ಫಿತ್ರ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರದೇಶದಲ್ಲಿ ಚಂದ್ರ ದರ್ಶನವಾದರೆ ಮಂಗಳೂರು, ಉಡುಪಿ ಸಹಿತ ಉಳ್ಳಾಲದ ಖಾಝಿಗಳು ಪರಸ್ಪರ ಚರ್ಚಿಸಿ ಈದ್‌ ಆಚರಣೆಯ ಘೋಷಣೆಯನ್ನು ಮಾಡುತ್ತಿದ್ದು, ಶನಿವಾರ ಚಂದ್ರದರ್ಶನವಾದ ಹಿನ್ನೆ°ಲೆಯಲ್ಲಿ ಉಡುಪಿ ಮತ್ತು ಮಂಗಳೂರು ಖಾಝಿಯವರು ರವಿವಾರ ಈದ್‌ ಉಲ್‌ ಫಿತ್ರ ನಡೆಯಲಿದೆ ಎಂದು ಘೋಷಿಸಿದ್ದರು. ಆದರೆ ಪ್ರಸ್ತುತ ಕೇರಳದಲ್ಲಿ ನೆಲೆಸಿರುವ ಉಳ್ಳಾಲ ಖಾಝಿಯವರಾದ ಕೂರತ್‌ ತಂಗಳ್‌ ಅವರು ತನ್ನ ವ್ಯಾಪ್ತಿಯ ಮಸೀದಿಗಳಿಗೆ ರವಿವಾರ ಉಪವಾಸ ಮುಂದುವರಿಸಬೇಕು. ಸೋಮವಾರ ಈದ್‌ ಆಚರಣೆ ನಡೆಯಲಿದೆ ಎಂದು ಘೋಷಿಸಿದ್ದರು. ಆದರೆ ಉಳ್ಳಾಲ ದರ್ಗಾದ ಸಹಾಯಕ ಖಾಝಿ ಉಡುಪಿ ಮತ್ತು ದ.ಕ.ಜಿಲ್ಲಾ ಖಾಝಿಯವರ ಘೋಷಣೆಯಂತೆ ರವಿವಾರ ಈದ್‌ ಆಚರಣೆಗೆ ಕರೆ ನೀಡಿದ್ದರು. ಈ ಸಂದರ್ಭದಲ್ಲಿ ಕೂರತ್‌ ತಂಗಳ್‌ ಅನುಯಾಯಿಗಳು ಸೋಮವಾರ ಈದ್‌ ಆಚರಣೆ ನಡೆಸುವ ಘೋಷಣೆ ಗೊಂದಲಕ್ಕೆ ಕಾರಣವಾಗಿತ್ತು.

ಮೊಹಲ್ಲಾ ನಮಾಜ್‌ ಬಳಿಕ ದರ್ಗಾಕ್ಕೆ ಆಗಮಿಸಿದ ಜನರು: ಕೂರತ್‌ ತಂಗಳ್‌ ಅವರ ಆದೇಶದಂತೆ ರವಿವಾರ ಉಪವಾಸ ಆಚರಿಸಿದ ಉಳ್ಳಾಲ ದರ್ಗಾ ವ್ಯಾಪ್ತಿಯ ಕೆಲವು ಮಸೀದಿಗಳ ಭಕ್ತಾಧಿಗಳು ಈದ್‌ ನಮಾಜ್‌ಗೆ ಸುಮಾರು 9.30ರ ವೇಳೆಗೆ ಆಗಮಿಸಿದಾಗ ದರ್ಗಾಕ್ಕೆ ಬೀಗ ಹಾಕಲಾಗಿತ್ತು. ಈ ಸಂದರ್ಭದಲ್ಲಿ ನಮಾಜ್‌ಗೆ ಬಂದಿದ್ದ ತಂಡದ ಕೆಲವು ಮುಖಂಡರು ಬೀಗ ತೆಗೆಯುವಂತೆ ಒತ್ತಾಯಿಸಿದ್ದು ಈ ಸಂದರ್ಭದಲ್ಲಿ ದರ್ಗಾ ಎದುರು ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಮಾಸ್ತಿಕಟ್ಟೆಯ ಮಹಮ್ಮದ್‌ ರಿಲ್ವಾನ್‌ ಮಾತಿನ ಚಕಮಕಿ ನಡೆಸುತ್ತಿದ್ದ ಎರಡು ತಂಡದವರನ್ನು ಬಿಡಿಸಲು ಹೋದಾಗ ಗುಂಪೊಂದು ರಿಲ್ವಾನ್‌ಗೆ ಹಲ್ಲೆ ನಡೆಸಿದ್ದು, ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಹಲ್ಲೆ ನಡೆಸುತ್ತಾ ಮಸೀದಿಯ ಹೊರಗೆ ತಂದರು: ಈದ್‌ ನಮಾಜ್‌ಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ದರ್ಗಾ ಸದಸ್ಯ ಕೆ.ಎನ್‌ ಮಹಮ್ಮದ್‌ ಅಳೇಕಲ ಸಮಾಧಾನಿಸಲು ಆಗಮಿಸಿದ್ದು, ಈ ಸಂದರ್ಭದಲ್ಲಿ ತಂಡವೊಂದು ಮಹಮ್ಮದ್‌ ಆವರು ದರ್ಗಾ ಆಡಳಿತ ಸಮಿತಿಯ ಕಡೆಯವರು ಎಂದು ಆರೋಪಿಸಿ ಹಿಗ್ಗಾಮುಗ್ಗ ಥಳಿಸಿತ್ತು. ಪೊಲೀಸರು ಮಹಮ್ಮದ್‌ ಅವರ ರಕ್ಷಣೆಗೆ ಧಾವಿಸಿದರೂ ಹಲ್ಲೆಕೋರರ ತಂಡ ಮಹಮ್ಮದ್‌ ಅವರನ್ನು ಎಳೆದಾಡುತ್ತಾ ಮಸೀದಿಯ ಹೊರಗಡೆವರೆಗೆ ಎಳೆದಾಡುತ್ತಾ ಬಂದಿತ್ತು. 

ಈ ಸಂದರ್ಭದಲ್ಲಿ ಡಿಸಿಪಿ ಹನುಂತರಾಯ, ಶಾಂತರಾಜು,ಎಸಿಪಿ ಶೃತಿ, ಇನ್ಸ್‌ಪೆಕ್ಟರ್‌ಗಳಾದ ಗೋಪಿಕೃಷ್ಣ ತಿಲಕ್‌ಚಂದ್ರ, ಧರ್ಮೇಂದ್ರ ಎಸ್‌ಐಗಳಾದ ರಾಜೇಂದ್ರ, ಪ್ರಕಾಶ್‌, ಕೆಎಸ್‌ಆರ್‌ಪಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು.

ನಮಾಜ್‌ ಬಳಿಕ ಶಾಂತ : ಪೊಲೀಸರ ಮಾತುಕತೆ ಬಳಿಕ ದರ್ಗಾದಲ್ಲಿ ಶಿಹಾಬುದ್ಧೀನ್‌ ಸಖಾಫಿ ಉಳ್ಳಾಲ ಅವರ ನೇತೃತ್ವದಲ್ಲಿ ನಮಾಜ್‌ ಹಾಗೂ ಈದ್‌ ಖುತುಬಾ ನಡೆಯಿತು. ಬಳಿಕ ಮಾತನಾಡಿದ ಶಿಹಾಬುದ್ಧೀನ್‌ ಸಖಾಫಿ ಈ ವರ್ಷ ರಮಳಾನ್‌ 30 ಪೂರ್ತಿ ಲಭಿಸಿದ್ದು ಕೂರತ್‌ ತಂಗಳ್‌ರವರ ನಿರ್ದೇಶನದಂತೆ ಇಂದು ಈದ್‌ ಆಚರಿಸಲಾಯಿತು. ಕೂರತ್‌ ತಂಗಳ್‌ ಅವರು ಸುಮಾರು 180ಕ್ಕಿಂತಲೂ ಅಧಿಕ ಮೊಹಲ್ಲಗಳಿಗೆ ಖಾಝಿ ಯಾಗಿದ್ದು. ಇವುಗಳಲ್ಲಿ ಉಳ್ಳಾಲವೂ ಒಂದು. ನಿನ್ನೆ ಖಾಝಿಯವರ ತೀರ್ಮಾನವನ್ನು ವಿರೋಧಿಸಿ ಒಂದು ಬಣ ಉಳ್ಳಾಲದಲ್ಲಿ ಈದ್‌ ಆಚರಿಸಿತ್ತು. ಇದನ್ನು ಕೂರತ್‌ ತಂಗಳ್‌ ಅನುಯಾಯಿಗಳು ವೈಚಾರಿಕವಾಗಿ ವಿರೋಧಿಸಿದ್ದರಾದರೂ ಯಾವುದೇ ಪ್ರತಿರೋಧ ಮಾಡಿರಲಿಲ್ಲ. ಆದರೆ ಇಂದು ಹಬ್ಬ ಆಚರಿಸಿದವರಿಗೆ ಝಿಯಾರತ್‌ ಮಾಡುವ ಅವಕಾಶ ನಿರಾಕರಿಸಿದ್ದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದರ್ಗಾ ಅಧ್ಯಕ್ಷ ಅಬ್ದುಲ್‌ ರಶೀದ್‌ ಅವರು, ದರ್ಗಾದೊಳಗಡೆ ಅಕ್ರಮ ಪ್ರವೇಶಗೈದು ಮಸೀದಿಯ ಧಾರ್ಮಿಕ ವಿಧಿಗಳ ವಿಚಾರಗಳನ್ನು ಉಲ್ಲಂಘಿಸಿ, ಧ್ವನಿ ವರ್ಧಕಗಳ ಮೂಲಕ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ದರ್ಗಾ ಪಾವಿತ್ರÂತೆ ಮತ್ತು ಸಹಬಾಳ್ವೆಗೆ ಧಕ್ಕೆಯುಂಟಾಗಿದೆ. ಏಕಾಏಕಿ ತರಾವಿ ನಮಾಜಿಗೆ ಕರೆಕೊಟ್ಟ ಕೆಲವರ ವಿಶ್ವಾಸದ್ರೋಹಕ್ಕೆ ಅನುಗುಣವಾಗಿ ಬಾಗಿಲು ಮುಚ್ಚಿ ದರ್ಗಾದ ಪಾವಿತ್ರÂತೆಯನ್ನು ಉಳಿಸಬೇಕಾಯಿತು. ಹಬ್ಬ ಮುಗಿದರೂ ಮೂರನೆಯ ಹೆಚ್ಚುವರಿ ನಮಾಜನ್ನು ನೆರವೇರಿಸಿ ಉಳ್ಳಾಲದಲ್ಲಿ ಅಶಾಂತಿಗೆ ಪ್ರಚೋದನೆಯನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

ಹಿರಿಯ ವಿಧ್ವಾಂಸರು ಈದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಉಳ್ಳಾಲದಲ್ಲೂ ಹಬ್ಬದ ಆಚರಣೆ ನಡೆಸಲಾಗಿದೆ. ಸೋಮವಾರ ದರ್ಗಾ ವಠಾರದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ 35 ಮಂದಿ ವಿರುದ್ಧ ದೂರು ನೀಡಲಾಗಿದೆ ಎಂದರು. ಉಪಾಧ್ಯಕ್ಷರಾದ ಯು.ಕೆ. ಮೋನು ಇಸ್ಮಾಯಿಲ್‌, ಬಾವ ಮಹಮ್ಮದ್‌, ಪ್ರ. ಕಾರ್ಯದರ್ಶಿ ಮಹಮ್ಮದ್‌ ತ್ವಾಹ , ಜತೆ ಕಾರ್ಯದರ್ಶಿ ಆಝಾದ್‌ ಇಸ್ಮಾಯಿಲ್‌ ಕೋಶಾಧಿಕಾರಿ ಯು.ಕೆ. ಇಲಿಯಾಸ್‌, ಅರೆಬಿಕ್‌ ಟ್ರಸ್ಟ್‌ ಉಪಾಧ್ಯಕ್ಷ ಮಹಮ್ಮದ್‌ ಹಳೆಕೋಟೆ, ಪ್ರ. ಕಾರ್ಯದರ್ಶಿ ಅಮೀರ್‌ ಪಟ್ಲ, ಜತೆ ಕಾರ್ಯದರ್ಶಿ ಆಸೀಫ್‌ ಅಬ್ದುಲ್ಲಾ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.