Karkala: ಕಾರ್ಕಳ- ಕಾಂಗ್ರೆಸ್ ಬ್ರಹತ್ ಕಾಲ್ನಡಿಗೆ ಜಾಥಕ್ಕೆ ಹರಿದು ಬಂದ ಜನ ಸಾಗರ
ಕಾರ್ಕಳದಲ್ಲಿ ಕಾಂಗ್ರೆಸ್ ಗೆಲ್ಲುವ ಶಪತ ಈಡೇರಲಿದೆ ; ಡಾ.ವೀರಪ್ಪ ಮೊಯ್ಲಿ
Team Udayavani, May 2, 2023, 3:03 PM IST
ಕಾರ್ಕಳ; ಕಾರ್ಕಳದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಕಳೆದ 6 ತಿಂಗಳ ಹಿಂದೆ ಶಪತಮಾಡಿದ್ದೆ.ಅದು ಈಡೇರುವ ಲಕ್ಷಣಗಳು ಇಂದು ಇಲ್ಲಿ ಸೇರಿರುವ ಜನಸಾಗರವೇ ಸಾಕ್ಷಿ.ಜನ ಬದಲಾವಣೆ ಬಯಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರ ಜತೆ ಸರಳ ಸಜ್ಜನಿಕೆಯ ಸೇವಾ ಮನೋಭಾವನೆಯ ಉದಯಕುಮಾರ್ ಶೆಟ್ಟಿ ಅವರು ಬಹುಮತದೊಂದಿಗೆ ಆರಸಿ ಬರಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು.
ಅವರು ಮೇ. 1ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕಾರ್ಕಳ ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ನಗರದಲ್ಲಿ ನಡೆದ ಕಾಂಗ್ರೆಸ್ ಕಾಲ್ನಡಿಗೆ ಜಾಥ ಹಾಗೂ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಡವರ ಮಕ್ಕಳು ಶಾಸಕರಾಗಬಹುದು ಎನ್ನುವುದಕ್ಕೆ ನಾವೇ ಸಾಕ್ಷಿ
ರಾಜಕೀಯದಲ್ಲಿ 55 ವರ್ಷಗಳಿಂದ ಜನಸೇವೆ ಮಾಡುತ್ತಿದ್ದೇನೆ.ಎಲ್ಲಿಯೂ ಭಷ್ಟ್ರಚಾರ ಮಾಡಿಲ್ಲ ಮಾಡುವವರಿಗೆ ಬಿಟ್ಟಿಲ್ಲ.ನಾನು ಮುಖ್ಯಮಂತ್ರಿ, ಕೇಂದ್ರ ಸಚಿವನಾಗಿದ್ದ ವೇಳೆ ಹಲವು ಬಡವರ ಪರ ಕಲ್ಯಾಣ ಕಾರ್ಯಕ್ರಮ ಜಾರಿಗೆ ತಂದಿದ್ದೇನೆ. ಮುಂದೆ ಮತ್ತಷ್ಟೂ ಮುಂದುವರೆಸಲು ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಅವರನ್ನು ಗೆಲ್ಲಿಸಬೇಕು ಎಂದರು. ಬಡವನ ಮಗ ಎಂಎಲ್‌ಎ ಆಗಬಹುದು ಎನ್ನುವುದಕ್ಕೆ ನಾನು, ಗೋಪಾಲ ಭಂಡಾರಿ, ಮುಂದೆ ಉದಯ ಶೆಟ್ಟಿ ಸಾಕ್ಷಿಯಾಗಲಿದ್ದಾರೆ ಎಂದರು.
ಎಣ್ಣೆಹೊಳೆ : 138 ಕೋಟಿ ಖರ್ಚುಮಾಡಿದರೂ ಒಂದು ಬಕೆಟ್ ನೀರಿಲ್ಲ !
ಎಣ್ಣೆಹೊಳೆಯಲ್ಲಿ 138 ಕೋಟಿ ಖರ್ಚು ಮಾಡಿ ಅಣೆಕಟ್ಟು ನಿರ್ಮಿಸಿ 2ವರ್ಷವಾದರೂ ಒಂದು ಬಕೆಟ್ ನೀರು ಸಿಕ್ಕಿಲ್ಲ.ಅಣೆಕಟ್ಟಿನ ಮೇಲೆ ನೀರಿಲ್ಲ,ಕೆಳಗೆ ನೀರಿದೆ ಇದು ನೋಡಿದರೆ ಹಾಸ್ಯಚಿತ್ರದ ನೆನಪಾಗುತ್ತದೆ. ಭಷ್ಠಾಚಾರದ ಮೂಲಕ ತನ್ನ ಅಭಿವೃದ್ಧಿಯನ್ನು ಮಾಡಿದ್ದಾರೆ ಸುನೀಲ್ ಹೊರತು ಕಾರ್ಕಳದ ಅಭಿವೃದ್ಧಿಯಲ್ಲ ಎಂದು ರಾಕೇಶ್ ಶೆಟ್ಟಿ ಎಣ್ಣೆಹೊಳೆ ಹೇಳಿದರು.
ಸುನೀಲ್ ಕುಮಾರ್ ನಂ.1 ಭ್ರಷ್ಟ :
ಯಾವುದೇ ಉದ್ಯಮವಿಲ್ಲದೆ ಕೋಟ್ಯಾಂತರ ರೂಪಾಯಿ ಹಣ ಮಾಡಿದ ಸುನೀಲ್ ಕುಮಾರ್ ಅವರು ರಾಜ್ಯದಲ್ಲಿಯೇ ನಂ.1 ಭ್ರಷ್ಠರಾಗಿದ್ದಾರೆ.ಗುರುಗಳಾದ ಮುತಾಲಿಕ್ ಅವರು ತನ್ನ ಶಿಷ್ಯನಿಗೆ ಮತನೀಡಿ ಎಂದು ಜನರಲ್ಲಿ ಬೇಡಿ ಶಾಸಕರನ್ನಾಗಿ ಮಾಡಿದರು.
ಇವರ ಭ್ರಷ್ಠಚಾರ ಹಾಗೂ ಅಹಂಕಾರಕ್ಕೆ ಬೇಸತ್ತ ಮುತಾಲಿಕ್ ಇವರ ಬ್ರಹ್ಮಾಂಡ ಭ್ರಷ್ಠಾಚಾರನ್ನು ಬಯಲಿಗೆ ಎಳೆಯುವುದರ ಜತೆ ಇವರ ಮತ ನೀಡಬೇಡಿ ಎಂದು ಜನರಲ್ಲಿ ಬೇಡುತ್ತಿದ್ದಾರೆ. ಜನರಿಗೆ ಇವರ ದರ್ಪರಾಜಕಾರಣ ಅರಿವಿಗೆ ಬಂದ ಕಾರಣ ಇವತ್ತು ಇಲ್ಲಿ ಸಹಸ್ರ ಸಂಖ್ಯೆ ಜನಸಾಗರವೇ ಸಾಕ್ಷಿ.ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಪ್ರೀತಿಯಿಂದ ತಲುಉವ ವ್ಯಕ್ತಿಯಿದ್ದರೆ ಅದು ಉದಯ ಶೆಟ್ಟಿ ಮಾತ್ರ ಎಂದು ಸುಧೀರ್ ಕುಮಾರ್ ಮರೋಳಿ ಹೇಳಿದರು.
ಬಿಜೆಪಿ ಸರಕಾರವೇ ಉದಯ ಶೆಟ್ಟಿ ಅವರ ರುಣದಲ್ಲಿದ್ದಾರೆ:
ಸೋಲಿನ ಭೀತಿಯಲ್ಲಿರುವ ಸುನೀಲ್ ಕುಮಾರ ಅವರು ಉದಯ ಶೆಟ್ಟಿ ಅವರು ಬಿಜೆಪಿ ರುಣದಲ್ಲಿದ್ದಾರೆ ಎನ್ನುತ್ತಾರೆ.ಆದರೆ ಉದಯ ಶೆಟ್ಟಿ ಅವರಿಗೆ 26ಕೋಟಿ ಬಿಜೆಪಿ ಸರಕಾರದಿಂದ ಬರಲು ಬಾಕಿ ಇದ್ದು ಬಿಜೆಪಿ ಸರಕಾರವೇ ಉದಯ ಶೆಟ್ಟಿ ಅವರ ರುಣದಲ್ಲಿದೆ ಎಂದು ಸುಧೀರ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ,ಕೇರಳ ಸಂಸದ ಪ್ರತಾಪನ್, ಹರ್ಷ ಮೊಯ್ಲಿ, ಪದ್ಮರಾಜ ರಾಮಯ್ಯ, ಜಿ.ಎ ಬಾವ, ದೇವಿಪ್ರಸಾದ್ ಶೆಟ್ಟಿ, ದೀಪಕ್ ಕೋಟ್ಯಾನ್, ಚಂದ್ರಶೇಖರ ಬಾಯಾರಿ, ಸದಾಶಿವ ದೇವಾಡಿಗ, ಮಂಜುನಾಥ ಪೂಜಾರಿ, ಸುರೇಂದ್ರ ಶೆಟ್ಟಿ, ಡಿ. ಆರ್ ರಾಜು, ನೀರೆ ಕೃಷ್ಣ ಶೆಟ್ಟಿ, ಎಂ.ಎ ಗಪೂರ್ ,ಗಿರೀಶ್ ಶೆಟ್ಟಿ ಕುಡುಪುಲಾಜೆ, ಪ್ರೇಮ್ ಕುರ್ಮಾರ್ , ಎಂ.ಜಿ ಹೆಗ್ಡೆ, ಭಾಸ್ಕರ್ ಮೊಯ್ಲಿ, ಜಿಲ್ಲಾ ಕಾಂಗ್ರೆಸ್, ಕಾರ್ಕಳ, ಹೆಬ್ರಿ ತಾ| ಬ್ಲಾಕ್ ಕಾಂಗ್ರೆಸ್ ಘಟಕಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೇಖರ ಮಡಿವಾಳ ಸ್ವಾಗತಿಸಿ, ಶುಭದರಾವ್ ಕಾರ್ಯಕ್ರಮ ನಿರೂಪಿಸಿದರು.
ಸತ್ಯ, ಧರ್ಮದ ಮತ ನನಗೆ ನೀಡಿ:ಉದಯ ಶೆಟ್ಟಿ
ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಕಾರ್ಕಳದಲ್ಲಿ ಬದಲಾವಣೆ ಬೇಕೆಂದು ಬಿಜೆಪಿಯವರೇ ಹೇಳುತ್ತಾರೆ. ಕಟ್ಟ ಕಡೆಯ ವ್ಯಕ್ತಿಗೆ ಗೆಲುವಾಗಬೇಕು. ನನ್ನ ಗೆಲುವಾದರೆ ಅದು ಕಟ್ಟ ಕಡೆಯ ವ್ಯಕ್ತಿಯ ಗೆಲುವಾಗಲಿದೆ. ಆಡಂಬರ, ಅಹಂಕಾರವಿಲ್ಲದೆ ಧರ್ಮ ನ್ಯಾಯ, ವಿನಯತೆಯಿರಬೇಕು. ಸುನಿಲ್ ಕುಮಾರ್ ಅಭಿವೃದ್ದಿಗಿಂತ ದುಪ್ಪಟ್ಟು ಅಭಿವೃದ್ದಿ ನಾನು ಮಾಡಿ ತೋರಿಸುವೆ. ನಿಮ್ಮೆಲ್ಲರ ಚಾಕರಿಯಾಗಿ ಬದ್ಧತೆಯಿಂದ ಕೆಲಸ ಮಾಡುವೆ. ಸುನಿಲರ ಬಳಿ 10 ಸಾವಿರ ಕಾರ್ಯಕರ್ತರಿದ್ದರೆ, 20 ಸಾವಿರ ಕಾರ್ಯಕರ್ತರು ನಮ್ಮಲ್ಲಿದ್ದಾರೆ ಎಂದರು.
ಅಭಿವೃದ್ಧಿ ಎಂದರೆ ರಸ್ತೆ, ಸೇತುವೆ ಅಲ್ಲ. ಸ್ವರ್ಣ ಕಾರ್ಕಳ, ಸುಂದರ ಕಾರ್ಕಳ ನಿರ್ಮಾಣ ಏನೇನ್ನುವುದನ್ನು ತೋರಿಸಿಕೊಡ್ತೆನೆ. ನನಗೆ ಒಂದು ಬಾರಿ ಅವಕಾಶ ಕೊಡಿ. ಮುಂದಿನ ಬಾರಿ ಮತ ಕೇಳದೆ ನೀವೇ ಮತ ಹಾಕುವಂತೆ ಆಡಳಿತ ಮಾಡಿ ತೋರಿಸುವೆ ಸತ್ಯ, ಧರ್ಮದ ಮತ ನನಗೆ ನೀಡಿ ಎಂದು ಮನವಿ ಮಾಡಿದರು.
ಸಹಸ್ರ ಕಾರ್ಯಕರ್ತರ ಜನಸಾಗರ ,ಬ್ರಹತ್ ಬಾವುಟ ಪ್ರದರ್ಶನ
ಕಾರ್ಕಳ ಸ್ವರಾಜ್ ಮೈದಾನದಿಂದ ಸಹಸ್ರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋ ಮೂಲಕ ನಗರದ ಮುಖ್ಯ ರಸ್ತೆಯಾಗಿ ಕಾಲ್ನಡಿಗೆಯಲ್ಲಿ ರೋಡ್ ಶೋದಲ್ಲಿ ಬಂಡಿಮಠ ಬಸ್ ನಿಲ್ದಾಣದಲ್ಲಿ ತಲುಪಿ ಅಲ್ಲಿ ಜಮಾಯಿಸಿದರು. ರೋಡ್ ಶೋ ಉದ್ದಕ್ಕೂ ಬ್ರಹತ್ ಕಾಂಗ್ರೆಸ್ ಬಾವುಟ ಹಿಡಿದು ಪ್ರದರ್ಶನದೊಂದಿಗೆ ಸಾಗಿದರು.ಪುರುಷ, ಮಹಿಳೆಯರು ಪಕ್ಷದ ಬಾವುಟ, ಧ್ವಜಗಳನ್ನು ಕೈಯಲ್ಲಿ ಹಿಡಿದು ಬೀಸುತ್ತ ಜೈ ಉದಯಣ್ಣ ಎಂದು ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.