![Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ](https://www.udayavani.com/wp-content/uploads/2025/02/kadukona-415x278.jpg)
![Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ](https://www.udayavani.com/wp-content/uploads/2025/02/kadukona-415x278.jpg)
Team Udayavani, Jan 29, 2025, 11:50 AM IST
ಕಾರ್ಕಳ: ಇಲ್ಲಿನ ಜೋಡುಕಟ್ಟೆ ಸಿದ್ಧಿವಿನಾಯಕ ಲೇಔಟ್‌ನಲ್ಲಿರುವ ಅನುಗ್ರಹ ಹೆಸರಿನ ಎರಡಂತಸ್ತಿನ ಕಟ್ಟಡದ ಮೊದಲ ಮಹಡಿಯ ಮನೆಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದೆ.
ಟಿವಿ, ಕಿಟಕಿ, ವಿದ್ಯುತ್ ದೀಪಗಳು, ಫ್ಯಾನ್, ಲ್ಯಾಪ್‌ಟಾಪ್ ಮತ್ತು ಪೀಠೊಪಕರಣಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಡಾ. ಚಿದಾನಂದ ಕುಲಕರ್ಣಿ ಅವರ ಕುಟುಂಬ ಇಲ್ಲಿ ವಾಸವಾಗಿದೆ. ರಾತ್ರಿ 1 ಗಂಟೆ ಸುಮಾರಿಗೆ ಹೊಗೆ ಮತ್ತು ಸುಟ್ಟ ವಾಸನೆ ಗಮನಕ್ಕೆ ಬಂದು ಮಲಗಿದ್ದವರು ಎಚ್ಚರಗೊಂಡರು. ಅಷ್ಟರಲ್ಲಾಗಲೇ ಕೆಲವು ಸೊತ್ತುಗಳು ಬೆಂಕಿಗಾಹುತಿಯಾಗಿದ್ದವು. ಬಳಿಕ ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸಿದರು.
ತಪ್ಪಿದಭಾರೀ ಅನಾಹುತ
ವಿದ್ಯುತ್ ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ಆರಂಭಿಕ ಹಂತದಲ್ಲೇ ಮನೆಯವರ ಗಮನಕ್ಕೆ ಬಂದು ಮಾಹಿತಿ ನೀಡಿದ ಕಾರಣ ಸಂಭಾವ್ಯ ಭಾರೀ ಅನಾಹುತವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ಅಗ್ನಿಶಾಮಕ ದಳ ಪ್ರಭಾರ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ. ಅಚ್ಯುತ ಕರ್ಕೇರ, ಹರಿಪ್ರಸಾದ್, ಜಯ ಮೂಲ್ಯ, ನಿತ್ಯಾನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
You seem to have an Ad Blocker on.
To continue reading, please turn it off or whitelist Udayavani.