Karkala: ಹೆಚ್ಚುತ್ತಿರುವ ಸರಗಳ್ಳತನ; ಜನರಿಗೆ ಆತಂಕ
ಕಾರ್ಕಳದಲ್ಲಿ 10 ದಿನದಲ್ಲಿ 2 ಪ್ರಕರಣ; ವಿಳಾಸ ಕೇಳುವ ನೆಪ; ಮಹಿಳೆಯರೇ ಟಾರ್ಗೆಟ್
Team Udayavani, Dec 13, 2024, 1:30 PM IST
ಸಾಂದರ್ಭಿಕ ಚಿತ್ರ
ಕಾರ್ಕಳ: ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಚರಣೆ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಿಂದ ಸ್ವಲ್ಪ ಸಮಯದಿಂದ ಕಡಿಮೆಯಾಗಿದ್ದ ಸರಗಳ್ಳತನ ಪ್ರಕರಣಗಳು ಮತ್ತೆ ಚಾಲ್ತಿಗೆ ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ 10 ದಿನಗಳಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣ ವರದಿಯಾಗಿದೆ. ಈ ನಡುವೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಕಳ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಜನರ ಭಯ ಮಾತ್ರ ದೂರವಾಗಿಲ್ಲ. ಸರಗಳ್ಳರು ಗ್ರಾಮೀಣ ಭಾಗದಲ್ಲಿ ವಿಳಾಸ ಕೇಳುವ ನೆಪವನ್ನು ಮುಂದಿಟ್ಟು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವುದು ಕಂಡುಬಂದಿದೆ.
ಮಹಿಳೆಯ ಚಿನ್ನ ಲೂಟಿ
ಡಿ.2ರಂದು ಬೆಳಗ್ಗೆ 11ಕ್ಕೆ ಕಾಂತಾವರ ಗ್ರಾಮದಲ್ಲಿ ಸಂಭವಿಸಿದ್ದು, ಅಲ್ಲಿನ ಹಿರಿಯರಾದ ಗೋಪಿ ಅವರು ಕಾಂತೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸು ಮನೆ ಬರುತ್ತಿದ್ದಾಗ ಅಂಬರೀಶ ಗುಹೆ ಸಮೀಪ ಬಾರಾಡಿ-ಕಾಂತವರಕ್ಕೆ ಹೋಗುವ ರಸ್ತೆಯಲ್ಲಿ ಓರ್ವ ಬೈಕ್‌ನಲ್ಲಿದ್ದ ಅಪರಿಚಿತನೊಬ್ಬ ತುಳುವಿನಲ್ಲಿ ವಿಳಾಸ ಕೇಳಿದ್ದಾನೆ. ಅನಂತರ ಅವರನ್ನು ಹಿಂಸಾತ್ಮಕವಾಗಿ ಹಿಡಿದು ಅವರ ಕುತ್ತಿಗೆಯಲ್ಲಿದ್ದ 1.20 ಲಕ್ಷ ರೂ. ಮೌಲ್ಯದ ಅರ್ಧ ಚಿನ್ನದ ಸರ ಎಳೆದು ಪರಾರಿಯಾಗಿದ್ದಾನೆ. ಹಿರಿ ಜೀವ ಗೋಪಿ ಅವರು ಕೈಲಾದಷ್ಟು ಪ್ರತಿರೋಧ ಒಡ್ಡಿದರೂ ಕಳ್ಳನನ್ನು ಎದುರಿಸಲು ಅವರಿಂದ ಸಾಧ್ಯವಾಗಿಲ್ಲ.
ದಾರಿ ಮಧ್ಯೆ ತಡೆದು ಸುಲಿಗೆ
ಡಿ.9ರಂದು ಸ್ಥಳೀಯರಾದ ವಸಂತಿ ಅವರು ಬೋಳ ಗ್ರಾಮದ ಸುಂಕಮಾರು-ಮಂಜರಪಲ್ಕೆ ರಸ್ತೆಯಲ್ಲಿ ಹಗಲಿನಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುವಾಗ ವಿಳಾಸ ಕೇಳುವ ನೆಪದಲ್ಲಿ 32 ಗ್ರಾಂ ತೂಕದ ಲಕ್ಷಾಂತರ ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸುರತ್ಕಲ್‌ನ ನಿವಾಸಿಗಳಾದ ಕುಖ್ಯಾತ ಸರಗಳ್ಳತನದ ಆರೋಪಿಗಳಾದ ಹಬೀಬ್ ಮತ್ತು ಉಮ್ಮರ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಹಲವು ಸರಗಳ್ಳತನ ಪ್ರಕರಣವಿದ್ದು, ಕಾರ್ಕಳ ಪೊಲೀಸ್ ಠಾಣೆಯಲ್ಲಿಯೂ ಇವರ ಮೇಲೆ ಕೇಸುಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಂಡದಲ್ಲಿದ್ದಾಳೆ ಚಾಲಾಕಿ ಕಳ್ಳಿ
ಸರಗಳ್ಳತನ ಪ್ರಕರಣದಲ್ಲಿ ಹೆಚ್ಚಾಗಿ ಗಂಡಸರೇ ಆರೋಪಿಗಳಿರುತ್ತಾರೆ. ಬೈಕ್ ಓಡಿಸುವುದು, ಸುಲಿಗೆ ಮಾಡಿ ತತ್‌ಕ್ಷಣ ಪರಾರಿಯಾಗಲು ಅನುಕೂಲವಾಗುವಂತ ಯೋಜನೆ ರೂಪಿಸುತ್ತಾರೆ. ಹಾಗಾಗಿ ಯುವಕರೇ ಇಂಥ ಪ್ರಕರಣಗಳಲ್ಲಿ ಹೆಚ್ಚಿರುತ್ತಾರೆ. ಆದರೆ ಬೋಳ ಗ್ರಾಮದಲ್ಲಿ ಮಹಿಳೆಯ ಸರ ಲೂಟಿದ ಪ್ರಕರಣದಲ್ಲಿ ಯುವತಿಯೊಬ್ಬಳು ಶಾಮೀಲಾಗಿರುವ ಬಗ್ಗೆ ತಿಳಿದುಬಂದಿದೆ. ಹಿರಿಯ ಮಹಿಳೆಯಲ್ಲಿ ವಿಳಾಸ ಕೇಳಿ, ಅವರನ್ನು ಕೈ ಹಿಡಿಯಲು ಚಲಾಕಿ ಕಳ್ಳಿ ಮುಂದಾಗಿದ್ದಳು. ಬೈಕ್ ಓಡಿಸುವ ಯುವಕ ಸೇರಿ ಇಬ್ಬರು ಸೇರಿ ಕ್ಷಿಪ್ರವಾಗಿ ಸರವನ್ನು ಎಳೆದು ಕೆಲವೇ ನಿಮಿಷಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈಗ ಆರೋಪಿಗಳ ಬಂಧನವಾಗಿದ್ದು, ಕಳ್ಳಿ ಯಾರು ಎನ್ನುವುದು ಬಯಲಾಗಬೇಕಾಗಿದೆ.
ಗ್ರಾಮೀಣ ಭಾಗ, ಹಿರಿಯರೇ ಕಳ್ಳರ ಗುರಿ
ಎರಡು ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಗ್ರಾಮೀಣ ಭಾಗ ಮತ್ತು ಹಿರಿಯರನ್ನು ಮಾತ್ರ ಈ ಸರಗಳ್ಳರು ಗುರಿ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗ್ರಾಮೀಣ ಭಾಗದ ರಸ್ತೆ, ಒಳ ರಸ್ತೆ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದು, ಸಿಸಿಟಿವಿ ಮತ್ತು ಹೆಚ್ಚು ಜನರ ಓಡಾಟ ಇಲ್ಲದ ಕಾರಣ ಸುಲಭವಾಗಿ ಪರಾರಿಯಾಗಬಹುದು ಎಂಬ ಕಾರಣದಿಂದ ಗ್ರಾಮೀಣ ಭಾಗವನ್ನೆ ಕಳ್ಳರು ಆಯ್ದುಕೊಂಡಿರುವ ಸಾಧ್ಯತೆ ಇದೆ.
ಬೀಟ್ ವ್ಯವಸ್ಥೆ ಬಿಗಿ
ಬೋಳ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ. ಕಾಂತಾವರ ಗ್ರಾಮದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಪೊಲೀಸ್ ಬೀಟ್ ವ್ಯವಸ್ಥೆ ಮತ್ತಷ್ಟು ಬಿಗುಗೊಳಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಯುತ್ತಿದೆ.
-ಅರವಿಂದ ಕಲಗುಜ್ಜಿ, ಡಿವೈಎಸ್‌ಪಿ, ಕಾರ್ಕಳ ಉಪ ವಿಭಾಗ.
ತತ್‌ಕ್ಷಣ ಠಾಣೆಗೆ ಮಾಹಿತಿ ನೀಡಿ
ಗ್ರಾಮೀಣ ಭಾಗ ಸಹಿತ ಎಲ್ಲಿಯೆ ಆದರೂ ಅಪರಿಚಿತರು, ಅನು ಮಾನಾಸ್ಪದವಾಗಿ ಓಡಾಡುವರು ಕಂಡುಬಂದಲ್ಲಿ ಸ್ಥಳೀಯರು ಎಚ್ಚರ ವಹಿಸಿ ಪೊಲೀಸ್ ಇಲಾಖೆಗೆ (112 ಅಥವಾ ಸ್ಥಳೀಯ ಠಾಣೆ) ತತ್‌ಕ್ಷಣ ಮಾಹಿತಿ ನೀಡಬೇಕು. ಗ್ರಾಮೀಣ ಭಾಗದ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರ ವಹಿಸಬೇಕು.
– ಮಂಜಪ್ಪ ಡಿ.ಆರ್. ಪೊಲೀಸ್ ವೃತ್ತ ನಿರೀಕ್ಷಕರು, ಕಾರ್ಕಳ.
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಬೀದಿಗಳಲ್ಲಿ ತಾಳೆ ಬೊಂಡ ವ್ಯಾಪಾರ ಜೋರು
Udupi: ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ ಕೋಟ
Malpe ಬೀಚ್‌ಗೆ ಪ್ರವಾಸಿಗರ ದಾಂಗುಡಿ; ಹೆಚ್ಚಲಿ ಸೌಕರ್ಯ
ಮಣಿಪಾಲ್ ಕಾರ್ಡಿಯಾಲಜಿ ಅಪ್ಡೇಟ್ 2024 ಸಮ್ಮೇಳನ: 15ನೇ ವರ್ಷದ ಕ್ರಿಸ್ಟಲ್ ಜುಬಿಲಿ ಆಚರಣೆ
Special School: ವಿಶೇಷ ಚೇತನ ಮಕ್ಕಳ ಬೋಧಕರಿಗೆ 10 ತಿಂಗಳಿಗಷ್ಟೇ ವೇತನ
MUST WATCH
ಹೊಸ ಸೇರ್ಪಡೆ
Bengaluru: ಕೇಕ್ ಶೋನಲ್ಲಿ ಅತ್ಯಾಕರ್ಷಕ ಕಲಾಕೃತಿಗಳ ನಿರ್ಮಾಣ
Bengaluru: ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ
Ayogya 2: ಇಲ್ಲಿ ಎಲ್ಲವೂ ಡಬಲ್ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ
BMTC: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಿಎಂಟಿಸಿ: ಆದಾಯ ಮತ್ತು ವೆಚ್ಚಗಳ ನಡುವಿನ ಭಾರೀ ಅಂತರ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.