Karkala: ಹೆದ್ದಾರಿಯಲ್ಲಿ ದಾರಿ ತಪ್ಪಿಸುವ ಡೈವರ್ಶನ್‌ಗಳು!

ಕಾರ್ಕಳ-ಮಂಗಳೂರು ರಾ. ಹೆದ್ದಾರಿ ಕಾಮಗಾರಿ: ಸಾಣೂರು-ಪುಲ್ಕೇರಿ ರಸ್ತೆಯಂತೂ ಅಯೋಮಯ

Team Udayavani, Dec 17, 2024, 2:36 PM IST

4(1

ಕಾರ್ಕಳ: ಮಂಗಳೂರಿನಿಂದ ಮೂಡುಬಿದಿರೆ ಮೂಲಕ ಕಾರ್ಕಳವನ್ನು ರಾ. ಹೆದ್ದಾರಿ 169ರ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬ ಗತಿಯಲ್ಲಿದ್ದು, ವಾಹನಿಗರನ್ನು ಸತಾಯಿಸುತ್ತಿದೆ. ಡೈವರ್ಶನ್‌ಗಳಂತೂ ಜನರನ್ನು ಸತಾಯಿಸುತ್ತಾ ದಾರಿ ತಪ್ಪಿಸುತ್ತಿವೆ.

ಕಾರ್ಕಳದ ಪುಲ್ಕೇರಿ ಬೈಪಾಸ್‌ನಿಂದ ಪದವು ಗ್ರಾಮದ ಬಿಕರ್ನಕಟ್ಟೆವರೆಗೆ ಒಟ್ಟು 45 ಕಿ. ಮೀ. ಚತುಷ್ಪಥ ರಸ್ತೆ ಯೋಜನೆ ಮಂಗಳೂರು- ಸೋಲಾಪುರ ಹೆದ್ದಾರಿ ಯೋಜನೆಯ ಮಹತ್ವದ ಭಾಗ. ಈ ಕಾಮಗಾರಿಯಲ್ಲಿ ಕಾರ್ಕಳ ತಾಲೂಕಿನಲ್ಲಿ ಕೇವಲ 4.5 ಕಿ.ಮೀ. ರಸ್ತೆಯ ಕಾಮಗಾರಿ ನಡೆಯುತ್ತಿದ್ದರೂ ಸಮಸ್ಯೆಗಳು ಮಾತ್ರ ನೂರಾರು. 2022ರಲ್ಲಿ 3ಎ ನೋಟಿಫಿಕೇಶನ್‌ ಆಗಿದ್ದರೂ ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಕೃಷಿ ಜಮೀನಿಗೆ ಅತ್ಯಲ್ಪ ಪರಿಹಾರ, ಆಗಾಗ ರಸ್ತೆಯ ಅಲೈನ್ಮೆಂಟ್‌ ಬದಲಾವಣೆಯ ಗೊಂದಲಗಳಿಂದ ಯೋಜನೆ ಕುಂಟುತ್ತಾ ಸಾಗಿದೆ.

ಗೊಂದಲದಿಂದ ಕೂಡಿರುವ ಡೈವರ್ಶನ್‌
ಸಾಣೂರು ಹೈಸ್ಕೂಲ್‌ನಿಂದ ಪುಲ್ಕೇರಿ ಬೈಪಾಸ್‌ವರೆಗೆ ನಾಲ್ಕೈದು ಕಡೆಗಳಲ್ಲಿ ಡೈವರ್ಶನ್‌ ನೀಡಲಾಗಿದೆ. ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬ್ಯಾಂಕ್‌ ಸಮೀಪ, ರಾಮ ಮಂದಿರದ ಸಮೀಪ ಹೆದ್ದಾರಿ ಮಾರ್ಗಸೂಚಿ ಅನ್ವಯದ ಡೈವರ್ಶನ್‌ಗಳಾಗಿದ್ದರೆ, ಉಳಿದವು ಕಾಮಗಾರಿಗೆ ಪೂರಕವಾಗಿ ರೂಪಿಸಿದವು. ಎಲ್ಲ ಡೈವರ್ಶನ್‌ಗಳಲ್ಲಿ ಸವಾರರು ಅಡ್ಡಾದಿಡ್ಡಿ ಸಂಚರಿಸುತ್ತಿದ್ದಾರೆ. ಪರಿಣಾಮ 10ಕ್ಕೂ ಅಧಿಕ ಅಪಘಾತ ಇಲ್ಲಿ ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ. ರವಿವಾರ ರಾತ್ರಿ ಸ್ವಿಫ್ಟ್ ಕಾರೊಂದು ಪುಲ್ಕೇರಿಯಲ್ಲಿ ಡೈವರ್ಶನ್‌ ಗೊಂದಲದಿಂದ ನೇರವಾಗಿ ಚಲಿಸಿದ ಪರಿಣಾಮ ಜಲ್ಲಿ ರಾಶಿಗೆ ಗುದ್ದಿ ಇಬ್ಬರು ಗಾಯಗೊಂಡ ಘಟನೆ ಸಂಭವಿಸಿದೆ.

ಅಲ್ಲಲ್ಲಿ ಕಾಮಗಾರಿ ಬಾಕಿ ಇದೆ
ಈ ನಾಲ್ಕೂವರೆ ಕಿ.ಮೀ. ರಸ್ತೆಯಲ್ಲಿ ಕೆಲವು ಕಡೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಬಾಕಿ ಇದೆ. ಸಂಪರ್ಕ ರಸ್ತೆಯ ಕೆಲಸಕ್ಕೆ ಅರ್ಧಕ್ಕೆ ನಿಂತಿದೆ. 5 ಕಡೆಗಳಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದ ತಕರಾರಿನಿಂದ ಕಾಮಗಾರಿ ನಿಂತಿದೆ. ಮುರತ್ತಂಗಡಿ ಬ್ಯಾಂಕ್‌ ಆಫ್ ಬರೋಡ ಸಮೀಪ, ಕಾಜಿಗಾರದ ಬಳಿ ರಸ್ತೆಯ ಸರ್ವಿಸ್‌ ಕಾಮಗಾರಿ ಅರ್ಧಕ್ಕೆ ನಿಂತಿದೆ. ಚಿಲಿಂಬಿಯಲ್ಲಿ 1. ಕಿ.ಮೀ. ಡೀಮ್ಡ್ ಅರಣ್ಯ ಸಮಸ್ಯೆಯಿಂದಾಗಿ ಕಾಮಗಾರಿ ಮುಂದುವರಿದಿಲ್ಲ. ಕಾರ್ಕಳ ಸಾಣೂರು-ಬೆಳುವಾಯಿ ಗ್ರಾ. ಪಂ. ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಉಡುಪಿ, ಮಂಗಳೂರು ಸಂಸದರು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಹೇಳಿದ್ದಾರೆ.

ಫ‌ಲಕಗಳಿಲ್ಲದೆ ಅಡ್ಡಾದಿಡ್ಡಿ ಸಂಚಾರ
ಡೈವರ್ಶನ್‌ ನೀಡಿದ ಕಡೆಗಳಲ್ಲಿ ಸಮರ್ಪಕವಾಗಿ ಫ‌ಲಕಗಳನ್ನು ಅಳವಡಿಸಬೇಕು, ಡೈವರ್ಶನ್‌ ಸಂಪರ್ಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಸಂಚರಿಸುವ ವಾಹನಗಳಿಗೆ ಪೊಲೀಸ್‌ ಇಲಾಖೆ ದಂಡ ವಿಧಿಸಬೇಕು. ಹೆದ್ದಾರಿ ಪ್ರಾಧಿಕಾರ-ಗುತ್ತಿಗೆ ಸಂಸ್ಥೆ ಕಾಮಗಾರಿ ನಡೆಯುವಾಗ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪುಲ್ಕೇರಿ ಬೈಪಾಸ್‌ನಿಂದ ಸ್ವಲ್ಪ ಮುಂದಕ್ಕೆ ಹೋಗುವ ಕಾರು ಡೈವರ್ಶನ್‌ ತೆಗೆದುಕೊಳ್ಳದ ಪರಿಣಾಮ ಕಾಮಗಾರಿ ರಸ್ತೆಯಲ್ಲಿ ಸಾಗಿ ಜಲ್ಲಿ ರಾಶಿಗೆ ಢಿಕ್ಕಿಯಾಗಿರುವುದು.

ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ
ಡೈವರ್ಶನ್‌ಗಳಿಂದ ಹಲವು ಅಪಘಾತಗಳು ಸಂಭವಿಸುತ್ತಿದೆ. ಸವಾರರಿಗೆ ಗೊಂದಲವಾಗುತ್ತಿದೆ. ಈಗಿರುವ ಸೂಚನಾ ಫ‌ಲಕಗಳು ಸ್ಪಷ್ಟತೆ ಹೊಂದಿಲ್ಲ. ಸರಿಯಾದ ಬೋರ್ಡ್‌ ಹಾಕಬೇಕು, ಸುಗಮ ಸಂಚಾರಕ್ಕೆ ಸಿಬಂದಿ ನೇಮಕ ಮಾಡಬೇಕು. ಆಕ್ಷೇಪ ಇರುವ ಕಡೆ ಸೂಕ್ತ ಪರಿಹಾರ ನೀಡುವುದು, ಸರ್ವಿಸ್‌ ರಸ್ತೆಯನ್ನು ಎಲ್ಲೆಡೆ ಅಚ್ಚುಕಟ್ಟಾಗಿ ರೂಪಿಸಿ ಕಾಮಗಾರಿ ವ್ಯವಸ್ಥಿತವಾಗಿ ಶೀಘ್ರ ಪೂರ್ಣಗೊಳಿಸಬೇಕು.
– ಸಾಣೂರು ನರಸಿಂಹ ಕಾಮತ್‌, ಕಾರ್ಕಳ-ಮಂಗಳೂರು ರಾ. ಹೆ. ಹೋರಾಟ ಸಮಿತಿ.

-ಅವಿನ್‌ ಶೆಟ್ಟಿ 

ಟಾಪ್ ನ್ಯೂಸ್

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ  ಅಂತ್ಯ!

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!

14

ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ಮದುಮಗ… ನನಗೆ ಈ ಹುಡುಗ ಬೇಡವೆಂದ ಮದುಮಗಳು

Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1-bntwl-1

Bantwala: ರೈಲಿನಿಂದ ಬಿದ್ದು ವ್ಯಕ್ತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಅಂಬಲಪಾಡಿ ಓವರ್‌ಪಾಸ್‌ ಕಾಮಗಾರಿ ಆರಂಭ

7(1

Kota: ಬ್ಲಾಕ್‌ ಲಿಸ್ಟ್‌ನಿಂದ ಅಪಾಯಕಾರಿ ಸ್ಥಳಗಳೇ ಔಟ್‌!

Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್‌ ಜೋಶಿ

Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್‌ ಜೋಶಿ

E-ka

ಇ-ಖಾತಾ ತಿದ್ದುಪಡಿಯೇ ಭಾರೀ ಸವಾಲು; ತಿದ್ದುಪಡಿ ಅವಕಾಶ ಶೇ.3ರಿಂದ ಶೇ.15ಕ್ಕೆ ಏರಿಕೆಗೆ ಆಗ್ರಹ

Arrest

Karkala: ಹೋಂ ನರ್ಸ್‌ 9 ಲಕ್ಷ ರೂ. ವಂಚನೆಗೈದ ಪ್ರಕರಣ: ಮುಂಬಯಿಯಲ್ಲಿ ಇಬ್ಬರು ಆರೋಪಿಗಳ ಸೆರೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ  ಅಂತ್ಯ!

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!

Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ

Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ

14

ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

8

Udupi: ಅಂಬಲಪಾಡಿ ಓವರ್‌ಪಾಸ್‌ ಕಾಮಗಾರಿ ಆರಂಭ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.