ಕಾರ್ಕಳ: ಗಂಟಲ ದ್ರವ ಸಂಗ್ರಹ
Team Udayavani, May 23, 2020, 10:48 AM IST
ಸಾಂದರ್ಭಿಕ ಚಿತ್ರ
ಕಾರ್ಕಳ: ಹೊರ ರಾಜ್ಯದಿಂದ ಕಾರ್ಕಳಕ್ಕೆ ಸುಮಾರು 2,500 ಮಂದಿ ಆಗಮಿಸಿದ್ದು, ಅವರೆಲ್ಲರೂ ಕಾರ್ಕಳ ಮತ್ತು ಹೆಬ್ರಿಯ 32 ಕ್ವಾರಂಟೈನ್ ಕೇಂದ್ರಗಳಲ್ಲಿದ್ದಾರೆ. ಶುಕ್ರವಾರ ಕಾರ್ಕಳದ ಕ್ವಾರಂಟೈನ್‌ನಲ್ಲಿ ಇರುವವರ ಗಂಟಲು ದ್ರವ ಸಂಗ್ರಹಿಸಲಾಗಿದೆ.
ದಾನಶಾಲೆ ಪ್ರವಚನ ಮಂದಿರದಲ್ಲಿ ಇರುವ 35 ಮಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಪೊಲೀಸರ ನಿಯೋಜನೆಯಿಲ್ಲದೆ ಶಿಕ್ಷಕರು ಮತ್ತು ವಿವಿಧ ಇಲಾಖಾ ಸಿಬಂದಿ ಕ್ವಾರಂಟೈನ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ವಾರಂಟೈನ್‌ನಲ್ಲಿರುವವರು ಯಾರ ಭಯವೂ ಇಲ್ಲದೆ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಕೆಲವು ಕ್ವಾರಂಟೈನ್ ಕೇಂದ್ರಗಳಿಗೆ ಮನೆಯಿಂದ ಊಟ ತರಲಾಗುತ್ತಿದೆ. ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವವರನ್ನು ಮನೆಮಂದಿ ಬಂದು ಮಾತನಾಡಿಸಿ ಹೋಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಕ್ವಾರಂಟೈನ್‌ನಲ್ಲಿ ಪೊಲೀಸರು
ಮುಂಬಯಿಯಿಂದ ಉಡುಪಿಗೆ ಆಗಮಿಸುವವರ ದಾಖಲೆ ಪರಿಶೀಲನೆ ಹಿನ್ನೆಲೆಯಲ್ಲಿ ನಿಪ್ಪಾಣಿಗೆ ತೆರಳಿ ಕಾರ್ಯನಿರ್ವಹಿಸಿರುವ ಕಾರ್ಕಳ ನಗರ ಠಾಣಾ ಎಸ್‌ಐ ಮಧು ಬಿ.ಇ. ಸೇರಿದಂತೆ 13 ಮಂದಿ ಸಿಬಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.