ಉಡುಪಿ: ರಸ್ತೆ ತಡೆದು, ಬಸ್ ಬಂದ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ
Team Udayavani, Sep 28, 2020, 8:55 AM IST
ಉಡುಪಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗೀಕರಿಸಿರುವ ಕೃಷಿ ಮಸೂದೆ ರೈತ ವಿರೋಧಿ ಎಂದು ಆರೋಪಿಸಿ ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ಉಡುಪಿಯಲ್ಲಿ ರಸ್ತೆ ತಡೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಬಂದ್ ಕರೆ ನೀಡಿದ್ದರೂ, ಬಸ್ ಸಂಚಾರ ಎಂದಿನಂತೆ ಇದ್ದ ಕಾರಣ ಸಂಘಟನೆಗಳು ಬಸ್ ಬಂದ್ ಮಾಡಲು ಮನವಿ ಮಾಡಿದರು. ಆದರೆ ಇದು ಪ್ರಯೋಜನವಾಗದೇ ಇದ್ದ ಕಾರಣ ರಸ್ತೆ ತಡೆ ಮಾಡಲು ಮುಂದಾದರು. ಉಡುಪಿ ಸಿಟಿ ಬಸ್ ನಿಲ್ದಾಣದ ಪ್ರವೇಶ ಭಾಗದಲ್ಲಿ ಕುಳಿತು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ:ಕರ್ನಾಟಕ ಬಂದ್: ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ
ರಸ್ತೆ ತಡೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 21 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ತಿಭಟನೆಯಲ್ಲಿ ಕಾಂಗ್ರೆಸ್ ನ ರಮೇಶ್ ಕಾಂಚನ್, ಯತೀಶ್ ಕರ್ಕೇರ, ಅಝೀಝ್ ಉದ್ಯಾವರ, ಬಾಲಕೃಷ್ಣ ಶೆಟ್ಟಿ, ಅನ್ಸಾರ್ ಉಡುಪಿ, ಪ್ರಖ್ಯಾತ್ ಶೆಟ್ಟಿ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ:ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.