ಕಟಪಾಡಿ: 820 ಚದರ ಅಡಿಗಳಲ್ಲಿ 220 ಗಿಡಗಳ ಮಿಯಾವಾಕಿ ವನ
Team Udayavani, Jun 5, 2020, 5:37 AM IST
ಕಟಪಾಡಿ: ದಕ್ಷಿಣ ಕರ್ನಾಟಕದ ಪ್ರಥಮ ಮಿಯಾವಾಕಿ ಅರಣ್ಯವಾಗಿ ಕಟಪಾಡಿ ಪೊಸಾರ್ ನಿವಾಸಿ ಕೆ. ಮಹೇಶ್ ಶೆಣೈ 820 ಚದರ ಅಡಿಯಲ್ಲಿ 220 ವಿವಿಧ ತಳಿಯ ಸ್ಥಳೀಯ ಮರದ ಗಿಡಗಳನ್ನು ಬೆಳೆಸಿ ಮಾದರಿಯಾಗಿದ್ದಾರೆ.
ಪರಿಸರ ಮಾಲಿನ್ಯ, ಅಂತರ್‌ಜಲವೃದ್ಧಿ, ಹೆಚ್ಚುತ್ತಿರುವ ಭೂಮಿಯ ತಾಪಮಾನದ ನಿಯಂತ್ರಣ, ಜೀವ ವೈವಿಧ್ಯಗಳಿಗೆ ಆಸರೆಯಾಗಿ ಈ ಮಿಯಾವಾಕಿ ಕಾಡು ತನ್ನದೇ ಕೊಡುಗೆ ನೀಡುತ್ತಿದೆ.
ಕಟಪಾಡಿ ಮಹೇಶ್ ಶೆಣೈ ಪೊಸಾರಿನ ಗುರುಕೃಪಾದಲ್ಲಿ ಒಂದು ಮೀಟರ್ ಅಂತರವನ್ನು ಕಾಪಾಡಿಕೊಂಡು ಸಾಗುವಾನಿ, ಬಾದಾಮಿ, ಹೊಂಗೆ ಸಹಿತ 11 ವಿವಿಧ ವರ್ಗದ 220 ಗಿಡಗಳನ್ನು ನೆಟ್ಟಿದ್ದಾರೆ. ಗಿಡಗಳು ವೇಗವಾಗಿ ಮತ್ತು ದಟ್ಟವಾಗಿ ಬೆಳೆದು ನಿಲ್ಲುವುದೇ ಮಿಯಾವಾಕಿ ಕಾಡಿನ ಹಿರಿಮೆ. ಹಿರಿಯರ ನೆನಪಿಗಾಗಿ ಗಣಪತಿ ವನ ಎಂದು ಮಹೇಶ್ ಶೆಣೈ ಹೆಸರಿಟ್ಟಿದ್ದಾರೆ.
ಏನಿದು ಮಿಯಾವಾಕಿ ಕಾಡು?
ಮಿಯಾವಾಕಿ ವಿಧಾನವು ಪಂಜಾಬ್, ಮುಂಬಯಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಅತ್ಯಂತ ಜನಪ್ರಿಯ. ಈ ವಿಧಾನದ ಮೂಲಕ ಕಡಿಮೆ ಸ್ಥಳದಲ್ಲಿ ಖಾಸಗಿ ಅರಣ್ಯ ನಿರ್ಮಿಸಬಹುದಾಗಿದೆ. ಕೇವಲ ಎರಡು, ಮೂರು ಸೆಂಟ್ಸ್ ಜಾಗದಲ್ಲಿ 220ರಿಂದ 400 ಗಿಡಗಳನ್ನು ಬೆಳೆಯಬಹುದು. ಇದರಲ್ಲಿ ಎರಡು ಹಂತಗಳಿದ್ದು ಮೊದಲನೇ ಹಂತದಲ್ಲಿ ಗಿಡ ನೆಡಲು ಬೇಕಾಗುವಂತಹ ಮಣ್ಣಿನ ಪದರವನ್ನು ರಚಿಸುವುದು ಮತ್ತು ಎರಡನೇ ಹಂತದಲ್ಲಿ ಸಸಿಗಳನ್ನು ನೆಡುವುದು ಎಂದು ಮಹೇಶ್ ಶೆಣೈ ಮಾಹಿತಿ ನೀಡಿದ್ದಾರೆ.
ಅರಣ್ಯದ ವಿಶೇಷತೆ
ಇದು ದಕ್ಷಿಣ ಕರ್ನಾಟಕದ ಪ್ರಥಮ ಮಿಯಾವಾಕಿ ಅರಣ್ಯವಾಗಿದ್ದು, 820 ಚದರ ಅಡಿಯಲ್ಲಿ 220 ಸ್ಥಳೀಯ ಸಸಿಗಳು ನೆಟ್ಟಿದ್ದೇನೆ. ಎಲ್ಲ ತರಹದ ಗಿಡಗಳು ಒಂದೇ ಸಮನೆ ಆಕಾಶಕ್ಕೆ ಮುಖ ಮಾಡಿ ಬೆಳೆದು ನಿಲ್ಲುವುದೇ ಈ ಮಿಯಾವಾಕಿ ಅರಣ್ಯದ ವಿಶೇಷತೆ ಎಂದು ಮಹೇಶ್ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.