Katapady: ಡಿವೈಡರ್ ಏರಿ ಬಂದ ಕಾರು ಬೈಕ್ ಗೆ ಢಿಕ್ಕಿ; ಸವಾರರು ಗಂಭೀರ
Team Udayavani, Aug 14, 2023, 10:41 AM IST
ಕಾಪು : ಡಿವೈಡರ್ ಹಾರಿಕೊಂಡು ಬಂದ ಕಾರೊಂದು ಬೈಕ್ ಮೇಲೆರಗಿ ದಂಪತಿ ಗಾಯಗೊಂಡ ಘಟನೆ ರಾಷ್ಟ್ರೀಯ 66ರ ಕಟಪಾಡಿ ಜಂಕ್ಷನ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಎರ್ಮಾಳಿನಿಂದ ಮಣಿಪಾಲಕ್ಕೆ ಬೈಕಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಧೀರಜ್ (34) ಮತ್ತು ಪವಿತ್ರಾ (28) ಗಾಯಾಳು ದಂಪತಿ.
ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಡಿವೈಡರ್ ಹಾರಿಕೊಂಡು ಬಂದು ಬೈಕಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದು ಗಾಯಗೊಂಡ ಧೀರಜ್ ಮತ್ತು ಪವಿತ್ರಾ ಅವರನ್ನು ಮಟ್ಟು ನಿವಾಸಿ ಪ್ರಕಾಶ್ ಅವರು ಉಪಚರಿಸಿ, ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.