ರೈತ ಕ್ಷೇತ್ರಕ್ಕಿಳಿದ ಕಾಪು ಸರಕಾರಿ ಕಾಲೇಜು ವಿದ್ಯಾರ್ಥಿಗಳ ತಂಡ
Team Udayavani, Dec 28, 2018, 12:28 PM IST
ಕಟಪಾಡಿ: ಜಾಗತಿಕವಾಗಿ ಮಾನ್ಯತೆಯನ್ನು ಹೊಂದಿರುವ ಮಟ್ಟು ಗುಳ್ಳದ ಬೆಳೆಗಾರಿಕೆ, ಮಾರ್ಕೆಟಿಂಗ್, ಎಡರು ತೊಡರುಗಳ ಅಧ್ಯಯನಕ್ಕಾಗಿ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸುಮಾರು 50ರಷ್ಟಿದ್ದ ರಾ.ಸೇ.ಯೋಜನಾ ವಿಭಾಗದ ವಿದ್ಯಾರ್ಥಿಗಳ ತಂಡವು ಕಟಪಾಡಿ ಬಳಿಯ ಮಟ್ಟುವಿನ ರೈತ ಕ್ಷೇತ್ರಕ್ಕಿಳಿದು ಅಧ್ಯಯನವನ್ನು ಗುರುವಾರ ನಡೆಸಿದರು.
ಈ ಸಂದರ್ಭದಲ್ಲಿ ಮಟ್ಟುಗುಳ್ಳದ ಗದ್ದೆಗಿಳಿದ ವಿದ್ಯಾರ್ಥಿಗಳ ತಂಡವು ಮಾರ್ಗದರ್ಶಕರಲ್ಲಿ ಮತ್ತು ಬೆಳೆಗಾರರಲ್ಲಿ
ಮಟ್ಟುಗುಳ್ಳವು ಪಡೆದಿರುವ ಜಿ.ಐ. ಮಾನ್ಯತೆ, ರಫ್ತಾಗುವ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ, ಬ್ರಾಂಡಿಂಗ್,
ಗ್ರೇಡಿಂಗ್, ಮಾರುಕಟ್ಟೆ ವಿಧಾನ, ಬೀಜ ತಯಾರಿ, ಬಿತ್ತನೆ, ಗಿಡ ತಯಾರಿ, ಬೆಳೆಸುವವಿಧಾನ, ನಾಟಿ, ಮಾರುಕಟ್ಟೆಗೆ ದರ ನಿಗದಿ,ಪ್ರಮೋಶನ್, ಲೇಬಲಿಂಗ್, ಮಟ್ಟುಗುಳ್ಳದ ಇತಿಹಾಸ ಸಹಿತ ಮಟ್ಟುಗುಳ್ಳದ ಬೆಳೆ ಮತ್ತು ಮಾರುಕಟ್ಟೆಯ ಬಗ್ಗೆ ಬೆಳೆಗಾರರ ಸಂಘದ ಪ್ರಬಂಧಕ ಲಕ್ಷ್ಮಣ್ ಮಟ್ಟು ಅವರಲ್ಲಿ ಸಮಾಲೋಚನೆ ಸಂವಹನ ನಡೆಸಿದರು.
ತಂಡದ ಪ್ರಮುಖರಾಗಿ ಉಪನ್ಯಾಸಕಿ/ ಯೋಜನಾಧಿಕಾರಿ ವಿದ್ಯಾ ಡಿ. ಮಟ್ಟುಗುಳ್ಳ ಬೆಳೆಯ ಅಧ್ಯಯನದ ಬಗ್ಗೆ ಮಾರ್ಗದರ್ಶನ ನೀಡಿದ್ದು, ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೆ ಭೇಟಿ ನೀಡಿ ಮಾರುಕಟ್ಟೆ, ಗ್ರೇಡಿಂಗ್ ಬಗ್ಗೆ ಸಿಬಂದಿಗಳಿಂದಲೂ ಮಾಹಿತಿ ಕಲೆ ಹಾಕಿದರು.
ಮಧ್ಯವರ್ತಿಗಳ ಹಾವಳಿಗೆ ತಡೆ
ಮಟ್ಟುಗುಳ್ಳವನ್ನು ಇಲ್ಲಿನ ಬೆಳೆಗಾರರ ಸಂಘದ ಮೂಲಕವೇ ನಡೆಸುವ ಮಾರುಕಟ್ಟೆ ವಿಧಾನದಿಂದ ಮಧ್ಯವರ್ತಿಗಳ ಹಾವಳಿಗೆ ತಡೆಯೊಡ್ಡಿದಂತಾಗಿದೆ. ಬೆಳೆಗಾರರು ಸ್ವಂತವಾಗಿ ಅಭಿವೃದ್ಧಿ ಹೊಂದುವ ರೀತಿಯ ಬಗ್ಗೆ ಅಧ್ಯಯನ ನಡೆಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಮಟ್ಟುಗುಳ್ಳದ ಬಿತ್ತನೆ ಬೀಜದಿಂದ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಲಭ್ಯವಾಯಿತು.
ಹರ್ಷಿತ್, ಸಕಲೇಶ್‌ಪುರ, ಬಿ,.ಕಾಂ. ವಿದ್ಯಾರ್ಥಿ
ಜಿ.ಐ. ಮಾನ್ಯತೆಯ ಮಾಹಿತಿ
ಬಹು ಬೇಡಿಕೆಯುಳ್ಳ ರುಚಿಯಾದ ಮಟ್ಟುಗುಳ್ಳದ ಮಾರುಕಟ್ಟೆ ಪದ್ಧತಿ ಬಗ್ಗೆ, ಜಿ.ಐ. ಮಾನ್ಯತೆ ಪಡೆದಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸ್ಥಳೀಯ ಮತ್ತು ಬೆಂಗಳೂರು, ಮುಂಬಯಿ ಭಾಗಗಳಿಗೆ ಮಾರುಕಟ್ಟೆ, ರಫ್ತು ಬಗ್ಗೆ ತಿಳಿದುಕೊಳ್ಳಲಾಯಿತು. ಪ್ರಾಡಕ್ಟ್, ಪ್ರೈಸ್, ಪ್ರೊಮೋಶನ್, ಪ್ಲೇಸಸ್ ಬಗ್ಗೆ ಸಮಗ್ರ ವಿಷಯಗಳನ್ನು
ಅಧ್ಯಯನ ನಡೆಸಿದ್ದು, ಇಲ್ಲಿನ ಮಣ್ಣಿನ ಗುಣದಿಂದ ಪಡೆದಿರುವ ಸ್ವಾದದ ಬಗ್ಗೆ ಕುತೂಹಲಕಾರಿ ಅಂಶ ಗ್ರಹಿಸಿದ್ದೇನೆ.
ಅನುಷಾ ಶೆಟ್ಟಿ, ದ್ವಿತೀಯಬಿ,ಕಾಂ. ವಿದ್ಯಾರ್ಥಿನಿ, ಕೊಪ್ಪಲಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.