Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

75 ವರ್ಷ ಪೂರೈಸಿದ ಜನಪ್ರಿಯ ಆಯುರ್ವೇದ ಆಸ್ಪತ್ರೆ ಅಭಿವೃದ್ಧಿಗೆ ಬೇಕಾಗಿದೆ ಅನುದಾನ; ಶಿಥಿಲ ಕಟ್ಟಡ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣ; ವೈದ್ಯರು, ಸಿಬಂದಿ ನೇಮಕಾತಿ ಬೇಡಿಕೆ

Team Udayavani, Nov 18, 2024, 2:13 PM IST

4

ಕಾಪು: ಬೆಳಪು ಗ್ರಾಮದ ಪಣಿಯೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್‌ ಇಲಾಖೆಗೆ ಸೇರಿದ ಸರಕಾರಿ ಆಯುರ್ವೇದ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಈ ಭಾಗದಲ್ಲಿ ತೀವ್ರವಾಗಿದೆ. ಆದರೆ, ಹಣದ ಕೊರತೆಯಿಂದ ಹಿನ್ನಡೆಯಾಗಿದೆ.

ಬೆಳಪು ಗ್ರಾಮದ ಪಣಿಯೂರಿನಲ್ಲಿ 1952ರಲ್ಲಿ ರೂರಲ್‌ ಆಸ್ಪತ್ರೆ ನಿರ್ಮಾಣವಾಗಿತ್ತು. ಗ್ರಾಮದ ಹಿರಿಯರಾದ ಎಲ್‌. ನರಸಿಂಗ ರಾವ್‌ ಅವರು ಸ್ಥಳದಾನ ಮಾಡಿ, ಆಸ್ಪತ್ರೆಯ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ಅಂದಿನ ದ. ಕ. ಜಿಲ್ಲಾ ಬೋರ್ಡ್‌ ಅಧ್ಯಕ್ಷ ಬಿ. ಮಂಜಯ್ಯ ಹೆಗ್ಗಡೆ ಅವರ ಉದ್ಘಾಟಿಸಿದ್ದರು. ಅಂದಿನಿಂದ ಬೆಳಪು, ಎಲ್ಲೂರು, ಉಚ್ಚಿಲ, ಕುತ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ 20 ಸಾವಿರಕ್ಕೂ ಅಧಿಕ ಗ್ರಾಮಸ್ಥರಿಗೆ ಇದು ಜೀವನಾಡಿಯಾಗಿತ್ತು.
ವಸತಿ ಗೃಹವಿತ್ತು, ಹೆರಿಗೆಗೆ ಅವಕಾಶಗಳಿತ್ತು

ಬೆಳಪು ರೂರಲ್‌ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರು ಮತ್ತು ಸಿಬಂದಿಗಳ ವಸತಿ ಗೃಹವೂ ಇತ್ತು. ಇಲ್ಲಿ ಹೆರಿಗೆಗೂ ಸೌಲಭ್ಯಗಳಿತ್ತು. ಹೊರಗಿನಿಂದ ಬಂದ ವೈದ್ಯರು ಹೆರಿಗೆ ಮಾಡಿಸುತ್ತಿದ್ದರು. ಆದರೆ, ಒಂದು ಹಂತದಲ್ಲಿ ಸರಕಾರದ ನಿರ್ಲಕ್ಷ್ಯದಿಂದ ವೈದ್ಯರೇ ಇಲ್ಲದೆ ಫಾರ್ಮಾಸಿಸ್ಟ್‌ ಅವರೇ ನಿಭಾಯಿಸಿದ್ದೂ ನಡೆದಿತ್ತು. ಇದರ ನಡುವೆ ಹತ್ತು ವರ್ಷಗಳ ಕಾಲ ವೈದ್ಯರು, ಸಿಬಂದಿಗಳು, ಮೂಲ ಸೌಕರ್ಯಗಳ ಕೊತೆಯಿಂದಾಗಿ ಆಸ್ಪತ್ರೆಯೇ ಮುಚ್ಚಿ ಹೋಗಿತ್ತು.

ಆಯುಷ್‌ ಸುಪರ್ದಿಗೆ ಆಸ್ಪತ್ರೆ
ಬೆಳಪು ರೂರಲ್‌ ಆಸ್ಪತ್ರೆಯು ಮುಂದೆ ಪಣಿಯೂರು ಸರಕಾರಿ ಆಸ್ಪತ್ರೆಯಾಗಿ ಬದಲಾಗಿ ಮುಂದೆ ಆಯುಷ್‌ ಇಲಾಖೆಯ ಸುಪರ್ದಿಗೆ ಸೇರ್ಪಡೆಗೊಂಡು ಪಣಿಯೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯವಾಗಿ ಮಾರ್ಪಟ್ಟಿತು. 2001ರಲ್ಲಿ ಅಂದಿನ ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಅವರ ನೇತೃತ್ವದಲ್ಲಿ ಜಿ.ಪಂ. ಅನುದಾನದ ಮೂಲಕ ಬೆಳಪು ಆಯುರ್ವೇದಿಕ್‌ ಆಸ್ಪತ್ರೆಯ ನವೀಕರಣ ಕಾರ್ಯವೂ ನಡೆದಿತ್ತು. ಅಂದಿನ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳು ನಡೆದಿವೆಯಾದರೂ, ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲು ಇದು ಸಾಕಾಗಿರಲಿಲ್ಲ.

ಹಣಕಾಸು ನೆರವು ಬೇಕಾಗಿದೆ
ಇಲ್ಲಿ ಬೇಕಾದಷ್ಟು ಜಾಗವಿದೆ. ಆದರೆ ಕಟ್ಟಡ ಮರು ನಿರ್ಮಾಣಕ್ಕೆ ಹಣಕಾಸಿನ ಅಗತ್ಯವಿದೆ. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಇಲಾಖೆ ಮುತುವರ್ಜಿ ವಹಿಸಿದ್ದಾರೆ. ಶಾಸಕರು ಮತ್ತು ಸಂಸದರ ನಿಧಿ ಹಾಗೂ ಸ್ಥಳೀಯ ಕೈಗಾರಿಕೆಗಳ ಸಿಎಸ್‌ಆರ್‌ ಅನುದಾನದ ಜತೆಗೆ ಸ್ಥಳೀಯವಾಗಿ ಬೆಳೆದು, ದೇಶ-ವಿದೇಶಗಳಲ್ಲಿ ನೆಲೆಸಿರುವ ಉದ್ಯಮಪತಿಗಳ ನೆರವು ಕೂಡಾ ದೊರಕಿದಲ್ಲಿ ಈ ಆಸ್ಪತ್ರೆ ಮರು ನಿರ್ಮಾಣ ಆಗಬಹುದು.

ಈಗ ಆಸ್ಪತ್ರೆ ಸ್ಥಿತಿಗತಿ ಹೇಗಿದೆ?
ಬೆಳಪು ಆಯುರ್ವೇದಿಕ್‌ ಆಸ್ಪತ್ರೆಗೆ 32 ಸೆಂಟ್ಸ್‌ ಜಾಗವಿದೆ. ಕಟ್ಟಡ ಶಿಥಿಲಗೊಂಡಿದೆ. ವಸತಿಗೃಹದ ಕಟ್ಟಡವಂತೂ ಪಳೆಯುಳಿಕೆಯ ಹಾಗಿದೆ. ಪಣಿಯೂರು ಆಸ್ಪತ್ರೆಯಲ್ಲಿ ಪ್ರಸ್ತುತ ವೈದ್ಯರು, ಗುತ್ತಿಗೆ ಸಿಬಂದಿ ಸೇವೆಯಲ್ಲಿದ್ದಾರೆ. ಜನರಲ್‌ ಚಿಕಿತ್ಸೆ, ಮದ್ದು, ಮಾಹಿತಿ, ಯೋಗ, ಡಯಟ್‌ ಕುರಿತಾದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತೀ ದಿನ 30-40 ಮಂದಿ ರೋಗಿಗಳು ಬರುತ್ತಾರೆ. ಬಿಪಿ, ದೈನಂದಿನ ಆರೋಗ್ಯ ತಪಾಸಣೆ, ಡಯಟ್‌ ಮಾಹಿತಿ, ಚರ್ಮ ರೋಗ ಸಂಬಂಧಿತ ಆರೋಗ್ಯ ತಪಾಸಣೆ, ಆಹಾರ ಪದ್ಧತಿ ಬಗ್ಗೆ ತಿಳಿಸಿಕೊಡಲಾಗುತ್ತದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಇಲ್ಲಿನ ವೈದ್ಯಾಧಿಕಾರಿ ಡಾ| ಮಾನಸಾ ಪಿ.

ಪ್ರಸ್ತಾವನೆ ಸಲ್ಲಿಕೆ
ಚಿಕಿತ್ಸಾಲಯವನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನೀಲ ನಕಾಶೆ ಸಿದ್ಧಪಡಿಸಲಾಗಿದೆ. ಜಿಲ್ಲಾ ವಲಯದ ಅನುದಾನದಡಿ ಹೊಸ ಕಟ್ಟಡಕ್ಕೆ 30 ಲಕ್ಷ ಅನುದಾನ ಮಂಜೂರುಗೊಂಡು, ಅನುಮೋದನೆ ಹಂತದಲ್ಲಿದೆ. 2 ಅಂತಸ್ತಿನ ಕಟ್ಟಡದ ಆಸ್ಪತ್ರೆ ನಿರ್ಮಿಸಿ, ಅಗತ್ಯ ಪೀಠೊಪಕರಣ, ಸೋಲಾರ್‌ ವ್ಯವಸ್ಥೆ, ಪಾರ್ಕಿಂಗ್‌ ವ್ಯವಸ್ಥೆ, ಆಯುರ್ವೇದ ಉದ್ಯಾನವನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉನ್ನತೀಕರಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಶಾಸಕರು, ಸಂಸದರ ನಿಧಿ ಹಾಗೂ ಅದಾನಿ – ಯುಪಿಸಿಎಲ್‌ ಮತ್ತು ಎಂ.ಆರ್‌.ಪಿ.ಎಲ್‌ ಯೋಜನೆಗಳ ಸಿ.ಎಸ್‌.ಆರ್‌ ಅನುದಾನಕ್ಕಾಗಿಯೂ ಮನವಿ ಸಲ್ಲಿಸಲಾಗಿದೆ.
-ಡಾ| ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಪಂ

ಹೊಸ ಕಟ್ಟಡದ ನಿರೀಕ್ಷೆ
ಈಗಿನ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ರಚನೆಗೆ ನೀಲ ನಕಾಶೆ ಸಿದ್ಧಪಡಿಸಲಾಗಿದೆ. ಡಿಸ್ಪೆನ್ಸರಿ ಕೇಂದ್ರಗಳಿಗೆ ಪ್ರತೀ ವರ್ಷ 15 ಲಕ್ಷ ರೂ. ಮೀಸಲಿಡಲಾಗುತ್ತದೆ. ಬೆಳಪು ಡಿಸ್ಪೆನ್ಸರಿ ಕೇಂದ್ರಕ್ಕೆ ಪ್ರಸಕ್ತ ವರ್ಷದಲ್ಲಿ 20 ಲಕ್ಷ ರೂ., ಮುಂದಿನ ವರ್ಷದ 10 ಲಕ್ಷ ರೂ. ಸೇರಿಸಿ 30 ಲಕ್ಷ ರೂ. ಅನುದಾನದ ಕಟ್ಟಡಕ್ಕೆ ನಕ್ಷೆ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ| ಸತೀಶ್‌ ಆಚಾರ್ಯ, ಜಿಲ್ಲಾ ಆಯುಷ್‌ ಅಧಿಕಾರಿ

ಪೂರ್ಣ ಸಹಕಾರ
ಗ್ರಾಮ ಪಂಚಾಯತ್‌ನಿಂದ ಪ್ರಸ್ತಾವನೆ ಬಂದಿದೆ. ಇಲಾಖೆ ಕೂಡಾ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದೆ. ಕಾಪು ತಾಲೂಕಿನ ಮೂರು ಸರಕಾರಿ ಆಯುರ್ವೇದ ಆಸ್ಪತ್ರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇಲಾಖೆ, ಶಾಸಕರ ನಿಧಿ, ಸರಕಾರದ ಅನುದಾನದ ಜತೆಗೆ ಖಾಸಗಿ ಸಹಭಾಗಿತ್ವಕ್ಕೂ ಪ್ರಯತ್ನಿಸಲಾಗುವುದು.
-ಸುರೇಶ್‌ ಶೆಟ್ಟಿ ಗುರ್ಮೆ, ಶಾಸಕರು, ಕಾಪು

ಅಭಿವೃದ್ಧಿಗೊಂಡರೆ ಪ್ರಯೋಜನವೇನು?
– ಮೇಲ್ದರ್ಜೆಗೇರಿಸಲ್ಪಟ್ಟು ಸೂಕ್ತ ಸಿಬಂದಿಯ ಸೌಲಭ್ಯ ದೊರಕಿದರೆ ಒಳ ರೋಗಿಗಳ ವಿಭಾಗವನ್ನೂ ಆರಂಭಿಸಬಹುದು.
– ಆಯುಷ್‌ ವೆಲ್‌ನೆಸ್‌ ಸೆಂಟರ್‌ ಪ್ರಾರಂಭ ಗೊಂಡರೆ ಯೋಗ ಶಿಬಿರ, ವಿವಿಧ ವೈದ್ಯರ ಸೇವೆ, ಪಂಚಕರ್ಮ ಚಿಕಿತ್ಸೆ ಸಹಿತವಾಗಿ ಆಯು ರ್ವೇದ ಪದ್ಧತಿಯ ವಿವಿಧ ಚಿಕಿತ್ಸೆ ನೀಡಬಹುದು.
– ಸಿಬಂದಿ, ಯೋಗ ತರಬೇತುದಾರರನ್ನೂ ನೇಮಿಸಿಕೊಳ್ಳಬಹುದಾಗಿದೆ.

-ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.