Kaup: ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ

Team Udayavani, Jan 30, 2025, 3:04 PM IST

14(1

ಕಾಪು: ಸುಮಾರು ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಮಜೂರು ಗ್ರಾಮದ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನವೀಕೃತ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ, ಪಾಕಶಾಲೆ ಸಮರ್ಪಣೆ ಹಾಗೂ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ದೇವಸ್ಥಾನದ ಪ್ರಧಾನ ತಂತ್ರಿ ವೇ| ಮೂ| ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ ಅವರ ಸಹಭಾಗಿತ್ವದಲ್ಲಿ ಜ. 30ರಿಂದ ಮೊಲ್ಗೊಂಡು ಫೆ. 9ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನಿತ್ಯ ಅನ್ನಸಂತರ್ಪಣೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಫೆ. 1ರಂದು ಸಂಜೆ 5 ಗಂಟೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಸುರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಫೆ. 3 ಪ್ರತಿಷ್ಠೆ ; ಫೆ. 6 ಬ್ರಹ್ಮಕಲಶೋತ್ಸವ
ಫೆ. 2ರಂದು ಬೆಳಗ್ಗೆ 8.30ಕ್ಕೆ ಬ್ರಹ್ಮಸ್ಥಾನದಲ್ಲಿ ನಾಗದೇವರ ಪುನಃಪ್ರತಿಷ್ಠೆ, ಕಲಶಾಧಿವಾಸ, ಕಲಶಾಭಿಷೇಕ, ಬ್ರಹ್ಮಲಿಂಗೇಶ್ವರ ದೇವರಿಗೆ ಪಂಚ ವಿಂಶತಿ ಕಲಶಾಭಿಷೇಕ, ಸಪರಿವಾರ ನಾಗಬ್ರಹ್ಮರ ಪ್ರಸನ್ನ ಪೂಜೆ, ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಶುದ್ಧಾದಿ ಪ್ರಕ್ರಿಯೆಗಳು ನಡೆಯಲಿವೆ. ಫೆ. 3ರಂದು 8.20ಕ್ಕೆ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪುನಃಪ್ರತಿಷ್ಠೆ, ಪ್ರತಿಜ್ಣಾ ವಿಧಿ, ಮಹಾಪೂಜೆ, ಫೆ. 6ರಂದು ಬೆಳಿಗ್ಗೆ 9.20ಕ್ಕೆ ಸಹಸ್ರ ಪರಿ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಅವಸುೃತ ಬಲಿ, ಪ್ರಸನ್ನ ಪೂಜೆ, ಪಲ್ಲ ಪೂಜೆ, ಮಹಾಮಂತ್ರಾಕ್ಷತೆ, ಸಂಜೆ 7 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ ಎಂದು ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಮುಂಬಯಿ ಸಮಿತಿ, ಭಜನಾ ಮಂಡಳಿ, ಗ್ರಾಮದ ಹತ್ತು ಸಮಸ್ತರು, ಆರ್ಚಕ ವೃಂದದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಕಲಶೋತ್ಸವಕ್ಕೆ ತರಕಾರಿ ಬೆಳೆದ ಗ್ರಾಮಸ್ಥರು

ಐತಿಹಾಸಿಕ ಕ್ಷೇತ್ರ
ಕರಂದಾಡಿ ದೇವಸ್ಥಾನದ ಶ್ರೀ ವಿಷ್ಣುಮೂರ್ತಿ ದೇವರ ಮೂರ್ತಿಯು ಸುಮಾರು 14ನೇ ಶತಮಾನದ್ದು ಎಂದು ದಿ| ಪಾದೂರು ಗುರುರಾಜ ಭಟ್ಟರು ತುಳು ಇತಿಹಾಸ ಆಕರ ಗ್ರಂಥದಲ್ಲಿ ಉಲ್ಲೇಖೀಸಿದ್ದಾರೆ. ಉಳಿಯಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವ ಸಂದರ್ಭ ದೇವಿಯು, ಕರಂದಾಡಿ ಹೊಳೆಯಲ್ಲಿ ಜಳಕ ಮಾಡಿ ಶ್ರೀ ವಿಷ್ಣುಮೂರ್ತಿ ಮತ್ತು ಬ್ರಹ್ಮಲಿಂಗೇಶ್ವರ ದೇವರ ಭೇಟಿ ಮಾಡಿ, ಕಟ್ಟೆ ಪೂಜಾದಿಗಳನ್ನು ನೆರವೇರಿಸಿಕೊಳ್ಳುವ ಹಾಗೂ ಗ್ರಾಮದ ರಾಜನ್‌ ದೈವ ಮಜೂರು ಜುಮಾದಿಯ ಗಡುಪಾಡು ನೇಮೋತ್ಸವ ನಡೆಯುವ ಪುಣ್ಯ ಕ್ಷೇತ್ರವೂ ಇದಾಗಿದೆ.

ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಮುಂಬಯಿ ಸಮಿತಿಯ ನೇತೃತ್ವದಲ್ಲಿ ಊರ ಪರವೂರ ಭಕ್ತಾಭಿಮಾನಿಗಳು ಮತ್ತು ದಾನಿಗಳ ಸಹಕಾರದೊಂದಿಗೆ ಈ ಕ್ಷೇತ್ರವು ಜೀರ್ಣೋದ್ಧಾರಗೊಂಡಿದ್ದು ಬ್ರಹ್ಮಕಲಶೋತ್ಸವಕ್ಕೂ ಅಣಿಗೊಳ್ಳುತ್ತಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಗ್ರಾಮಸ್ಥರ ಶ್ರಮಾದಾನ ಮಹತ್ವದ ಪಾತ್ರ ನಿರ್ವಹಿಸಿದೆ. ಬ್ರಹ್ಮಕಲಶೋತ್ಸವಕ್ಕಾಗಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ಕರಂದಾಡಿ ಗ್ರಾಮಸ್ಥರ ಸಹಕಾರ‌ದೊಂದಿಗೆ ಅರ್ಧ ಎಕರೆ ಗದ್ದೆಯಲ್ಲಿ ಸೌತೆ ಕಾಯಿ, ಕುಂಬಳಕಾಯಿ, ಬದನೆ ಬೆಳೆಸಲಾಗಿದ್ದು ಅದನ್ನು ಹೊರೆ ಕಾಣಿಕೆ ರೂಪದಲ್ಲಿ ಸಮರ್ಪಿಸಲುದ್ದೇಶಿಸಲಾಗಿದೆ.

ಟಾಪ್ ನ್ಯೂಸ್

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Mysuru ಗಲಭೆ ಕೇಸಲ್ಲಿ ಅನಕ್ಷರಸ್ಥ ಮೌಲ್ವಿಯ ಬಂಧಿಸಿ: ಪ್ರತಾಪ ಸಿಂಹ

Mysuru ಗಲಭೆ ಕೇಸಲ್ಲಿ ಅನಕ್ಷರಸ್ಥ ಮೌಲ್ವಿಯ ಬಂಧಿಸಿ: ಪ್ರತಾಪ ಸಿಂಹ

Ragging: ವಿಜಯಪುರದ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ.. ಐವರು ವಿದ್ಯಾರ್ಥಿಗಳ ಬಂಧನ

Ragging: ವಿಜಯಪುರದ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ.. ಐವರು ವಿದ್ಯಾರ್ಥಿಗಳ ಬಂಧನ

High Court: ಪರಿಷ್ಕರಣೆ ಆಗದ ಕಾರ್ಮಿಕರ ಕನಿಷ್ಠ ವೇತನ: ನೋಟಿಸ್‌ ಜಾರಿ

High Court: ಪರಿಷ್ಕರಣೆ ಆಗದ ಕಾರ್ಮಿಕರ ಕನಿಷ್ಠ ವೇತನ: ನೋಟಿಸ್‌ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

1-wedw

Udupi;ಹೋಟೆಲ್ ಮಥುರಾ ಗೋಕುಲ್: ಫೆ19 ರಿಂದ ‘ಉಡುಪಿ ಸಂಸ್ಕೃತಿ’ ಕೈಮಗ್ಗ ಮತ್ತು ಕರಕುಶಲ ಮೇಳ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

ಭದ್ರಾವತಿಯಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ

ಭದ್ರಾವತಿಯಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.