Kaup ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ
ಪುರಸಭೆ ಸಾಮಾನ್ಯ ಸಭೆಯಲ್ಲಿ ಉದಯವಾಣಿ ಸುದಿನ ವರದಿ ಪ್ರತಿಧ್ವನಿ; ಪರಿಹಾರದ ವೇದಿಕೆ ಸಿದ್ಧಪಡಿಸಲು ಸೂಚನೆ; ಹಣದ ಕೊರತೆಯಿಲ್ಲ, ಜಾಗದ ಕೊರತೆ ಮಾತ್ರ; ಜನರ ತಪ್ಪು ತಿಳಿವಳಿಕೆ ಸರಿಪಡಿಸಿ; ರಾಜಕೀಯ ಬೇಡ; ಶಾಸಕ ಗುರ್ಮೆ
Team Udayavani, Nov 8, 2024, 3:43 PM IST
ಕಾಪು: ಕಾಪು ಪಟ್ಟಣವನ್ನು ಕಾಡುತ್ತಿರುವ ಕೊಳಚೆ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಳಚರಂಡಿ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸುವುದಕ್ಕಾಗಿ ವಿಶೇಷ ಸಭೆ ಕರೆಯಲು ಗುರುವಾರ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಪುರಸಭೆಯಾಗಿ, ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಕಾಪು ಪೇಟೆಯಲ್ಲಿ ಒಳಚರಂಡಿ ಯೋಜನೆಯ ಘಟಕ ಮತ್ತು ಎಸ್‌ಟಿಪಿ / ಯುಜಿಡಿ ಸೌಲಭ್ಯಗಳಿಲ್ಲದೇ ಪೇಟೆ ಮತ್ತು ಸುತ್ತಮುತ್ತಲಿನ ತ್ಯಾಜ್ಯ ಮತ್ತು ಮಲಿನ ನೀರು ಬೀಡುಬದಿ, ಕಲ್ಯ ಪರಿಸರ, ಭಾರತ್ ನಗರ ಸಹಿತ ವಿವಿಧ ಕೃಷಿ ಪ್ರದೇಶ ಮತ್ತು ಜನವಸತಿ ಪ್ರದೇಶಗಳಿಗೆ ಹರಿದು ಹೋಗುತ್ತಿದೆ. ಪೇಟೆಗೆ ಒಳಚರಂಡಿ ವ್ಯವಸ್ಥೆ ಬೇಕು ಎಂಬ ಬಗ್ಗೆ ಉದಯವಾಣಿ ಸುದಿನದಲ್ಲಿ ವಿಶೇಷ ಸರಣಿ ಪ್ರಕಟವಾಗಿತ್ತು. ಇದರಲ್ಲಿ ಎಲ್ಲಿ ಮತ್ತು ಹೇಗೆ ಎಸ್‌ಟಿಪಿ ಸ್ಥಾಪಿಸಬಹುದು ಎಂಬ ಬಗ್ಗೆಯೂ ಸಲಹೆಗಳನ್ನು ನೀಡಲಾಗಿತ್ತು. ಈ ವರದಿಗಳು ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿದವು.
ನಾಮನಿರ್ದೇಶಿತ ಸದಸ್ಯ ಅಮೀರ್ ಮೊಹಮ್ಮದ್ ಮಾತನಾಡಿ, ಕೊಳಚೆ ನೀರಿನ ನಿರ್ವಹಣೆಯಾಗದೇ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಉದಯವಾಣಿಯಲ್ಲಿ ವಿಶೇಷ ಸರಣಿ ಪ್ರಕಟವಾಗಿದೆ. ಕೊಳಚೆ ಸಮಸ್ಯೆ ನಿವಾರಣೆಗೆ ಅನುದಾನದ ಕೊರತೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲಿ ನಾವು ರಾಜಕೀಯ ಪ್ರೇರಿತ ವಿರೋಧ ಮಾಡುವುದು ಬೇಡ. ಎಲ್ಲರೂ ಒಂದಾಗಿ ವಿಶೇಷ ಆಸಕ್ತಿ ವಹಿಸಿ, ಕ್ರಮ ತೆಗೆದುಕೊಳ್ಳಬೇಕಿದೆ. ಶಾಸಕರು ಕೂಡಾ ಈ ವಿಚಾರದಲ್ಲಿ ಮುತುವರ್ಜಿ ವಹಿಸಬೇಕಿದೆ ಎಂದರು
ಸದಸ್ಯ ಅರುಣ್ ಶೆಟ್ಟಿ ಪಾದೂರು ಮಾತನಾಡಿ, ಕೊಳಚೆ ನೀರಿನ ನಿರ್ವಹಣೆ ಮತ್ತು ಎಸ್‌ಟಿಪಿ ರಚನೆ ನಮ್ಮೆಲ್ಲರ ಕರ್ತವ್ಯ. ಈ ವಿಚಾರದಲ್ಲಿ ನಾವು ರಾಜಕೀಯ ಬಿಟ್ಟು ಒಂದಾಗಿ ಯೋಚಿಸಬೇಕು. ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಜಾಗದ ಕೊರತೆಯಿದೆ. ಈಗಿನ ತಾಂತ್ರಿಕತೆಯನ್ನು ಬಳಸಿಕೊಂಡು ಅತ್ಯಾಧುನಿಕ ಮಾದರಿಯಲ್ಲಿ ಎಸ್‌ಟಿಪಿ ಘಟಕ ನಿರ್ಮಿಸಬಹುದಾಗಿದೆ. ಘಟಕ ಸ್ಥಾಪನೆಗೆ ಪುರಸಭೆ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಜನರ ವಿರೋಧಕ್ಕೂ ಮೊದಲು ನಾವು ಈ ಬಗ್ಗೆ ಚರ್ಚೆ ನಡೆಸಬೇಕಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶುದ್ಧೀಕರಣ ಘಟಕಕ್ಕೆ ಜಾಗ ಗೊತ್ತುಪಡಿಸೋಣ ಎಂದರು.
ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಉದಯವಾಣಿಯಲ್ಲಿ ಕೊಳಚೆ ನೀರಿನಿಂದ ಆಗುತ್ತಿರುವ ಸಮಸ್ಯೆಗಳು ಮಾತ್ರವಲ್ಲ, ಅದನ್ನು ಬಗೆಹರಿಸಬಹುದಾದ ಪರಿಹಾರ ಮಾರ್ಗಗಳ ಬಗ್ಗೆಯೂ ಸಲಹೆ ನೀಡಿದ್ದಾರೆ. ಈ ಬಗ್ಗೆ ಪುರಸಭೆ ಸದಸ್ಯರೆಲ್ಲರೂ ಏಕಮನಸ್ಸಿನಿಂದ ಒಂದಾಗಿ ನಿರ್ಧಾರ ತೆಗೆದುಕೋಳ್ಳುವ ಅಗತ್ಯವಿದೆ ಎಂದರು.
ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್ ಉಪಸ್ಥಿತರಿದ್ದರು.
ಚುನಾವಣೆ, ರಾಜಕೀಯ ಬಿಟ್ಟು ಎಲ್ಲರೂ ಸೇರಿ ಜಾಗ ಗುರುತಿಸಿ: ಗುರ್ಮೆ ಸಲಹೆ
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಮನೆಯಂಗಳದಿಂದ ಕೊಳಚೆ ನೀರು ಹೋಗಬೇಕು ಎನ್ನುವುದು ಬೇಡಿಕೆ. ಇಲ್ಲಿನ ಮೂಲ ಸಮಸ್ಯೆಯೆಂದರೆ ಜಾಗದ ಕೊರತೆ. ಈ ವಿಚಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ? ಎಂಬ ಪ್ರಶ್ನೆ ಉದ್ಭವಿಸಿದೆ. ಪುರಸಭೆ ಸದಸ್ಯರೆಲ್ಲರೂ ಜತೆ ಸೇರಿ ಒಂದು ನಿರ್ದಿಷ್ಟ ಜಾಗವನ್ನು ಗೊತ್ತುಪಡಿಸಿ, ಅದನ್ನು ನಿರ್ಣಯಿಸಬೇಕಿದೆ. ಜಾಗ ಹುಡುಕಿ, ನನ್ನ ಬಳಿಗೆ ಬನ್ನಿ. ನಾವೆಲ್ಲರೂ ಜತೆ ಸೇರಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಸ್‌ಟಿಪಿ ಘಟಕ ನಿರ್ಮಾಣ ಮಾಡೋಣ. ಚುನಾವಣೆ, ರಾಜಕೀಯ ಇವೆಲ್ಲವನ್ನೂ ಬದಿಗಿಟ್ಟು ಈ ಬಗ್ಗೆ ನಾವು ಯೋಚಿಸಬೇಕಿದೆ ಎಂದರು.
ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪಿಸಿ, ಅದನ್ನು ಮರು ಬಳಕೆಗೆ ಯೋಗ್ಯವನ್ನಾಗಿಸಿ ಕೊಳ್ಳಬಹುದಾಗಿದೆ. ಪ್ರತೀ ಪುರಸಭೆ ವ್ಯಾಪ್ತಿಯಲ್ಲಿಯೂ ಎಸ್‌ಟಿಪಿ ಘಟಕ ನಿರ್ಮಾಣದ ಬಗ್ಗೆ ರಾಷ್ಟ್ರೀಯ ಹಸಿರು ಪೀಠ ಕೂಡಾ ಈ ಬಗ್ಗೆ ಸೂಚನೆ ನೀಡಿದೆ. ಎಸ್‌ಟಿಪಿ ಘಟಕಗಳು ಇಲ್ಲದಿರುವ ಪುರಸಭೆಗೆ ಸರಕಾರದ ಅನುದಾನ ಕೂಡಾ ಕಡಿತವಾಗುತ್ತದೆ. ಮುಂದೆ ಇದನ್ನು ಸರಿಪಡಿಸಲು ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಸದಸ್ಯರೆಲ್ಲರೂ ಜತೆಗೂಡಿ ಒಂದೆರಡು ಜಾಗವನ್ನು ಗುರುತಿಸುವ ಪ್ರಯತ್ನ ನಡೆಸಬೇಕು. ಈ ವಿಚಾರದಲ್ಲಿ ಚರ್ಚಿಸಲು ತಹಶೀಲ್ದಾರ್, ಎಸಿ, ಡಿಸಿ ಅವರ ಜತೆಗೂ ವಿಶೇಷ ಸಭೆ ನಡೆಸಲು ಸಿದ್ಧನಿದ್ದೇನೆ ಎಂದರು.
ಅನುದಾನ ಈಗಾಗಲೇ ಮೀಸಲಿದೆ
ಎಸ್‌ಟಿಪಿ ರಚನೆಗೆ ಅನುದಾನದ ಕೊರತೆಯಿಲ್ಲ. ಆದರೆ ಜಾಗದ ಕೊರತೆಯಿದೆ. ಆದರೆ ಪುರಸಭೆ ಹೆಸರಿನಲ್ಲಿ ಸರಕಾರಿ ಜಾಗವಿಲ್ಲ. ಯಾವುದಾರರೂ ಸರಕಾರಿ ಜಾಗ, ಕಂದಾಯ ಇಲಾಖೆಗೆ ಸಂಬಂಧಪಟ್ಟ ಜಾಗ ಇದೆಯೇ ಎಂದು ಗುರುತಿಸುವಂತೆ ತಹಶೀಲ್ದಾರ್ ಅವರಿಗೂ ಪತ್ರ ಬರೆಯಲಾಗಿದೆ. ಸದಸ್ಯರು ಖಾಸಗಿ ಜಾಗವೇನಾದರೂ ಇದ್ದರೆ ಅದನ್ನು ಒದಗಿಸಿದರೆ, ಸರಕಾರಿ ದರಪಟ್ಟಿಯಂತೆ ಖರೀದಿಸಿ ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪಿಸಬಹುದಾಗಿದೆ. ಸದಸ್ಯರು ನಮ್ಮೊಂದಿಗೆ ಪೂರ್ಣ ರೀತಿಯಲ್ಲಿ ಸಹಕರಿಸಿದರೆ ತತ್‌ಕ್ಷಣ ಈ ಬಗ್ಗೆ ಕಾರ್ಯೋನ್ಮುಖರಾಗಲು ಸಾಧ್ಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ. ಹೇಳಿದರು.
ಕಾಪು ಸಮಸ್ಯೆಗೆ ಇದು ಪರಿಹಾರ
– ಕಾಪು ಪೇಟೆಗೆ 10 ಸಾವಿರ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ಸಾಕಾಗುತ್ತದೆ. ನೂತನ ಎಸ್‌ಬಿಆರ್ ಟೆಕ್ನಾಲಜಿ ಬಳಿಸಿದರೆ ಕೇವಲ 30-40 ಸೆಂಟ್ಸ್ ಜಾಗದಲ್ಲೇ ಸ್ಥಾಪಿಸಬಹುದು. ನಗರ ಮಧ್ಯದಲ್ಲಿದ್ದರೂ ಯಾವುದೇ ಸಮಸ್ಯೆ ಇರುವುದಿಲ್ಲ.
– ಪಾಂಗಾಳ ಅಥವಾ ಮಲ್ಲಾರು ಸೇತುವೆ ಬಳಿ ಜಾಗ ಬಳಸಬಹುದು.
– ಈಗಾಗಲೇ ಹತ್ತಾರು ಎಕರೆ ಕೃಷಿ ಭೂಮಿ ತ್ಯಾಜ್ಯ ನೀರಿನಿಂದ ಹಾಳಾಗಿದೆ. ಅದರಲ್ಲಿ ಒಂದು ಎಕರೆಯನ್ನು ಸರಿಯಾಗಿ ಬಳಸಿದರೆ ಉಳಿದ ಜಾಗದ ಮಾಲಿನ್ಯವನ್ನು ಕಡಿಮೆ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.