ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ; ಅ.27 ರಂದು ʼಶತಾಭಿವಂದನಂ’ ಆಚರಣೆ ಸಮಾರೋಪ ಸಂಭ್ರಮ

Team Udayavani, Oct 23, 2024, 4:04 PM IST

8-

ಉಡುಪಿ: 1923ರಲ್ಲಿ ಕೆಮ್ಮಣ್ಣಿನಲ್ಲಿ ದಿ. ಪಿ. ವೆಂಕಟಕೃಷ್ಣ ರಾವ್‌, ದಿ. ಜನಾಬ್‌ ಆಲಿ ಸಾಹೇಬರಿಂದ ಸ್ಥಾಪಿಸಲ್ಪಟ್ಟು, ಶತಮಾನೋತ್ಸವ ಸಂಭ್ರಮದಲ್ಲಿರುವ ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಾಭಿವಂದನಂ ಸಮಾರೋಪ ಸಂಭ್ರಮಾಚರಣೆ ಅಕ್ಟೋಬರ್‌ 27ರ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಕೆಮ್ಮಣ್ಣು ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಜರಗಲಿದೆ.

ಸಭಾ ಕಾರ್ಯಕ್ರಮದಂದು ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್‌.ರಾಜೇಂದ್ರ ಕುಮಾರ್‌ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಮಾಜಿ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ದೀಪ ಪ್ರಜ್ವಲಿಸಲಿದ್ದು, ಮಣಿಪಾಲ ಡಾ. ಟಿ.ಎಂ.ಎ.ಪೈ . ಫೌಂಡೇಶನ್‌ ಅಧ್ಯಕ್ಷ ವಿವಿಧ ಫಲಾನುಭವಿಗಳಿಗೆ ಕೊಡುಗೆಗಳನ್ನು ಹಸ್ತಾಂತರಿಸಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಟಿ. ಸತೀಶ್‌ ಶೆಟ್ಟಿ ವಹಿಸಲಿದ್ದು, ಕೆಮ್ಮಣ್ಣು ಸಂತ ಥೆರೆಸಾ ಚರ್ಚ್ ನ ಧರ್ಮಗುರು ರೇ| ಫಾದರ್‌ ಫಿಲಿಪ್‌ ನೇರಿ ಅರ್ಹೆನಾ ಶುಭಶಂಸನೆಗೈಯುವರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌, ಶಾಸಕ ಯಶ್‌ಪಾಲ್‌ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್‌, ರಾಜ್ಯ ಸಹಕಾರ ಮಹಾ ಮಂಡಲ ಅಧ್ಯಕ್ಷ ಜಿ.ಟಿ. ದೇವೇಗೌಡ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ್‌ ಶೆಟ್ಟಿ ಇಂದ್ರಾಳಿ, ಮಾಜಿ ಸಚಿವರಾದ ಕೆ. ಜಯಪ್ರಕಾಶ್‌ ಹೆಗ್ಡೆ , ಪ್ರಮೋದ್‌ ಮಧ್ವರಾಜ್‌, ಕಾಂಚನ ಹೂಂಡೈನ ಎಂ.ಡಿ. ಪ್ರಸಾದ್‌ ರಾಜ್‌ ಕಾಂಚನ್‌, ಹೂಡೆ ಬೀಚ್‌ ಹೀಲಿಂಗ್‌ ಸೆಂಟರ್‌ನ ಡಾ. ಮಹಮ್ಮದ್‌ ರಫೀಕ್‌, ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕಿ ರೇಣುಕಾ ಜಿ.ಎಸ್‌., ಎಸ್‌.ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕರಾದ ಡಾ. ದೇವಿ ಪ್ರಸಾದ್‌ ಶೆಟ್ಟಿ ಬೆಳಪು, ಅಶೋಕ್‌ ಶೆಟ್ಟಿ ಬೆಳ್ಳಂಪಳ್ಳಿ , ರಾಜೇಶ್‌ ರಾವ್‌ ಪಾಂಗಳ, ಕೆಮ್ಮಣ್ಣು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ರಾವ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ಧನ ತೋನ್ಸೆ, ತೋನ್ಸೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕುಸುಮ ರವೀಂದ್ರ, ಕಲ್ಯಾಣಪುರ ಗ್ರಾಮ ಪಂಚಾಯತ್‌ ಅಧ್ಯಕ್ಷ ನಾಗರಾಜ ಕುಂದರ್‌, ತೆಂಕನಿಡಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಶೋಭಾ ಡಿ. ನಾಯಕ್‌, ಬಡಾನಿಡಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಯಶೋಧಾ ಆಚಾರ್ಯ ಉಪಸ್ಥಿತರಿರುವರು.

ಕುಂದಾಪುರ ಸಹಕಾರ ಸಂಘಗಳ ನಿವೃತ ಉಪನಿಬಂಧಕ ಅರುಣ್‌ ಕುಮಾರ್‌ ಎಸ್‌.ವಿ., ಹಿರಿಯ ಸಹಕಾರಿ ಸರಳಾ ಬಿ. ಕಾಂಚನ್‌, ಯೋಧ ಕಿಶನ್‌ ಹಾಗೂ ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಗುವುದು.

ಶತಮಾನೋತ್ಸವದ ಸಂಭ್ರಮದಲ್ಲಿ ಶತಾಯುಷಿ ಸನ್ಮಾನ, ಆರೋಗ್ಯ-ರಕ್ತದಾನ ಶಿಬಿರ, ಸಹಕಾರಿ ಹಾಗೂ ನವೋದಯ ಕ್ರೀಡಾಕೂಟ, ಶಾಲೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ನೆರವು, ಕೊಡುಗೆಗಳನ್ನು ನೀಡಲಾಗಿದೆ.

ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ, 9ಕ್ಕೆ ಸಮಾಜ ಸೇವಕಿ ವೆರೊನಿಕಾ ಕರ್ನೆಲಿಯೋರಿಂದ ಸಹಕಾರಿ ಜಾಥಾಕ್ಕೆ ಚಾಲನೆ, ಯಕ್ಷ ನಾಟ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್‌ ರವರಿಂದ ಸಂಗೀತ ರಸಮಂಜರಿ, ಕುದ್ರೋಳಿ ಗಣೇಶ್‌ರವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ ಎಂದು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷರಾದ ಟಿ. ಸತೀಶ್‌ ಶೆಟ್ಟಿ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಪಾಧ್ಯಕ್ಷ ಬಿ. ಅಫ್ಜಲ್‌ ಸಾಹೇಬ್‌, ನಿರ್ದೇಶಕ ರಾಘವೇಂದ್ರ ಪ್ರಸಾದ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್‌ ಸಾಲ್ಯಾನ್‌ ಹಾಗೂ ಶಾಖಾ ವ್ಯವಸ್ಥಾಪಕ ಕಿಶೋರ್‌ ಶೆಟ್ಟಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Bidar: ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

Bidar: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

15

Amaran trailer: ಮೇಜರ್‌ ಮುಕುಂದ್‌ ಸಾಹಸಗಾಥೆಗೆ ಜೀವ ತುಂಬಿದ ಶಿವಕಾರ್ತಿಕೇಯನ್

Supreme Court: ಅಂತಿಮ ತೀರ್ಪಿಗೆ ಕಾರಣವನ್ನು 5 ದಿನದಲ್ಲಿ ಪ್ರಕಟಿಸಿ: ಸುಪ್ರೀಂ

Supreme Court: ಅಂತಿಮ ತೀರ್ಪಿಗೆ ಕಾರಣವನ್ನು 5 ದಿನದಲ್ಲಿ ಪ್ರಕಟಿಸಿ: ಸುಪ್ರೀಂ

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

Cyclone Dana: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

Cyclone Dana: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

Babusapaly2

Collapse: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೃತರ ಸಂಖ್ಯೆ 8ಕ್ಕೆ ಏರಿಕೆ, ಮಾಲೀಕ ಬಂಧನ!

Canada Analysis: ಕೆನಡಾ ಮತ್ತೊಂದು ಪಾಕಿಸ್ತಾನವಾಗಲಿದೆ? ಖಲಿಸ್ತಾನಿ ಪರ ಟ್ರುಡೋ ಮೋಹ!

Canada Analysis: ಕೆನಡಾ ಮತ್ತೊಂದು ಪಾಕಿಸ್ತಾನವಾಗಲಿದೆ? ಖಲಿಸ್ತಾನಿ ಪರ ಟ್ರುಡೋ ಮೋಹ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Katpadi – ಶಿರ್ವ: ರಸ್ತೆ ಗುಂಡಿಗೆ ತೇಪೆ

13(1)

Udupi: ಆಸ್ಪತ್ರೆ ಕಟ್ಟಡ ಹೊಂಡದಿಂದ ಅಪಾಯ!

12

Udupi: ಇನ್ನೂ ಘೋಷಣೆಯಾಗದ ಗಾಂಧಿ ಗ್ರಾಮ ಪುರಸ್ಕಾರ

Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ

Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

17

Sandalwood: ಸಂಗೀತಮಯ ದೂರ ತೀರಯಾನ

16

Shweta Srivastav: ಸಿನಿಜರ್ನಿಗೆ ಪುಸ್ತಕ ರೂಪ ಕೊಟ್ಟ ನಟಿ

Bidar: ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

Bidar: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

15

Amaran trailer: ಮೇಜರ್‌ ಮುಕುಂದ್‌ ಸಾಹಸಗಾಥೆಗೆ ಜೀವ ತುಂಬಿದ ಶಿವಕಾರ್ತಿಕೇಯನ್

Supreme Court: ಅಂತಿಮ ತೀರ್ಪಿಗೆ ಕಾರಣವನ್ನು 5 ದಿನದಲ್ಲಿ ಪ್ರಕಟಿಸಿ: ಸುಪ್ರೀಂ

Supreme Court: ಅಂತಿಮ ತೀರ್ಪಿಗೆ ಕಾರಣವನ್ನು 5 ದಿನದಲ್ಲಿ ಪ್ರಕಟಿಸಿ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.