ಉಡುಪಿ: ಯುವತಿ ಅಪಹರಣ ಶಂಕೆ; ಕಾರು ತೊರೆದು ಆರೋಪಿಗಳು ಪರಾರಿ
Team Udayavani, Jan 31, 2019, 6:25 AM IST
ಉಡುಪಿ: ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿ ಆಕೆಯನ್ನು ಹೊರದಬ್ಬಿ ಕಾರನ್ನು ಬಿಟ್ಟು ಹೋದ ಘಟನೆ ಬುಧವಾರ ಕಿನ್ನಿಮೂಲ್ಕಿ ಬಳಿ ಸಂಭವಿಸಿದೆ. ಯುವತಿಯನ್ನು ಬಲಾತ್ಕಾರವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ದುಷ್ಕರ್ಮಿಗಳು ಕಾರನ್ನು ಕಿನ್ನಿಮೂಲ್ಕಿ ಸಮೀಪದ ಬಲಾಯಿಪಾದೆಯ ರಾ.ಹೆ. 66ರಲ್ಲಿ ಬಿಟ್ಟು ಪರಾರಿಯಾದರು.
ಬೂದು ಬಣ್ಣದ ರಿಟ್ಜ್ ಕಾರು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿತ್ತು. ಅದರಲ್ಲಿದ್ದ ಯುವತಿ ಬೊಬ್ಬೆ ಹಾಕುತ್ತಿದ್ದಳು. ಕಿನ್ನಿಮೂಲ್ಕಿ-ಬಲಾಯಿಪಾದೆಯ ರಿಕ್ಷಾ ನಿಲ್ದಾಣದ ಸಮೀಪ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಕಾರಿನ ಬಾಗಿಲು ತೆರೆದು ಹೊರಗೆ ಹಾರಲು ಯತ್ನಿಸುತ್ತಿದ್ದಳು. ತತ್‌ಕ್ಷಣ ಚಾಲಕ ಕಾರನ್ನು ನಿಧಾನ ಮಾಡಿ ಆಕೆಯನ್ನು ಕಾರಿನಿಂದ ಹೊರಹಾಕಿ ಪರಾರಿಯಾದ. ಯುವತಿಯನ್ನು ಹೊರದಬ್ಬಿದ ಚಾಲಕ ಕಾರನ್ನು ಕಿನ್ನಿಮೂಲ್ಕಿ ಫ್ಲೈಓವರ್ ಮೂಲಕ ಉಡುಪಿ ಕಡೆ ಚಲಾಯಿಸಿಕೊಂಡು ಹೋಗಲು ಯತ್ನಿಸಿದ. ಸರ್ವಿಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾದ ಕಾರಣ ಚಾಲಕ ಸಮೀಪದ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಎದುರು ನಿಲ್ಲಿಸಿ ಬಸ್ ಹತ್ತಿಕೊಂಡು ಪರಾರಿಯಾದ ಎಂದು ಕಾರನ್ನು ಹಿಂಬಾಲಿಸಿಕೊಂಡು ಹೋದ ಸ್ಥಳೀಯ ರಿಕ್ಷಾ ಚಾಲಕರು ತಿಳಿಸಿದ್ದಾರೆ. ಏತನ್ಮಧ್ಯೆ ಯುವತಿ ಕಾರಿನಿಂದ ಹೊರಗೆ ಹಾರಲು ಯತ್ನಿಸಿಧ್ದೋ? ಅಥವಾ ಆಕೆಯನ್ನು ಹೊರಗೆ ತಳ್ಳಿದರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆ ನಡೆದ ತತ್‌ಕ್ಷಣ ಹಿಂಬದಿಯಿಂದ ಚಾಲಕ ಹಾಗೂ ಓರ್ವ ಮಹಿಳೆ ಇದ್ದ ಪಜೇರೋ ವಾಹನ ಬಂತು. ಕೂಡಲೇ ಆ ಯುವತಿ ಕಾರನ್ನೇರಿದಳು. ಬಳಿಕ ಯೂಟರ್ನ್ ಹೊಡೆದು ಕಾರು ಮಂಗಳೂರಿನತ್ತ ತೆರಳಿತು ಎಂದು ಸ್ಥಳೀಯ ರಿಕ್ಷಾ ಚಾಲಕರು ತಿಳಿಸಿದ್ದಾರೆ.
ಕಾರಿನಲ್ಲಿ ಬ್ಯಾಗ್ ಒಂದು ಪತ್ತೆಯಾಗಿದ್ದು ಇದರಲ್ಲಿ ಮೇಕ್ ಅಪ್ ಸೆಟ್, ನಗದು, ಟಿಕೆಟ್ ಪತ್ತೆಯಾಗಿದೆ. ಕಾರಿನಲ್ಲಿ ಯಾವುದೇ ದಾಖಲೆ ಸಿಕ್ಕಿಲ್ಲ. ಸಿಗರೇಟ್, ಹೆಡ್ ಫೋನ್, ಪಾದರಕ್ಷೆ ಪತ್ತೆಯಾಗಿದೆ. ಉಡುಪಿ ನೋಂದಣಿಯ ಕಾರು ಎನ್ನಲಾಗಿದೆ. ಯಾರೂ ದೂರು ಕೊಡದ ಕಾರಣ ಈ ಪ್ರಕರಣದ ಹಿಂದಿನ ಗುಟ್ಟೇನು ಎಂದು ತಿಳಿದುಬಂದಿಲ್ಲ.
ಪೊಲೀಸರಿಂದ ತನಿಖೆ ; ಘಟನ ಸ್ಥಳಕ್ಕೆ ಡಿವೈಎಸ್‌ಪಿ ಜೈಶಂಕರ್, ಮಲ್ಪೆ ಪೊಲೀಸ್ ನಿರೀಕ್ಷಕ ಮಧು ಆಗಮಿಸಿ ಪರಿಶೀಲನೆ ನಡೆಸಿದರು. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದೂರುದಾರರೇ ಇಲ್ಲ, ಪ್ರಕರಣ ದಾಖಲಾಗಿಲ್ಲ
ಯಾರೂ ದೂರು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ. ಮಲ್ಪೆ ಠಾಣಾ ಪಿಎಸ್‌ಐ ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಲಕ್ಷ್ಮಣ ನಿಂಬರಗಿ ಉಡುಪಿ ಎಸ್ ಪಿ
ಪರಿಶೀಲನೆ ನಡೆಯುತ್ತಿದೆ
ಪ್ರಕರಣ ಇನ್ನೂ ದಾಖಲಾಗಿಲ್ಲ. ಅವಳು ಬಿದ್ದಧ್ದೋ ಅಥವಾ ದೂಡಿ ಹಾಕಲಾಗಿದೆಯೋ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಮಧು, ಮಲ್ಪೆ ಪೊಲೀಸ್ ನಿರೀಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.