ಮಲ್ಪೆ ಬೀಚ್‌ನಲ್ಲಿ ಗಾಳಿಪಟ ಉತ್ಸವ
Team Udayavani, Jan 1, 2019, 4:28 AM IST
ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಸೋಮವಾರ ಬೀಚ್ ಗಾಳಿಪಟ ಉತ್ಸವವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಇದೇ ಮೊದಲ ಬಾರಿಗೆ ಪ್ರಾಯೋಗಿ ಕವಾಗಿ ಏರ್ಪಡಿಸಲಾಗಿದ್ದು, ಮುಂದೆ ಪ್ರತೀ ವರ್ಷ ಆಯೋಜಿಸಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದರು.
ದೇಶದ ವಿವಿಧ ಭಾಗಗಳಿಂದ 30-35 ಮಂದಿ ವೃತ್ತಿಪರ ಗಾಳಿಪಟ ವಿನ್ಯಾಸಗಾರರು ಆಗಮಿಸಿದ್ದು, ಆಸಕ್ತರಿಗೆ ಗಾಳಿಪಟ ತಯಾರಿ ಬಗ್ಗೆ ತರಬೇತಿಯನ್ನೂ ನೀಡಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಸ್ವಾಗತಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. 110 ಅಡಿ ಉದ್ದದ ನಾಗನ ಹೋಲುವ 3ಡಿ ಗಾಳಿಪಟ, ಚಾರ್ಲಿ ಚಾಪ್ಲಿನ್ ಹೋಲುವ ಗಾಳಿಪಟ ಬಾನಂಗಳದಲ್ಲಿ ರಾರಾಜಿಸಿದವು.
ಬಾನಂಗಳದಲ್ಲಿ ಚಿತ್ತಾರ
ಒಮ್ಮೆ ಒಂದರ ಸನಿಹ ಇನ್ನೊಂದು ಓಡಿ ಬಂದು ಮುತ್ತಿಕ್ಕಿದಂತೆ, ಇನ್ನೊಮ್ಮೆ ದೂರ ಚದುರಿ ಒಬ್ಬಂಟಿಯಾದಂತೆ… ಮತ್ತೂಮ್ಮೆ ನೂರಾರು ಪಟಗಳು ಒಂದಾಗಿ ಕಡಲಿನಿಂದ ಮೇಲೆದ್ದ ಮೀನಿನ ರಾಶಿಯಂತೆ… ಕಡಲ ಗಾಳಿಗೆದುರಾಗಿ ಮೇಲೇರುವ ತವಕ. ಆಕಾಶವೆಲ್ಲ ಬಣ್ಣದ ಚಿತ್ತಾರ. ಪಟಪಟ ಸದ್ದು. ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿ ಸಾಗರ ತಟದಲ್ಲಿ ಸೇರಿದ್ದ ಸಹಸ್ರ ಜನತೆಯಿಂದ ಉದ್ಘಾರ. 80 ಅಡಿ ವ್ಯಾಸದ “ರಿಂಗ್ ಕೈಟ್ಸ್’ನಿಂದ ಹಿಡಿದು ಅಂಗೈಯಷ್ಟು ಪುಟ್ಟದಾದ ಗಾಳಿಪಟಗಳು ಉತ್ಸವಕ್ಕೆ ಮೆರುಗು ತಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.