ಕಿಟ್ಟ ಕುಟುಂಬಕ್ಕೆ ಸಿಕ್ಕಿಲ್ಲ ಪರಿಹಾರ!
ಬೆಂಕಿ ಅವಘಡಕ್ಕೆ 4 ತಿಂಗಳು; ಕೈ ಕೊಟ್ಟ ವಿಧಿ, ಸಿಗದ ಪರಿಹಾರ ನಿಧಿ
Team Udayavani, Apr 12, 2022, 11:55 AM IST
ಕಾರ್ಕಳ: ಕಾರ್ಕಳದ ಕ್ಕುಕುಂದೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ನೂಟ್‌ನಿಂದ ಮನೆ ಕಳೆದುಕೊಂಡ ಬಡ ಕುಟುಂಬವೊಂದು ದಯನೀಯ ಸ್ಥಿತಿಯಲ್ಲಿದ್ದು ಈ ಕುಟುಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ತಮ್ಮ ಕಷ್ಟಗಳಿಗೆ ಸರಕಾರ ಸ್ಪಂದಿಸಬೇಕೆಂದು ಕುಟುಂಬ ಮೊರೆ ಇಟ್ಟಿದೆ.
ಪರಿಶಿಷ್ಟ ಜಾತಿಗೆ ಸೇರಿದ ಇಳಿವಯಸ್ಸಿನ ಕಿಟ್ಟ -ಕಮಲಾ ದಂಪತಿ ಕಳೆದ 35ಕ್ಕೂ ಅಧಿಕ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡು ಇಲ್ಲಿ ವಾಸವಾಗಿದ್ದರು. 4 ತಿಂಗಳ ಹಿಂದೆ ಈ ಮನೆಯಲ್ಲಿ ನಡೆದ ಅಗ್ನಿ ದುರಂತದ ಬಳಿಕ ಕುಟುಂಬ ಬೀದಿಗೆ ಬಿದ್ದಿದೆ.
ಡಿ. 31ರ ರಾತ್ರಿ ಇವರ ಮನೆಯ ವಿದ್ಯುತ್ ವಯರಿಂಗ್‌ನಲ್ಲಿ ಶಾರ್ಟ್ ಸರ್ಕ್ನೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮನೆಯೇ ಹೊತ್ತಿ ಉರಿದಿತ್ತು. ಈ ಅವಘಡದಲ್ಲಿ ಲಕ್ಷಾಂತರ ರೂ. ಸೊತ್ತು ನಾಶವಾಗಿ ಅಪಾರ ಹಾನಿ ಸಂಭವಿಸಿತ್ತು.
ಮನೆ ಹೊತ್ತಿ ಉರಿದ ಅವಶೇಷಗಳು ಇಂದಿಗೂ ಹಾಗೆಯೇ ಉಳಿದಿವೆ. ಈ ಭಾಗದಲ್ಲಿ ನಿತ್ಯವೂ ಮಳೆಯಾಗುತ್ತಿದೆ. ಮನೆಯಿಂದ ಹೊರ ಬಂದ ಕುಟುಂಬ ಅವಶೇಷಗಳಡಿ ಅಂಗಳದಲ್ಲಿ ಜೋಪಡಿ ಹಾಕಿ ಗಾಳಿ, ಮಳೆಗೆ ಮೈಯೊಡ್ಡಿ ಕುಟುಂಬ ದಿನ ಕಳೆಯುತ್ತಿದೆ.
ಘಟನೆ ನಡೆದು ನಾಲ್ಕು ತಿಂಗಳಿದಿಂದ ಮನೆ ಅಂಗಳವನ್ನು ಆಶ್ರಯಿಸಿಕೊಂಡ ಕುಟುಂಬಕ್ಕೆ ಮಕ್ಕಳೇ ಈಗ ಅಧಾರ. ಪುತ್ರ, ವಿವಾಹಿತೆ ಪುತ್ರಿ ಮತ್ತು ಆಕೆಯ ಇಬ್ಬರು ಮಕ್ಕಳ ಜತೆ ದಂಪತಿ ವಾಸಿಸುತ್ತಿದ್ದು, ಮಗಳು ಶ್ರೀಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಲ ಪಡೆದು ಸಣ್ಣ ಮನೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಸಾಲದ ಜತೆಗೆ ಅನಾರೋಗ್ಯ ಪೀಡಿತ ವೃದ್ಧ ಕಿಟ್ಟರಿಗೆ ಔಷಧ ಇತ್ಯಾದಿಗಳಿಗೆ ಆರ್ಥಿಕ ಕೊರತೆ , ಸಾಲ ತೀರಿಸಲಾಗದೆ, ಜೀವನ ನಡೆಸಲು ಕುಟುಂಬ ಪರಿತಪಿಸುತ್ತಿದೆ.
ಕೂಗಳತೆಯಲ್ಲಿದೆ ಕಂದಾಯ ಕಚೇರಿ
ಅವಘಡ ಸಂಭವಿಸಿ ನಾಲ್ಕು ತಿಂಗಳು ಕಳೆದರೂ ಕಂದಾಯ, ಗ್ರಾ.ಪಂ. ಕಚೇರಿ ಕುಟುಂಬ ವಾಸವಿರುವ ಸ್ಥಳದ ಕೂಗಳತೆ ದೂರದಲ್ಲಿದ್ದರೂ ಅವರು ಈ ಕಡೆ ಪರಿಹಾರ ನೀಡಲು ಗಮನಹರಿಸಿಲ್ಲ.
ನಾಲ್ಕು ತಿಂಗಳಾದರೂ ಪರಿಹಾರವಿಲ್ಲ
ಘಟನೆ ನಡೆದ ದಿನ ಸ್ಥಳೀಯಾಡಳಿತ, ಮೆಸ್ಕಾಂ ಇಲಾಖೆ ಅಧಿಕಾರಿಗಳು ಎಲ್ಲರೂ ಭೇಟಿ ನೀಡಿದ್ದರು. ಗ್ರಾ.ಪಂ. ತುರ್ತು ಪರಿಹಾರವೆಂದು 1 ಸಾವಿರ ರೂ. ನೀಡಿ ಕೈ ತೊಳೆದುಕೊಂಡಿದೆ. ಕಂದಾಯ ಅಧಿಕಾರಿಗಳು ನಷ್ಟದ ಲೆಕ್ಕ ಹಾಕಿ ಹೋಗಿದ್ದಾರೆ. ಆದರೆ ಪರಿಹಾರ ಗಗನಕಸುಮವಾಗಿದೆ.
ಬೂದಿಯಾದ ಚಿನ್ನ, ಹಣ
ಮಗ ದುಡಿದು, ಐದು ಮಂದಿ ಹೆಣ್ಣು ಮಕ್ಕಳು ಸಹಾಯ ಮಾಡಿದ ಹಣವನ್ನು ದಂಪತಿ ಕೂಡಿಟ್ಟಿದ್ದರು. 5 ಮಂದಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದರು. ಇದ್ದ ಒಬ್ಬ ಮಗನಿಗೆ ಮದುವೆ ನಿಶ್ಚಯ ವಾಗಿತ್ತು. ಅದಕ್ಕೆಂದು ಚಿನ್ನದ ಒಡವೆ ಖರೀದಿಸಿ ಮನೆಯಲ್ಲಿ ಇಟ್ಟಿದ್ದೆವು. ಅದೆಲ್ಲವೂ ಬೆಂಕಿಗೆ ಆಹುತಿ ಆಗಿವೆ. ಸ್ವಲ್ಪ ಕೂಡಿಟ್ಟ ಹಣವೂ ಬೂದಿಯಾಗಿದೆ. ಇದರ ಮನೆಯ ಇತರ ಎಲ್ಲ ವಸ್ತು ಗಳು ಬೆಂಕಿಗೆ ಕರಕಲಾಗಿವೆ ಎಂದು ವೃದ್ಧೆ ಕಮಲಾ ತಿಳಿಸಿದ್ದಾರೆ.
ಪರಿಶೀಲಿಸಲಾಗುವುದು
ಹಾನಿಗೊಳಗಾಗಿ ನಷ್ಟ ಉಂಟಾದ ಸಂದರ್ಭ ಪರಿಹಾರ ನೀಡಲು ಕೆಲವೊಂದು ಸರಕಾರದ ನಿಯಮಾವಳಿ ಇರುತ್ತದೆ. ಶಾರ್ಟ್ ಸರ್ಕ್ನೂಟ್ ನ ಎಲ್ಲ ಪ್ರಕರಣಗಳಿಗೆ ಪರಿಹಾರ ನೀಡಲು ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. –ಪ್ರದೀಪ್ ಕುರ್ಡೇಕರ್ ತಹಶೀಲ್ದಾರ್, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.