ನ್ಯೂಯಾರ್ಕ್ ಸಿನಿಮೋತ್ಸವಕ್ಕೆ ಕುಂದಾಪ್ರ ಕನ್ನಡದ ‘ಕೋಳಿ ತಾಳ್’ ಚಿತ್ರ ಆಯ್ಕೆ
ನ್ಯೂಯಾರ್ಕ್ ತಲುಪಿದ ‘ಕೋಳಿ ತಾಳ್’
Team Udayavani, May 25, 2021, 4:59 PM IST
ಬ್ರಹ್ಮಾವರ : ಕುಂದಾಪುರ ಭಾಷಾ ಸೊಗಡಿನ ಚಿತ್ರ ‘ಕೋಳಿ ತಾಳ್’ ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.
ಕುಂದಾಪುರ, ಮಲೆನಾಡ ಭಾಗದಲ್ಲಿ ಅಜ್ಜಿ ಮನೆಗೆ ಮೊಮ್ಮಗ ಬಂದರೆ ಕೋಳಿ ಕರಿ ಮಾಡುವ ಸಂಪ್ರದಾಯವಿದೆ. ಹಾಗೆ ಮೊಮ್ಮಗ ಬಂದ ಹೊತ್ತಲ್ಲಿ ಕರಿ ಮಾಡಬೇಕಿದ್ದ ಕೋಳಿಯೇ ನಾಪತ್ತೆಯಾಗುತ್ತದೆ. ಆ ಕೋಳಿಯನ್ನು ಹುಡುಕಾಡುವ ಪ್ರಸಂಗವೇ ಕೋಳಿ ತಾಳ್ ಚಿತ್ರದ ಸಾರಾಂಶ.
ಇದನ್ನೂ ಓದಿ : ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ವಿದ್ಯಾರ್ಥಿಸ್ನೇಹಿ ‘ದೀಕ್ಷಾ’ಆಪ್ ಲೋಕಾರ್ಪಣೆ
ಒಂದೂವರೆ ಗಂಟೆಯ ಈ ಸಿನಿಮಾವನ್ನು 15 ರಿಂದ 20 ದಿನಗಳ ಅವಧಿಯಲ್ಲಿ ಸಾಗರ, ಬ್ರಹ್ಮಾವರ, ಉಡುಪಿ, ಮಂದಾರ್ತಿಯಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸಂಪೂರ್ಣ ಕುಂದಾಪುರ ಭಾಷೆಯ ಸೊಗಡು ಈ ಚಿತ್ರದಲ್ಲಿದೆ.
ಅಭಿಲಾಷ್, ಹಿರಿಯ ನಟರಾದ ರಾಧಾ ರಾಮಚಂದ್ರ , ಪ್ರಭಾಕರ್ ಕುಂದರ್, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮರ್ಷಿಯಲ್ ಅಂಶಗಳಿಲ್ಲದ ಈ ಸಿನಿಮಾವನ್ನು ಲಾಕ್ ಡೌನ್ ಗೂ ಮುನ್ನ ಚಿತ್ರಿಕರಿಸಲಾಗಿದೆ ಎಂದು ಸಿನೆಮಾ ತಂಡ ತಿಳಿಸಿದೆ.
ಸ್ಥಳೀಯ ಪ್ರತಿಭೆಗಳ ಈ ಪ್ರಯತ್ನ ಈಗ ನ್ಯೂಯಾರ್ಕ್ ಸಿನಿಮೋತ್ಸವದ ತನಕ ತಲುಪಿದ್ದು, ಭಾರಿ ಶ್ಲಾಘನೆಗೆ ಪಾತ್ರವಾಗುತ್ತಿದೆ.
ಇದನ್ನೂ ಓದಿ : ಹೂಡಿಕೆದಾರರಿಗೆ ಲಾಭ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಏರಿಕೆಯೊಂದಿಗೆ ವಹಿವಾಟು ಅಂತ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.