Kota: ದುರಸ್ತಿಗಾಗಿ ಕಾಯುತ್ತಿವೆ ಹೆದ್ದಾರಿ ಗುಂಡಿಗಳು

ನಿಮ್ಮೂರಿನ ಹೆದ್ದಾರಿಯಲ್ಲಿ ಹೊಂಡ, ಬೀದಿ ದೀಪ ಸಮಸ್ಯೆ ಇದ್ದರೆ ಟೋಲ್‌ಗೆ ಕರೆ ಮಾಡಿ

Team Udayavani, Oct 27, 2024, 5:37 PM IST

12(1)

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಲ್ಲಿ ಸಾಸ್ತಾನದಿಂದ ಕುಂದಾಪುರ ತನಕ ಅಲ್ಲಲ್ಲಿ ಬೃಹತ್‌ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದು ಮಳೆಗಾಲ ಮುಗಿದ ತತ್‌ಕ್ಷಣ ಕಾಮಗಾರಿ ಆರಂಭಿಸುವುದಾಗಿ ಹೆದ್ದಾರಿ ನಿರ್ವಹಣೆ ಹೊತ್ತಿರುವ ಕಂಪನಿ ತಿಳಿಸಿತ್ತು. ಇದೀಗ ಮಳೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದು, ಮಳೆಗಾಲ ಮುಗಿಯುತ್ತ ಬಂದಿದೆ. ಹೀಗಾಗಿ ತತ್‌ಕ್ಷಣ ಕಾಮಗಾರಿ ಆರಂಭಿಸಬೇಕು ಎನ್ನುವುದು ವಾಹನ ಸವಾರರ ಬೇಡಿಕೆಯಾಗಿದೆ.

ಈ ಹಿಂದೆ ಹೆದ್ದಾರಿ ನಿರ್ವಹಣೆಯನ್ನು ಹೊಸದಾಗಿ ಪಡೆದ ಹೈವೇ ಕನ್‌ಸ್ಟ್ರಕ್ಷನ್ಸ್‌ ಕಂಪನಿ ರಸ್ತೆಯ ಮರು ಡಾಂಬರೀಕರಣ ಕೆಲಸವನ್ನು ಆರಂಭಿಸಿತ್ತು. ಉಡುಪಿಯಿಂದ ಸಾಸ್ತಾನದ ತನಕ ಡಾಂಬರೀಕರಣ ನಡೆಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಸಾಸ್ತಾನ ಟೋಲ್‌ ಸಮೀಪದಲ್ಲೇ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮಳೆಗಾಲವಾದ್ದರಿಂದ ಗುಂಡ್ಮಿ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ ಕೋಟೇಶ್ವರ ಮೊದಲಾದ ಕಡೆ ರಸ್ತೆಯ ಗುಂಡಿಗಳು ಬೃಹತ್‌ ಗಾತ್ರದಲ್ಲಿ ಬಾಯ್ತರೆದಿದೆ. ರಾತ್ರಿ ವೇಳೆ ಬೈಕ್‌ ಸವಾರರು ಹೊಂಡವನ್ನು ಗಮನಿಸದೆ ಸ್ಕಿಡ್‌ ಆಗಿ ಬೀಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಕಾರು ಮೊದಲಾದ ಘನ ವಾಹನಗಳು ಹೊಂಡ ತಪ್ಪಿಸುವ ಬರದಲ್ಲಿ ಅಪಘಾತವಾಗುತ್ತಿದೆ. ಆದ್ದರಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಆಗಬೇಕು ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಬಾಕಿ ಉಳಿದಿರುವುದ ಮರು ಡಾಂಬರೀಕರಣ ಕಾಮಗಾರಿ ಆದಷ್ಟು ಶೀಘ್ರ ನಡೆಯಬೇಕು ಎನ್ನುವ ಬೇಡಿಕೆ ಇದೆ.

ಕಾಮಗಾರಿ ಶೀಘ್ರ ಆರಂಭಿಸಿ
ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಿಂದ ವಾಹನ ಸವಾರರಿಗೆ ಸಂಚರಿಸಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದಕ್ಕೆ ಪರಿಹಾರ ಅಗತ್ಯವಿದೆ. ಈ ಬಗ್ಗೆ ನಿರ್ವಹಣಾ ಕಂಪನಿಯ ಗಮನಕ್ಕೂ ಸಮಸ್ಯೆಯನ್ನು ತರಲಾಗಿದ್ದು ಶೀಘ್ರವಾಗಿ ಕಾಮಗಾರಿ ಆರಂಭಿಸಬೇಕು ಎಂದು ಸಾಸ್ತಾನದ ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರಾದ ಪ್ರತಾಪ್‌ ಶೆಟ್ಟಿ ಆಗ್ರಹಿಸಿದ್ದಾರೆ.

ನಿಮ್ಮಲ್ಲಿಯೂ ಸಮಸ್ಯೆಗಳಿದೆಯೇ ?
ಉಡುಪಿಯಿಂದ-ಕುಂದಾಪುರ ತನಕ ರಸ್ತೆಯಲ್ಲಿ ಹೊಂಡ, ನೀರು ನಿಲ್ಲುವುದು, ಬೀದಿ ದೀಪ, ವಾಹನ ಸಂಚಾರಕ್ಕೆ ಸಮಸ್ಯೆ ಮೊದಲಾದ ಸಮಸ್ಯೆಗಳಿದ್ದರೆ ಸ್ಥಳೀಯ ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಸಂಖ್ಯೆ 8130006595 ಕರೆ ಮಾಡಿ ದೂರು ನೀಡಬಹುದು.

ಶೀಘ್ರ ಕಾಮಗಾರಿ ಆರಂಭ
ತಾಂತ್ರಿಕ ಕಾರಣದಿಂದ ಮರು ಡಾಂಬರೀಕರಣ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಸಾಸ್ತಾನದಿಂದ-ಕುಂದಾಪುರ ತನಕ ಮರು ಡಾಂಬರೀಕರಣವನ್ನು ಶೀಘ್ರ ಆರಂಭಿಸಲಾಗುವುದು. ಜತೆಗೆ ರಸ್ತೆಯ ಹೊಂಡಗಳಿಗೂ ತೇಪೆ ಹಾಕುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.
-ತಿಮ್ಮಯ್ಯ, ಉಡುಪಿ ಟೋಲ್‌ಗ‌ಳ ಮ್ಯಾನೇಜರ್‌

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

1-a-PK

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

Sharanagowda-Kandakura

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ

1-mp-lungi

Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ

BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ‌ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?

BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ‌ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?

MB Patil 2

Waqf; ವಿಜಯಪುರದಲ್ಲಿ ಗೆಜೆಟ್ ದೋಷದಿಂದ ರೈತರ ಜಮೀನಿನಲ್ಲಿ ಗೊಂದಲ: ಎಂ.ಬಿ.ಪಾಟೀಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-4

Udupi; ಗೀತಾರ್ಥ ಚಿಂತನೆ-76: ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯ

11

Kaup ಕೊಳಚೆ ನೀರಿಗೆ ಇಲ್ಲಿದೆ ಪರಿಹಾರ!

10

Malpe: ಸಿದ್ಧಗೊಳ್ಳುತ್ತಿವೆ ಸಾಂಪ್ರದಾಯಿಕ ಗೂಡುದೀಪಗಳು

9(2)

Udupi: ಮೂಲೆಗುಂಪಾದ ಹೊಸ ಅಗ್ನಿಶಾಮಕ ಠಾಣೆ ಬೇಡಿಕೆ

8(1)

Udupi: ಅಳಿವಿನಂಚಿನಲ್ಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆಗೆ ಟೀಮ್‌ ತೌಳವ

MUST WATCH

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಹೊಸ ಸೇರ್ಪಡೆ

14

Dandeli:ಮನೆಯಿಂದ ಹೊರ ಹಾಕಲ್ಪಟ್ಟ ವೃದ್ಧ; ಆಶ್ರಯ ನೀಡಲು ಮುಂದಾದ ಚಿನ್ನಯ್ಯ ಆಶೀರ್ವಾದಂ ಗಜ್ಜ

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

puttige-4

Udupi; ಗೀತಾರ್ಥ ಚಿಂತನೆ-76: ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

1-a-PK

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.