ಕೋವಿಡ್, ಜಾಗರೂಕತೆ ಜತೆಗೆ ಆರ್ಥಿಕ ಪುನಶ್ಚೇತನಕ್ಕೆ ಸರ್ವ ಕ್ರಮ

ಜಿಲ್ಲಾಧಿಕಾರಿ ಜಿ.ಜಗದೀಶ್‌ ಜತೆ ಉದಯವಾಣಿ ಸಂದರ್ಶನ

Team Udayavani, Jun 16, 2020, 7:32 AM IST

ಕೋವಿಡ್, ಜಾಗರೂಕತೆ ಜತೆಗೆ ಆರ್ಥಿಕ ಪುನಶ್ಚೇತನಕ್ಕೆ ಸರ್ವ ಕ್ರಮ

ಕೋವಿಡ್ ವಿರುದ್ಧದ ಸಮರದಲ್ಲಿ ಮುಂದಿನ ಎರಡು ತಿಂಗಳ ಬಹಳ ಪ್ರಮುಖವಾದುದು. ಕೋವಿಡ್ ಜತೆ ಬದುಕುವುದನ್ನು ಅಭ್ಯಾಸ ಮಾಡುತ್ತಲೇ ಈ ಸವಾಲನ್ನು ಎದುರಿಸಬೇಕಾದ ಸ್ಥಿತಿ. ಆರ್ಥಿಕ ಚಟುವಟಿಕೆಗಳನ್ನೂ ನಿರ್ಲಕ್ಷ್ಯ ವಹಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಳಿದ ಚಟುವಟಿಕೆ ನಡೆಯಬೇಕಿದೆ ಎನ್ನುತ್ತಾರೆ ಉದಯವಾಣಿಯ ಸಂದರ್ಶನದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌. 

ಕೋವಿಡ್ ಆರಂಭಿಕ ಹಂತದಲ್ಲಿ ಇದ್ದಂತಹ ಜಾಗರೂಕತೆ, ಗಂಭೀರತೆ ಈಗ ಏಕೆ ಕಡಿಮೆಯಾಗಿದೆ?
ಆರಂಭದ ಹಂತದಲ್ಲಿ ಸರಕಾರ ಲಾಕ್‌ಡೌನ್‌ನ್ನು ಜಾರಿಗೊಳಿಸಿತು. ಅನಂತರ ತೆರವುಗೊಳಿಸಿದಾಗ ಜನ ಸಂಚಾರ ಆರಂಭಗೊಂಡಿತು. ಇತ್ತೀಚಿನ ದಿನಗಳಲ್ಲಿ ಪಾಸಿಟಿವ್‌ ಪ್ರಕರಣ ಜಾಸ್ತಿಯಾದಾಗ ಮತ್ತೆ ಜನರ ಓಡಾಟ ಕಡಿಮೆಯಾಗುತ್ತಿದೆ ಎಂದೆನಿಸುತ್ತಿದೆ. ಇದೇ ವೇಳೆ ಸಾಮಾಜಿಕ ಅಂತರ ಪಾಲನೆಯೂ ಕಡಿಮೆಯಾದಂತಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯ ಮತ್ತು ದೇಶಗಳಿಂದ ಇನ್ನಷ್ಟು ಜನರು ಬರುವವರಿದ್ದು ಹೆಚ್ಚಿನ ಸವಾಲುಗಳಿವೆ. ಮನೆಗಳಿಗೆ ಹೋದ ಬಳಿಕವೂ ಪಾಸಿಟಿವ್‌ ಪ್ರಕರಣ ವರದಿಯಾಗಬಹುದು. 28 ದಿನಗಳ ಬಳಿಕ ಪ್ರಕರಣ ವರದಿಯಾದದ್ದೂ ಇದೆ. ಹೀಗಾಗಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದರ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸಲು ಪೊಲೀಸ್‌ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಹಶೀಲ್ದಾರ್‌ಗಳ ಸಭೆ ನಡೆಸಿ ಸೂಚಿಸಿದ್ದೇನೆ.

ಕೆಲವೇ ಕೆಲವು ಪ್ರಕರಣಗಳಿದ್ದಾಗ ಜನರಲ್ಲಿದ್ದ ಗಂಭೀರತೆ ಅನಂತರ ಮಾಯವಾಯಿತೆ?
ಆ ಸಂದರ್ಭವೇ ಬೇರೆ, ಈ ಸಂದರ್ಭವೇ ಬೇರೆ. ಆಗ ಇಡೀ ದೇಶ ಲಾಕ್‌ಡೌನ್‌ನಲ್ಲಿತ್ತು, ಜನರೂ ಅದೇ ವಾತಾವರಣದಲ್ಲಿದ್ದರು. ಆರ್ಥಿಕ ವ್ಯವಸ್ಥೆಯೂ ಅಗತ್ಯವಲ್ಲವೆ? ಸರಕಾರ ನಿಧಾನವಾಗಿ ಲಾಕ್‌ಡೌನ್‌ ತೆರವುಗೊಳಿಸಿತು. ಸಾಮಾಜಿಕ ಅಂತರವನ್ನು ಕಾಪಾಡಿ ಕೊಂಡು ಚಟುವಟಿಕೆ ಆರಂಭಿಸಲು ಸೂಚಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ಶೇ. 95ರಷ್ಟು ಮಂದಿ ನಿಯಮ ಪಾಲಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸ್ಥಳೀಯ ಪ್ರಕರಣಗಳೂ ಇಲ್ಲವೇ ಇಲ್ಲ ಎನ್ನಬಹುದು. 11 ಪೊಲೀಸರು, ಇಬ್ಬರು ಸ್ಥಳೀಯರಿಗೆ ಮಾತ್ರ ಪಾಸಿಟಿವ್‌ ವರದಿಯಾಗಿದೆ. ಸ್ಥಳೀಯರ ಸಂಪರ್ಕ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅವರಿಗೆ ಮತ್ತೆ ಮಾದರಿ ಪರೀಕ್ಷೆ ನಡೆಸುತ್ತೇವೆ.

ಲಾಕ್‌ಡೌನ್‌ ತೆರವಾದರೂ ಮಾಲ್‌, ಸಾರಿಗೆ, ಹೊಟೇಲುಗಳ ವ್ಯವಹಾರ ಪುನಶ್ಚೇತನಗೊಂಡಿಲ್ಲ. ಜನರಲ್ಲಿ ಭಯ ಹೋಗಿಲ್ಲವೆಂದು ಅರ್ಥವೇ?
ಜಿಲ್ಲೆಯಲ್ಲಿ ಗೋಡಂಬಿ ಉದ್ಯಮವನ್ನು ಆರಂಭದಲ್ಲೇ ನಡೆಸಲು ಅವಕಾಶ ಕೊಟ್ಟಿದ್ದೆವು. ಉಳಿದಂತೆ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಘಟಕಗಳೂ ಕಾರ್ಯಾರಂಭ ಮಾಡಿವೆ. ಮೀನುಗಾರಿಕೆ ಮಾತ್ರ ತೊಂದರೆ ಅನುಭವಿಸಿದೆ. ಜನರೇ ತಮ್ಮ ಸುರಕ್ಷೆ ದೃಷ್ಟಿಯಿಂದ ಕೆಲವು ಸ್ಥಳಗಳಿಗೆ ಭೇಟಿ ಕೊಡುತ್ತಿಲ್ಲ ಎಂದೆನಿಸುತ್ತಿದೆ.

ಸರಕಾರ ವಿವಿಧ ವೃತ್ತಿಯವರಿಗೆ ಪರಿಹಾರ ಧನ ಘೋಷಿಸಿದ್ದರೂ ವಿತರಣೆ ಕುರಿತು ಮಾಹಿತಿ ಇಲ್ಲ. ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ ಕ್ರಮಗಳ ಕುರಿತೂ ಮಾಹಿತಿ ಇಲ್ಲ.
ಸೇವಾಸಿಂಧು ಮೂಲಕ ಆನ್‌ಲೈನ್‌ ಅರ್ಜಿ ಹಾಕಬೇಕು. ಪರಿಹಾರಧನವನ್ನು ಒಂದೊಂದೇ ಗುಂಪಿಗೆ ಸರಕಾರ ಬಿಡುಗಡೆ ಮಾಡುತ್ತದೆ. ಕೈಗಾರಿಕೆಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಘೋಷಣೆಯಾದ ಪ್ರೋತ್ಸಾಹ ಕ್ರಮಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರದ ಮಾರ್ಗದರ್ಶಿ ಸೂತ್ರಗಳು ಬಂದ ಬಳಿಕ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ಕರೆದು ಗರಿಷ್ಠ ಮಿತಿಯಲ್ಲಿ ಅದರ ಪ್ರಯೋಜನವನ್ನು ಜಿಲ್ಲೆಯವರಿಗೆ ತಲುಪಿಸಲು ಶ್ರಮಿಸಲಾಗುವುದು.

 ಜಿಲ್ಲೆಯಲ್ಲಿ ಸುಮಾರು 12,000ಕ್ಕೂ ಹೆಚ್ಚು ಗಂಟಲ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಶೇ.98 ಜನರಿಗೆ ಸೋಂಕಿನ ಲಕ್ಷಣವಿಲ್ಲ. ಮುಂದೆ ಲಕ್ಷಣವಿದ್ದವರಿಗೆ ಮಾತ್ರ ಮಾದರಿಗಳ ಸಂಗ್ರಹ ಎನ್ನುತ್ತಿದ್ದಾರೆ. ಇದು ಸರಿಯೇ?
ನಮ್ಮಲ್ಲಿ 14 ಲಕ್ಷ ಜನರಿದ್ದಾರೆ. ಇವರೆಲ್ಲರ ಮಾದರಿ ಸಂಗ್ರಹಿಸುವುದು ಸಾಧ್ಯವೆ? ಮುಂಬಯಿ ಹೈರಿಸ್ಕ್ ಪ್ರದೇಶವಾದ ಕಾರಣ ಅಲ್ಲಿಂದ ಬಂದವರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಐಸಿಎಂಆರ್‌ ಹೊಸ ನಿರ್ದೇಶನದಂತೆ ಮುಂದೆ ಕೋವಿಡ್ ಲಕ್ಷಣ ಇರುವವರ ಮಾದರಿಗಳನ್ನು ಸಂಗ್ರಹಿಸಲಾಗುವುದು. ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳನ್ನು ವಿಶೇಷ ವರ್ಗದವರೆಂದು ಪರಿಗಣಿಸಿ ಪರೀಕ್ಷಿಸುತ್ತೇವೆ.

ಕೋವಿಡ್ ಮುಗಿಯುವ ಹಂತದಲ್ಲಿರುವಾಗ ಸರಕಾರದ ಪ್ರಯೋಗಾಲಯ ಆರಂಭಗೊಳ್ಳುತ್ತಿದೆ, ಇದರ ಪ್ರಯೋಜನವೇನು?
ಮುಂದಿನ ಎರಡು ತಿಂಗಳು ಪ್ರಮುಖ ಸವಾಲುಗಳ ದಿನಗಳು. ನಿರ್ಬಂಧ ತೆರವಾಗಿರುವುದರಿಂದ ಯಾರು ಎಲ್ಲಿಗೂ ಹೋಗಬಹುದು. ಈ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆ, ಜ್ವರ, ಶೀತ, ಕೆಮ್ಮು ಇತ್ಯಾದಿ ಬಂದೇ ಬರುತ್ತದೆ. ಇಡೀ ಜಿಲ್ಲೆಯಲ್ಲಿ ಬಿಎಲ್‌ಒ ಮೂಲಕ ಮನೆಮನೆಗಳ ಸಮೀಕ್ಷೆ ನಡೆಸುತ್ತಿದ್ದೇವೆ. ಇಂತಹ ಲಕ್ಷಣಗಳಿದ್ದರೆ ಅವರ ಮಾದರಿಗಳನ್ನೂ ಪರೀಕ್ಷಿಸಬೇಕು. ಈಗ ಬಂದವರಿಗಿಂತ ಇನ್ನಷ್ಟು ಹೆಚ್ಚಿನ ಜನರು ವಿದೇಶಗಳಿಂದ ಬರುವವರಿದ್ದಾರೆ. ಹೊರ ರಾಜ್ಯಗಳಿಂದ ನಿತ್ಯ 200ರಿಂದ 250 ಅರ್ಜಿಗಳು ಬರುತ್ತಿವೆ. ಆದ್ದರಿಂದ ಪ್ರಯೋಗಾಲಯದ ಅಗತ್ಯ ಇದ್ದೇ ಇದೆ.

 ಮುಂದಿನ ದಿನಗಳನ್ನು ಸವಾಲುಗಳ ದಿನ ಎನ್ನುತ್ತೀರಿ… ಹೇಗೆ?
ಮಹಾರಾಷ್ಟ್ರ, ಗುಜರಾತ್‌, ದಿಲ್ಲಿ, ರಾಜಸ್ಥಾನ, ತಮಿಳುನಾಡಿನಲ್ಲಿ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿದೆ. ಈಗ ಜನರು ಎಲ್ಲೆಡೆ ಓಡಾಡುತ್ತಿದ್ದಾರೆ. ನಮ್ಮವರೂ ವಿವಿಧೆಡೆ ಸಂಚರಿಸುತ್ತಿದ್ದಾರೆ. ಆದ್ದರಿಂದ ಇದು ಜಿಲ್ಲಾಡಳಿತಕ್ಕೆ ಸವಾಲು. ಇವರ ಮೇಲೆ ನಿಗಾ ಇಡಬೇಕು, ಮನೆ ಕ್ವಾರಂಟೈನ್‌ಗೆ ಒಳಪಡಿಸಬೇಕು, ಆದರೆ ಸರಕಾರದ ಮುಖ್ಯ ಗುರಿ ಸಾವನ್ನು ತಪ್ಪಿಸುವುದು. ಹೀಗಾಗಿ ಬೇರೆ ರಾಜ್ಯಗಳು ಮತ್ತು ಅಂತಾರಾಷ್ಟ್ರೀಯವಾಗಿ ಪರಿಗಣಿಸಿದರೆ ನಮ್ಮಲ್ಲಿ ಆದ ಸಾವಿನ ಪ್ರಮಾಣ ಬಹಳ ಕಡಿಮೆ.

 ಈಗ ಸರಕಾರಿ ಇಲಾಖೆಗಳ ಸಿಬಂದಿ ಪೂರ್ಣವಾಗಿ ಕೋವಿಡ್ ಕೆಲಸದಲ್ಲಿ ತೊಡಗಿದ್ದಾರೆ. ಎರಡು ತಿಂಗಳ ಸವಾಲಿನ ದಿನ ಕಳೆದು ಸಹಜ ಸ್ಥಿತಿಗೆ ಬರಬಹುದೆ?
ಇದೊಂದು ಹೆಚ್ಚುವರಿ ಕೆಲಸವಷ್ಟೆ. ಇದರ ಜತೆಗೆ ನಮ್ಮ ಎಲ್ಲ ಕೆಲಸಗಳೂ ನಡೆಯುತ್ತಿದೆ. ಇದೇ ಉದ್ದೇಶಕ್ಕಾಗಿ ಸಾರ್ವಜನಿಕರ ಕೆಲಸಗಳಿಗಾಗಿ ಸಹಾಯವಾಣಿ ಆರಂಭಿಸಿದ್ದೇವೆ. ಗ್ರಾಮಕರಣಿಕರು, ಗ್ರಾ.ಪಂ. ಪಿಡಿಒಗಳಿಗೆ ಕೋವಿಡ್ ಕೆಲಸ ವಹಿಸಿದ್ದರೂ ಅದೇ ಗ್ರಾಮದಲ್ಲಿರುವುದರಿಂದ ಇದೊಂದು ಹೆಚ್ಚುವರಿ ಕೆಲಸವಷ್ಟೆ. ಮುಂದಿನ ದಿನಗಳಲ್ಲಿ ಕೋವಿಡ್ ಜತೆ ಬದುಕುವುದು ಅನಿವಾರ್ಯ.

ಜಿಲ್ಲೆಯ ಆರ್ಥಿಕ ಪುನಶ್ಚೇತನಕ್ಕೆ ತಾವು ತೆಗೆದುಕೊಂಡ ಕ್ರಮಗಳೇನು?
ಕೈಗಾರಿಕೆಗಳ ಉತ್ತೇಜನಕ್ಕಾಗಿ ಉಡುಪಿಯಿಂದ ಪಡುಬಿದ್ರಿವರೆಗೆ ಜಾಗಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕೈಗಾರಿಕಾ ಕ್ಷೇತ್ರದವರು ಘಟಕಗಳನ್ನು ಸ್ಥಾಪಿಸಬಹುದು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಬಹಳಷ್ಟು ಜಾಗವಿದೆ. ಇಲ್ಲಿ ಒಂದೋ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಅಥವಾ ಇತರ ಯಾವುದಾದರೂ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಬೇಕು. ಕಟ್ಟಡ ನಿರ್ಮಾಣ ಕ್ಷೇತ್ರ ಮಾತ್ರ ಕಾರ್ಮಿಕರ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಮಳೆಗಾಲ ಮುಗಿದ ಬಳಿಕ ಮರಳಿನ ಸಮಸ್ಯೆಯೂ ದೂರವಾಗಿ ನಿರ್ಮಾಣ ಕ್ಷೇತ್ರ ಪುನಶ್ಚೇತನಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಈ ಬಾರಿ ಕೃಷಿ ಕ್ಷೇತ್ರ ಸುಧಾರಣೆಗೊಳ್ಳಲಿದೆ. ಜವುಳಿ ಪಾರ್ಕ್‌ನ್ನು ಕಾರ್ಕಳದಲ್ಲಿ ತೆರೆಯಲು 20 ಎಕ್ರೆ ಮೀಸಲಿಟ್ಟಿದ್ದೇವೆ. ಕಚ್ಚಾ ಸಾಮಗ್ರಿಗಳಿಂದ ಆರಂಭಿಸಿ ಕೊನೆಯ ಉತ್ಪಾದನೆವರೆಗೆ ಇಲ್ಲಿ ಗಮನಹರಿಸಲಾಗುವುದು. ಪ್ರತಿ ತಾಲೂಕಿನಲ್ಲಿ 10 ಎಕ್ರೆ ಜಾಗವನ್ನು ಕೈಗಾರಿಕೆಗಳಿಗಾಗಿ ಮೀಸಲಿರಿಸುತ್ತೇವೆ. ಬೇರೆ ದೇಶ, ಬೇರೆ ರಾಜ್ಯಗಳಿಂದ ಬರುವವರು ಆಸಕ್ತರಿದ್ದರೆ ಇಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಬಹುದು.

ಟಾಪ್ ನ್ಯೂಸ್

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

3

Udupi: ಕೂಲಿ ಕಾರ್ಮಿಕನ ಮೇಲೆ ಹಲ್ಲೆ; ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.