Krishna Janmashtami: ಯಶೋದಾ ಕೃಷ್ಣ ಸ್ಪ ರ್ಧೆಗೆ ಫೋಟೋ ಕಳಿಸಿ ಬಹುಮಾನ ಗೆಲ್ಲಿ
Team Udayavani, Aug 24, 2024, 11:50 AM IST
ಮಣಿಪಾಲ: ಶ್ರೀ ಕೃಷ್ಣ ಜನ್ಮಾಷ್ಟಮಿ ಊರಿಗೆಲ್ಲ ಹಬ್ಬ. ಮಕ್ಕಳಿಗೆ ಶ್ರೀ ಕೃಷ್ಣ, ರಾಧೆಯ ವೇಷ ಧರಿಸುವ ಸಡಗರವಾದರೆ, ತಾಯಂದಿರಿಗೆ ಹಬ್ಬದ ತಯಾರಿ ಯೊಂದಿಗೆ ಯಶೋದೆಯಾಗುವ ತವಕ. ಈ ಹಬ್ಬದ ಸಂಭ್ರಮ ಹೆಚ್ಚಿಸಲೆಂದೇ ಉದಯವಾಣಿಯ ಪ್ರತಿಷ್ಠಿತ ಯಶೋದಾ ಕೃಷ್ಣ ಫೋಟೋ ಸ್ಪರ್ಧೆ ಮತ್ತೆ ಬಂದಿದೆ.
ಮಕ್ಕಳನ್ನು ಮುದ್ದು ಕೃಷ್ಣರಾಗಿ ರೂಪಿಸುವ ತಾಯಂದಿರೂ ಯಶೋಧೆಯಾಗಿ ಜತೆಗೆ ಸಂಭ್ರಮಿಸಲು ಉದಯವಾಣಿ ಹಾಗೂ ಉದಯ ಕಿಚನ್‌ನೆಕ್ಸ್ಟ್ ವೇದಿಕೆ ಕಲ್ಪಿಸುತ್ತಿದೆ. ಯಶೋದಾ ಕೃಷ್ಣ ಸ್ಪರ್ಧೆ-2024ಕ್ಕೆ “ತಾಯಿ ಯಶೋದೆಯೊಂದಿಗೆ ಬಾಲಕೃಷ್ಣ ಲೀಲೆಗಳು’ ಎಂಬ ಥೀಮ್‌ನಡಿ ಈ ವರ್ಷ ಚಿತ್ರಗಳನ್ನು ಕಳುಹಿಸಿ ಬಹುಮಾನ ಗೆಲ್ಲಬಹುದು. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಕಾಸರಗೋಡು, ಕೊಡಗು ಜಿಲ್ಲೆಗಳಿಂದಲೂ ಚಿತ್ರಗಳು ಬರಲಾರಂಭಿಸಿವೆ. ಚಿತ್ರಗಳನ್ನು ಕಳುಹಿಸಲು ಆ.28 ಕೊನೆಯ ದಿನ.
ತಾಯಿ ಮತ್ತು ಮಗುವಿಗಾಗಿಯೇ ಇರುವ ಅನುಪ ಮವಾದ ಫೋಟೋ ಸ್ಪರ್ಧೆಯಿದು. ತಾಲೂಕು ವಾರು 3 ಮೆಚ್ಚುಗೆ ಚಿತ್ರಗಳನ್ನು ಆಯ್ಕೆ ಮಾಡಿ ವಿಶೇಷ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುತ್ತದೆ.
ನಿಯಮಗಳು
ಚಿತ್ರಗಳು ಸ್ವಾಭಾವಿಕವಾಗಿದ್ದು, ಈ ಸ್ಪರ್ಧೆಗೆಂದೇ ತೆಗೆದಿರಬೇಕು.
ಚಿತ್ರಗಳು ಥೀಮ್ ಗೆ ಸೂಕ್ತವಾಗಿರ ಬೇಕು. ಕರಿಸಿರಬೇಕು.
ಕೃಷ್ಣ 5 ವರ್ಷದೊಳಗಿರಬೇಕು. ಯಶೋದೆಗೆ ವಯಸ್ಸಿನ ನಿರ್ಬಂಧ ಇಲ್ಲ(ಹಾಗೆಂದು ಅಕ್ಕ-ತಂಗಿ ವಯಸ್ಸಿನವರನ್ನು ಯಶೋದೆ ಎಂದು ಪರಿಗ ಣಿಸಲಾಗದು)
ಇ-ಮೇಲ್ ಮೂಲಕ ಕಳುಹಿಸುವ ಚಿತ್ರಗಳು ಕನಿಷ್ಠ 1 ಎಂ.ಬಿ. ಇರಲಿ. ವಾಟ್ಸ್ ಆ್ಯಪ್‌ಗೆ ಉತ್ತಮ ಗುಣಮಟ್ಟದ (ರೆಸಲ್ಯೂಶನ್) ಚಿತ್ರ ಕಳುಹಿಸಿ. ಒಬ್ಬ ಸ್ಪರ್ಧಿ 6 ಭಂಗಿಯ ಚಿತ್ರಗಳನ್ನು ಕಳುಹಿಸಬಹುದು.
ಯಶೋದಾ ಕೃಷ್ಣರ ಹೆಸರು, ಊರು, ವಿಳಾಸ ಸಂಪರ್ಕ ಸಂಖ್ಯೆ ಇರದ ಮತ್ತು ಹಳೆಯ ಫೋಟೋಗಳನ್ನು ಪರಿಗಣಿ ಸುವುದಿಲ್ಲ.
ಫೋಟೋಗಳನ್ನು [email protected] ಇಮೇಲ್ ಅಥವಾ ವಾಟ್ಸ್ ಆ್ಯಪ್ ಸಂಖ್ಯೆ 6362906068ಕ್ಕೆ ಕಳುಹಿಸಿಕೊಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.