ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ “ಕುಟೀರ’
ಕಾರ್ಕಳ ತಾಲೂಕಿನಾದ್ಯಂತ ವಿನೂತನ ಮಾದರಿ ಕಲಿಕೆ
Team Udayavani, Jan 2, 2020, 7:25 AM IST
ಬೆಳ್ಮಣ್: ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಲು ಪಠ್ಯದ ಕಲಿಕೆ ಮಾತ್ರವಲ್ಲ, ಅವರಿಗೆ ಜೀವನ ಮೌಲ್ಯ ತಿಳಿಸುವ ಕಾರ್ಯವೂ ಆಗಬೇಕು. ಇದಕ್ಕಾಗಿ ಹುಟ್ಟಿಕೊಂಡದ್ದು “ಕುಟೀರ’ ಮಾದರಿ ಶಿಕ್ಷಣ. ಇದನ್ನೀಗ ಕಾರ್ಕಳ ತಾಲೂಕಿನಾದ್ಯಂತ ಜಾರಿಗೆ ತರಲಾಗು ತ್ತಿದ್ದು, ಹಲವು ಶಾಲೆಗಳಲ್ಲಿ ಕುಟೀರ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ.
ಏನಿದು ಕುಟೀರ ಶಿಕ್ಷಣ ?
ಹಿಂದೆ ಗುರುಕುಲ ಮಾದರಿಯಲ್ಲಿ ಶಿಕ್ಷಣವಿದ್ದು ಅಲ್ಲಿ ಗುರುಗಳಿಂದ ಉತ್ತಮ ಸಂಸ್ಕಾರಭರಿತ, ಜೀವನ
ಮೌಲ್ಯಗಳ ಪಾಠ ಬೋಧಿಸಲಾಗು ತ್ತಿತ್ತು. ಕುಟೀರದ ವಾತಾವರಣದಲ್ಲಿ ಮಕ್ಕಳು ನೆಮ್ಮದಿ, ಶಾಂತಿ, ತಾಳ್ಮೆ ಮೂಲಕ ಪಾಠ ಪ್ರವಚನ ಆಲಿಸಿ ಬದುಕು ರೂಪಿಸಲು ಅಡಿಪಾಯ ವಾಗುತ್ತಿತ್ತು. ಇದೀಗ ನಾಲ್ಕು ಗೋಡೆ ಗಳ ನಡುವೆ ಪುಸ್ತಕದ ಪಾಠಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಸುಸ್ಥಿರ, ಹಲವು ಆಯಾಮದ ಶಿಕ್ಷಣ, ಜೀವನಮೌಲ್ಯದ ಪಾಠಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆೆ. ಇದಕ್ಕಾಗಿ ರೂಪು ತಳೆದಿರುವುದು ಕುಟೀರ ಶಿಕ್ಷಣ. ಇದನ್ನು ಕನ್ನಡ ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಬಿದಿರು, ಮುಳಿಹುಲ್ಲು, ಅಡಿಕೆ ಮರದಿಂದ ಮಾಡಿದ ಕುಟೀರ ನಿರ್ಮಿಸಲಾಗುತ್ತಿದ್ದು ತಂಪಾದ ವಾತಾ ವರಣದಲ್ಲಿ ಪಾಠ ಕೇಳುವ ಸೌಭಾಗ್ಯ ಮಕ್ಕಳದ್ದಾಗಿದೆ.
ಪಾಠ ಮಾತ್ರವಲ್ಲ
ಪುಸ್ತಕದ ಪಾಠಗಳ ಜತೆ ಜೀವನ ಮೌಲ್ಯ ಬೆಳೆಸುವ, ನೀತಿಕತೆ, ಪುರಾಣಗಳ ಕತೆ ಹೇಳಿ ಕೊಡಲಾಗುವುದು. ಒಂದರಿಂದ ಏಳನೇ ತರಗತಿವರೆಗೆ ಎಲ್ಲ ತರಗತಿಗಳಿಗೆ ದಿನಂಪ್ರತಿ ಒಂದೊಂದು ತರಗತಿಗಳನ್ನು ಈ ಕೊಠಡಿಯಲ್ಲಿ ನಡೆಸಲಾಗುವುದು. ತುಳುನಾಡಿನ ಪಾಡªನ, ಯಕ್ಷಗಾನ, ನಾಟಕ, ಕುಲಕಸುಬುಗಳ ಪರಿಚಯ, ಗ್ರಾಮೀಣ ಕ್ರೀಡೆಗಳ ತಿಳಿವಳಿಕೆ, ತೆಂಗಿನ ಮಡಲು ಹೆಣೆಯುವಿಕೆ ಸಹಿತ ವಿವಿಧ ಚಟುವಟಿಕೆಗಳು ಇಲ್ಲಿ ನಡೆಯಲಿವೆ. ಈಗಾಗಲೇ ಶಾಲೆಗಳ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಎಲ್ಲರೂ ಕೈಜೋಡಿಸಿದ್ದಾರೆ. ಕೆಲವೆಡೆ ಮಕ್ಕಳ ಹೆತ್ತವರು, ಎಸ್‌ಡಿಎಂಸಿ ಸದಸ್ಯರೇ ಕುಟೀರ ನಿರ್ಮಿಸಿಕೊಟ್ಟಿದ್ದಾರೆ. ಇನ್ನು ಕೆಲವೆಡೆ ಮುಖ್ಯ ಶಿಕ್ಷಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಸಹಕರಿಸಿದ್ದಾರೆ.
ಪರಿಕಲ್ಪನೆ
ಕಾರ್ಕಳ ತಾಲೂಕಿನಲ್ಲಿ ಈ ಕುಟೀರ ಶಿಕ್ಷಣದ ಪರಿಕಲ್ಪನೆಯ ಬೀಜ ಬಿತ್ತಿ ದವರು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾರ್ಕಳದ ಕ್ರಿಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಅವರ
ಮೂಲಕ ಈ ಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕಾರ್ಕಳಕ್ಕೆ 100 ವರ್ಷ ವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಚಟುವಟಿಕೆಗೆ ಶಿಕ್ಷಣಾಧಿ ಕಾರಿಗಳ ಸಲಹೆ ಮೇರೆಗೆ ಕುಟೀರ ಶಿಕ್ಷಣ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಈ ಪ್ರಯೋಗ ಈಗಾಗಲೇ ಹಲವು ಶಾಲೆಗಳಲ್ಲಿ ಆರಂಭಗೊಂಡಿದ್ದು ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 4ರಂದು ಆರಂಭಗೊಳ್ಳಲಿದೆ.
“ನಮ್ಮ ಪೆರ್ಮೆದ ಸ್ವರ್ಣ ಕಾರ್ಲ’ ಎಂಬ ಶಾಸಕರ ಪರಿಕಲ್ಪನೆಯ ಭಾಗ ಇದಾಗಿದ್ದು ಈಗಾಗಲೇ ಗುಬ್ಬಚ್ಚಿ ಇಂಗ್ಲಿಷ್ ನ್ಪೋಕನ್ ತರಗತಿ ಹೆಚ್ಚಿನ ಶಾಲೆಗಳಲ್ಲಿ ಅಳವಡಿಕೆಯಾಗಿದ್ದು ಗಾಂಧೀಜಿ 150, “ಸ್ವತ್ಛತೆಗಾಗಿ ಸ್ವಲ್ಪ ಹೊತ್ತು’ ಪರಿಣಾಮಕಾರಿಯಾಗಿ ನಡೆದಿದೆ. ಹತ್ತನೆಯ ತರಗತಿಯಲ್ಲಿ ಕಾರ್ಕಳಕ್ಕೆ ಶೇ. 100 ಫಲಿತಾಂಶ ಬರಬೇಕೆನ್ನುವ ಉದ್ದೇಶದಿಂದ ಎಸೆಸೆಲ್ಸಿ ವಿಷನ್ -100 ಅನ್ನು ನಡೆಸಲಾಗುತ್ತಿದೆ. ಬೆಳಗ್ಗೆ ಕಲಿಕೆಯಲ್ಲಿ ಹಿಂದಿರುವ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಮನೆಗೆ ಶಿಕ್ಷಣಾಧಿಕಾರಿಗಳು ,
ಜನಪ್ರತಿನಿಧಿಗಳು, ಶಿಕ್ಷಣ ತಜ್ಞರ ಭೇಟಿ ನೀಡಿ ಕಲಿಕೆಗೆ ಪ್ರೇರಣೆ ನೀಡಲಿದ್ದಾರೆ. ಇದರೊಂದಿಗೆ ಕುಟೀರ ಶಿಕ್ಷಣದಂತಹ ಯೋಚನೆಗಳು ಒಂದಿಷ್ಟು ಟಾನಿಕ್ ನೀಡಿದಂತಾಗಲಿದೆ. ಕುಟೀರದಲ್ಲಿ ಮಕ್ಕಳ ಸೃಜನಶೀಲತೆಗೆ ಒತ್ತು ಸಿಗಲಿದ್ದು, ಈ ಪ್ರಯತ್ನಕ್ಕೆ ಹೆತ್ತವರು ಶಹಬ್ಟಾಸ್ ಎಂದಿದ್ದಾರೆ.
ಶಾಸಕರ ಪ್ರೇರಣೆ
ಕಾರ್ಕಳ ಶಾಸಕರ ಪ್ರೇರಣೆಯಂತೆ ಕನ್ನಡ ಶಾಲೆಗಳಲ್ಲಿ ಕುಟೀರ ಶಿಕ್ಷಣ ಆರಂಭಿಸಲಾಗುವುದು. ಇಲ್ಲಿ ಹಿಂದಿನ ಗುರುಕುಲ ಶಿಕ್ಷಣದ ಮಾದರಿಯಲ್ಲಿ ಪಾಠ ಮಾಡಲಾಗುವುದು. ನಮ್ಮ ನಾಡಿನ ಸಂಸ್ಕೃತಿ, ತುಳುನಾಡಿನ ಆಚರಣೆಗಳ ಜತೆ ಬದುಕುವ ನೈತಿಕ ಶಿಕ್ಷಣ ನೀಡಲಾಗುವುದು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಹೆತ್ತವರು ಈ ಪರಿಕಲ್ಪನೆಗೆ ಕೈಜೋಡಿಸಿದ್ದಾರೆ.
-ಶಶಿಧರ್ ಜಿ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ
ಮೌಲ್ಯಾಧಾರಿತ ಶಿಕ್ಷಣ ಉದ್ದೇಶ
ಇದೊಂದು ಉತ್ತಮ ಪರಿಕಲ್ಪನೆ. ತರಗತಿಯ ಹೊರಗೆ ಪ್ರಶಾಂತ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಕುಟೀರ ಶಿಕ್ಷಣ ನಡೆಸಲಾಗುವುದು. ಈ ಪರಿಕಲ್ಪನೆಯ ರೂವಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆ.
-ಪೂರ್ಣಿಮಾ ಭಟ್, ಮುಖ್ಯ ಶಿಕ್ಷಕಿ, ಸರಕಾರಿ ಮಾದರಿ ಹಿ. ಪ್ರಾ. ಶಾಲೆ, ಮುಂಡ್ಕೂರು
ಮರದಡಿ ಪಾಠದ ನೆನಪು
ಈ ಕುಟೀರ ಶಿಕ್ಷಣದ ಮೂಲಕ ಹಿಂದೆ ನಾವು ಶಾಲೆಯಲ್ಲಿ ಕಲಿಯುತ್ತಿರುವಾಗ ಶಿಕ್ಷಕರು ಮರದಡಿಯಲ್ಲಿ ಪಾಠ ಮಾಡಿದ್ದ ನೆನಪಾಗುತ್ತಿದೆ. ನಮ್ಮ ಮಕ್ಕಳು ಧನ್ಯರು. ಖುಷಿಯಾಗುತ್ತಿದೆ.
-ರಮೇಶ್ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡ್ಕೂರು
-ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.