Leopard… ಪೆರಂಪಳ್ಳಿ: ಮಣಿಪಾಲದ ಮನೆ ಬಾಗಿಲಲ್ಲಿ ಚಿರತೆ ಪ್ರತ್ಯಕ್ಷ !
ಚಿರತೆ ಚಲನವಲನ ಸಿಸಿ ಕೆಮರಾದಲ್ಲಿ ದಾಖಲು, ರಾತ್ರಿ ಕಾಣೆಯಾಗಿದ್ದ ನಾಯಿ ಬೆಳಗ್ಗೆ ಹಾಜರು!
Team Udayavani, Jul 27, 2024, 9:53 AM IST
ಮಣಿಪಾಲ: ಚಿರತೆ ಬಾಯಿಗೆ ಸಿಗಬೇಕಿದ್ದ “ರಾಣಿ’ಗೆ ಈಗ ಪುನರ್ ಜನ್ಮ. ತನ್ನದೇ ಬುದ್ಧಿವಂತಿಕೆಯಿಂದ ಪಾರಾಗಿ ಬಂದಿರುವ “ರಾಣಿ’ ಬದುಕುಳಿದಿದ್ದೇ ಪವಾಡವಂತೆ. ಮಣಿಪಾಲ- ಕೊಳಲಗಿರಿ ಮಾರ್ಗದಲ್ಲಿರುವ ಮನೆಯೊಂದರ ಕಾಂಪೌಂಡ್ ಒಳಗೆ ಶುಕ್ರವಾರ ತಡರಾತ್ರಿ ಚಿರತೆ ಸಂಚರಿಸಿದ್ದು, ಮನೆಮಂದಿ ಹಾಗೂ ಸ್ಥಳೀಯರನ್ನು ಭಯಭೀತಗೊಳಿಸಿದೆ.
ಶುಕ್ರವಾರ ರಾತ್ರಿ 11.20ರ ಸುಮಾರಿಗೆ ಮಣಿಪಾಲ ಉಪೇಂದ್ರ ಪೈ ಸರ್ಕಲ್ ಕೆಳಗಿನ ಮಾರ್ಗದಲ್ಲಿ ಸಿಗುವ ಶಾಂಭವಿ ಅಪಾರ್ಟ್‌ಮೆಂಟ್‌ನ ಬಲಬದಿಯ “ಅಮೂಲ್ಯ ನೆಸ್ಟ್’ ಮನೆಯ ನಾಯಿ ರಾತ್ರಿ ಬೊಗಳಿದರೂ ಮನೆ ಮಂದಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ನಿಂತಿತು. ಆದರೆ ಕ್ಲೈಮ್ಯಾಕ್ಸ್ ನಲ್ಲಿ “ರಾಣಿ’ ಚಿರತೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾತ್ರಿಯಿಡೀ ಕಣ್ಮರೆಯಾಗಿದ್ದ ರಾಣಿ ಬೆಳಗ್ಗೆ ಮನೆ ಮುಂದೆ ಹಾಜರಿತ್ತು.
ಇವಿಷ್ಟೂ ಸಂಗತಿಗಳು ಮನೆಯವ ರಿಗೆ ತಿಳಿದದ್ದು ಬೆಳಗ್ಗೆ ಮನೆಯ ಸಿಸಿಟಿವಿ ದೃಶ್ಯಾವಳಿ ನೋಡಿದಾಗಲೇ. ಅದರಲ್ಲಿ ಚಿರತೆಯು ನಾಯಿಯ ಹಿಂದೆ ಹೋಗುತ್ತಿರುವ ದೃಶ್ಯ ದಾಖ ಲಾಗಿತ್ತು. ಇದನ್ನು ಕಂಡು ಮನೆ ಮಂದಿ ಗಾಬರಿಗೊಂಡರು. ಈ ಮನೆಯಲ್ಲಿ ಎರಡು ನಾಯಿಗಳಿವೆ. ಒಂದು ಝಾಝು, ಮತ್ತೂಂದು ಎಲ್ಲಿಂದಲೋ ಬಂದಿದ್ದ ರಾಣಿ.
ಜಾನೆಟ್ ಅವರ ಮನೆ ಇದಾಗಿದ್ದು, ರಾತ್ರಿ ವೇಳೆ ಮನೆಯಲ್ಲಿ ಅವರ ಪತಿ, ತಾಯಿ, ಸಹೋದರಿ ಮಾತ್ರ ಇದ್ದರು. ಇವರ ಮನೆಯ ಎದುರು ಮತ್ತೂಂದು ಮನೆ ಇದ್ದು, ಅಲ್ಲಿ ಸಿಸಿ ಕೆಮರಾ ಇಲ್ಲ. ಇಲ್ಲಿಯೇ ಅನತಿ ದೂರದಲ್ಲಿರುವ ಬ್ರಹ್ಮಕುಮಾರೀಸ್ ಕಚೇರಿ ಬಳಿ 6 ತಿಂಗಳ ಹಿಂದೆ ಕಟ್ಟಿ ಹಾಕಿದ್ದ 2 ದನದ ಕರುಗಳನ್ನು ಚಿರತೆ ಕೊಂಡೊಯ್ದಿತ್ತು.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿರಲಿಲ್ಲ. ಸುತ್ತಲೂ ಸುಮಾರು 2 ಎಕ್ರೆಗೂ ಅಧಿಕ ಕಾಡಿನಿಂದ ಕೂಡಿದ ಪ್ರದೇಶವಿದೆ. ಚಿರತೆ ರಾಣಿಯನ್ನು ಬೆನ್ನಟ್ಟಿ ಹೋಗಿತ್ತು. ರಸ್ತೆಯ ಅನತಿ ದೂರದಲ್ಲಿ ಇರುವ ಇಲ್ಲಿ ತಡರಾತ್ರಿ ಹಾಗೂ ಮುಂಜಾನೆ ಯವರೆಗೂ ಜನ ಹಾಗೂ ವಾಹನ ಸಂಚಾರವಿರುತ್ತದೆ. ಮನೆಯ ಬಳಿಯ ಖಾಸಗಿ ನಿವೇಶನದಲ್ಲಿ ಪೊದೆಗಳಿವೆ.
ಆತಂಕದ ಸ್ಥಿತಿ
ಜಿಲ್ಲಾಧಿಕಾರಿ ಕಟ್ಟಡದ ಕೆಳಭಾಗ, ಪೆರಂಪಳ್ಳಿ ಸುತ್ತಮುತ್ತಲೂ ದಟ್ಟ ಅರಣ್ಯ ವಿದ್ದು, ಹಲವು ಮನೆಗಳಿವೆ. ಆಹಾರಕ್ಕೆ ಹೊಂಚುಹಾಕುತ್ತಾ ರಾತ್ರಿ ವೇಳೆ ಆಗಮಿಸುವ ಚಿರತೆಗೆ ಎದುರು ಸಿಕ್ಕಿದರೆ ಅವರ ಪಾಡೇನೂ ಎಂಬುದು ಪ್ರಶ್ನೆ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ಇದ್ದು, ಕೆಮರಾ ಹಾಗೂ ಬೋನುಗಳನ್ನು ಇರಿಸಿದರೆ ಉತ್ತಮ ಎಂಬುದು ಸಾರ್ವಜನಿಕರ ಅನಿಸಿಕೆ.
ಚಿರತೆ ಎಲ್ಲಿ ಹೋಗಿರಬಹುದು?
ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಂತೆ ಹೆದ್ದಾರಿ ಮಾರ್ಗದ ಬದಿಯ ಪೊದೆಯಿಂದ ಚಿರತೆ ಆಗಮಿಸಿದೆ. ಬಳಿಕ ಮನೆಯಲ್ಲಿ ನಾಯಿ ಬೊಗಳುತ್ತಿದ್ದುದನ್ನು ಕಂಡು ಕಾಂಪೌಂಡ್‌ನೊಳಗೆ ಹಾರಿತು. ಯಾವಾಗಲೂ ಓಡಾಡಿಕೊಂಡಿರುತ್ತಿದ್ದ ರಾಣಿ ಶನಿವಾರ ಸಂಜೆವರೆಗೂ ಮನೆ ಎದುರು ಮಲಗಿದ್ದಳು. ಮತ್ತೂಂದು ನಾಯಿಯನ್ನು ಮನೆಯ ಒಳಭಾಗದ ಲ್ಲಿಯೇ ಮಲಗಿಸುವ ಮನೆಮಂದಿ ಶನಿ ವಾರದಿಂದ ರಾಣಿಗೂ ಮನೆಯ ಒಳಗೆ ಆಶ್ರಯ ಕಲ್ಪಿಸಿದರು.
ಕೆಮರಾ ಅಳವಡಿಕೆ
ಮನೆಮಂದಿ ಅರಣ್ಯ ಇಲಾಖೆಗೆ ತಿಳಿಸಿದ್ದು, ಇಲಾಖೆಯ ಸಿಬಂದಿ ಆಗಮಿಸಿ 2 ಕಡೆ ಕೆಮರಾ ಅಳವಡಿಸಿದ್ದಾರೆ. ನಾಯಿ ಯನ್ನು ಬಿಟ್ಟುಹೋದ ಚಿರತೆ ಮತ್ತೆ ಬರಬಹುದು ಎಂಬ ಊಹೆ ಇಲಾಖೆಯದ್ದು. ಎರಡು ದಿನ ಕೆಮರಾ ಇರಲಿದೆ. ಚಿರತೆ ಪತ್ತೆಯಾದರೆ ಬೋನು ಇರಿಸುವುದಾಗಿ ಇಲಾಖೆ ಸಿಬಂದಿ ತಿಳಿಸಿದ್ದಾರೆ.
ಚಿರತೆ ಪ್ರತ್ಯಕ್ಷವಾದ ಜಾಗ ದಲ್ಲಿ ಕೆಮರಾ ಅಳವಡಿ ಸಿದ್ದು, ಚಲನವಲನ ಗಮನಿಸ ಲಾಗು ವುದು. ಅದು ಸ್ಥಳೀಯ ಪರಿಸರದ್ದೇ ಅಥವಾ ಬೇರೆ ಕಡೆಯದ್ದೇ ಎಂದು ತಿಳಿಯುವುದು ಮುಖ್ಯ. ಸ್ಥಳೀಯ ವಾಗಿದ್ದರೆ ಅದು ಮತ್ತೆ ಮತ್ತೆ ಬರುವ ಸಾಧ್ಯತೆಗಳೇ ಹೆಚ್ಚು. ಅದನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುವುದು.
-ಗಣಪತಿ, ಡಿಎಫ್ಒ, ಅರಣ್ಯ ಇಲಾಖೆ, ಕುಂದಾಪುರ ವಿಭಾಗ
ಇದನ್ನೂ ಓದಿ: Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.