ಲಾಕ್‌ಡೌನ್: ಜಿಲ್ಲಾ ಕ್ರೀಡಾ ಇಲಾಖೆಯ ಆದಾಯಕ್ಕೂ ಖೋತ
Team Udayavani, Apr 27, 2020, 5:05 AM IST
ಉಡುಪಿ: ಗುಂಪು ಚಟುವಟಿಕೆಯನ್ನು ನಿರ್ಬಂಧಿಸಿ ಲಾಕ್‌ಡೌನ್ ಆರಂಭದಲ್ಲಿ ಸರಕಾರದ ಇಲಾಖೆಯಲ್ಲಿ ಬರುವ ಕ್ರೀಡಾ ಇಲಾಖೆಯ ಎಲ್ಲ ಚಟುವಟಿಕೆಯನ್ನು ನಿರ್ಬಂಧಿಸಿರುವುದರಿಂದ ಜಿಲ್ಲಾ ಕ್ರೀಡಾ ಇಲಾಖೆಗೂ ಲಕ್ಷಗಟ್ಟಲೆ ನಷ್ಟ ಉಂಟಾಗಿದೆ.
ಎಪ್ರಿಲ್- ಮೇ ತಿಂಗಳಲ್ಲಿ ಬೇಸಗೆ ಶಿಬಿರಗಳು ಹೆಚ್ಚು ನಡೆಯುವುದರಿಂದ ಕ್ರೀಡಾಂಗಣ, ಈಜುಕೊಳಗಳಿಂದ ಇಲಾಖೆಯ ಬೊಕ್ಕಸಕ್ಕೆ ಬಹುಪಾಲು ಆದಾಯ ಬರುತ್ತಿತ್ತು.
ಸದ್ಯ ಲಾಕ್‌ಡೌನ್‌ನಿಂದ ಜಿಲ್ಲಾ ಹೊರ ಕ್ರೀಡಾಂಗಣ, ಈಜುಕೊಳ, ಟೆನಿಸ್, ಶೆಟಲ್ ಬ್ಯಾಡ್ಮಿಂಟನ್ ಸೇರಿದಂತೆ ಸರಕಾರಿ ಜಿಮ್‌ಗಳು ಕಾರ್ಯವನ್ನು ನಿಲ್ಲಿಸಿವೆ.
20 ಲಕ್ಷಕ್ಕೂ ಹೆಚ್ಚಿನ ನಷ್ಟ
ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ಬಳಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಿರ್ಮಾಣವಾದ ಈಜುಕೊಳಕ್ಕೆ ಎಪ್ರಿಲ್-ಮೇ ತಿಂಗಳಲ್ಲಿ ಅತೀ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದು ಇದರಿಂದ 15ಲಕ್ಷದ ವರೆಗೆ ವರಮಾನ ಬರುತ್ತಿತ್ತು. ಉಳಿದಂತೆ ನೂರಕ್ಕೂ ಹೆಚ್ಚಿನ ಸದಸ್ಯರಿರುವ ಜಿಮ್, ಶಟಲ್ ಬ್ಯಾಡ್ಮಿಂಟನ್, 30 ಸದಸ್ಯರಿರುವ ಟೆನ್ನಿಸ್ ಹಾಗೂ ಇತರ ಆ್ಯತ್ಲೆಟಿಕ್ ಕ್ರೀಡೆಗಳಿಂದ ಈ ಎರಡು ತಿಂಗಳಲ್ಲಿ 20ಲಕ್ಷಕ್ಕೂ ಹೆಚ್ಚಿನ ಆದಾಯದ ನಿರೀಕ್ಷೆ ಇತ್ತು.
ಮನೆಯಲ್ಲೆ ತರಬೇತಿ
ಉಳಿದಂತೆ ಈಜುಕೊಳ, ಒಳಾಂಗಣ, ಜಿಲ್ಲಾ ಕ್ರೀಡಾಂಗಣಗಳಿಂದ ಬರುವ ಆದಾಯ ಗುತ್ತಿಗೆ ಆಧಾರಿತ ಸಿಬಂದಿಗಳ ನಿರ್ವಹಣೆ ಮೂಲವಾಗಿದೆ. ಈ ಬಾರಿಯ ಆದಾಯದ ಖೋತದಿಂದ ಇಲಾಖೆಗೆ ದೊಡ್ಡ ಹೊರೆ ಆಗಿದೆ. ಉಳಿದಂತೆ 40ಕ್ಕೂ ಹೆಚ್ಚಿನ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಈಗ ಮನೆಯಲ್ಲಿಯೇ ತರಬೇತಿ ಪಡೆಯುವಂತಾಗಿದ್ದು ಹಿಂದೆ ಜಿಲ್ಲಾಡಳಿತದ ಕ್ರೀಡಾಂಗಣದಲ್ಲೆ ಅಭ್ಯಾಸ ಮಾಡುತ್ತಿದ್ದರು.
20 ಲ.ರೂ. ನಷ್ಟ
2 ತಿಂಗಳಲ್ಲಿ 20 ಲಕ್ಷ ರೂ.ನಷ್ಟು ಆದಾಯ ನಷ್ಟವಾಗಿದೆ. ಲಾಕ್‌ಡೌನ್ ಸಡಿಲಿಕೆ ಆದರೂ ಈಜುಕೊಳ, ಜಿಮ್‌ಗಳಿಗೆ ಅವಕಾಶ ಸಿಗುವುದು ಕಷ್ಟ. 3, 4 ತಿಂಗಳು ಜನರು ಬರುವುದು ಕಷ್ಟ. ಈ ನಷ್ಟ ಸರಿಹೋಗಲು ಮತ್ತೆ 3, 4 ತಿಂಗಳು ಬೇಕಾಗಬಹುದು.
-ಡಾ| ರೋಶನ್ ಕುಮಾರ್ ಶೆಟ್ಟಿ,
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.