Malpe ಬೀಚ್‌: ದಿನಕ್ಕೆ 10,000 ಪ್ರವಾಸಿಗರು!

ಹೆಚ್ಚುತ್ತಿರುವ ಜನಾಕರ್ಷಣೆ: ಪಾರ್ಕಿಂಗ್‌, ಶೌಚಾಲಯ, ಸ್ನಾನಗೃಹ ವ್ಯವಸ್ಥೆ ಸಾಲದು

Team Udayavani, Sep 27, 2024, 7:18 PM IST

4

ಮಲ್ಪೆ: ಉಡುಪಿ ಜಿಲ್ಲೆಗೆ ಆಗಮಿಸುವ ಎಲ್ಲ  ವರ್ಗದ ಪ್ರವಾಸಿಗರ ಕಣ್ಮನ ಸೆಳೆಯುವ ರಮಣೀಯ ತಾಣ ಮಲ್ಪೆ ಬೀಚ್‌ ಮತ್ತು ಸೈಂಟ್‌ಮೇರಿಸ್‌ ದ್ವೀಪ. ವಿಶಾಲವಾದ ಕಡಲತೀರ, ಮರಳು ಹಾಸಿನ ಮೇಲೆ ನಿಸರ್ಗ ಸೌಂದರ್ಯವನ್ನು ವೀಕ್ಷಿಸಲು ನಿರ್ಮಿಸಿರುವ ಕುಟೀರಗಳು. ಸಾಹಸ ಪ್ರಿಯರಿಗೆ ಪ್ಯಾರಾ ಸೈಲಿಂಗ್‌, ಜೆಟ್‌ಸ್ಕೀ, ಬನಾನ ರ್‍ಯಾಂಪಿಂಗ್‌, ಬಂಪಿ ರೈಡಿಂಗ್‌, ಡಿಸ್ಕೋ ಬೋಟ್‌ ರಡ್‌, ಝೋರ್ಬಿಂಗ್‌, ಬೋಟಿಂಗ್‌ ಮಜಾ, ಕರಾವಳಿಯ ವಿಶೇಷ ಆಹಾರ ಖುಷಿಯನ್ನು ನೀಡುತ್ತವೆ. ಹೀಗಾಗಿ ಹೊರ ರಾಜ್ಯ ಮತ್ತು ಹೊರಜಿಲ್ಲೆಯ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇಲ್ಲಿನ ಜನದಟ್ಟಣೆಗೆ ಪೂರಕವಾಗಿ ಇನ್Visit Siteನಷ್ಟು ಮೂಲಭೂತ ವ್ಯವಸ್ಥೆಗಳು ಬೇಕಾಗಿವೆ.

ಮಲ್ಪೆ ಬೀಚ್‌ಗೆ ದಿನಕ್ಕೆ ಸರಾಸರಿ 10 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದರೆ, ಸೈಂಟ್‌ಮೇರಿಸ್‌ ದ್ವೀಪಕ್ಕೆ ಸರಾಸರಿ 1000 ಮಂದಿ ಆಗಮಿಸುತ್ತಾರೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ಕೆಲವೊಂದು  ಮೂಲಭೂತ ಸೌಕರ್ಯಗಳಲ್ಲೊಂದಾದ ವಾಹನ ಪಾರ್ಕಿಂಗ್‌, ಶೌಚಾಲಯ, ಸ್ನಾನಗೃಹದ ಸಮಸ್ಯೆ ಎದುರಾಗುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ. ರಜಾ ದಿನಗಳಲ್ಲಿ ದೂರದ ಪ್ರವಾಸಿಗರ ಜತೆಗೆ ಸ್ಥಳೀಯರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿರುವುದರಿಂದ  ಪಾರ್ಕಿಂಗ್‌ ಮಾಡಲು ಸ್ಥಳಾವಕಾಶವಿಲ್ಲದೆ ಹಿಂತಿರುಗುವುದೂ ಇದೆ.

ಜನರ ನಿಯಂತ್ರಣವೇ ಸವಾಲು!
ಪ್ರವಾಸಿಗರ ಸುರಕ್ಷತೆಗೆ ನಿರಂತರ ಗಸ್ತು ತಿರುಗಲು ಎವಿಟಿ ಬೈಕ್‌ ನಿಯೋಜಿಸಲಾಗಿದೆ. 9 ಮಂದಿ ಎನ್‌ಐಡಬ್ಲ್ಯುಎಸ್‌-ಆರ್‌ಎಲ್‌ಎಸ್‌  ಪ್ರಮಾಣೀಕೃತ ಲೈಫ್‌ಗಾರ್ಡ್‌ ರಕ್ಷಣೆಗೆ ಸನ್ನದ್ದರಾಗಿದ್ದಾರೆ.  ಕರಾವಳಿ ಕಾವಲು ಪಡೆಯ ಮೂವರು ಪೊಲೀಸರು ಬೀಚ್‌ನಲ್ಲಿ ನಿಗಾ ಇಟ್ಟಿರುತ್ತಾರೆ. ಸ್ಥಳೀಯ ರಕ್ಷಣ ತಂಡಗಳ ಸ್ವಯಂಸೇವಕರೂ ಇದ್ದಾರೆ. ಆದರೂ ಉತ್ಸಾಹದಿಂದ ನೀರಿಗೆ ಹಾರುವ ಜನರನ್ನು ಸಂಭಾಳಿಸುವುದೇ ಇಲ್ಲಿ ಸವಾಲಾಗಿದೆ.

ಏನೆಲ್ಲ ಮೂಲ ಸೌಕರ್ಯ ಬೇಕು?
ಈಗ ಬೀಚ್‌ನಲ್ಲಿ 2 ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹ ಗಳಿವೆ. ಆದರೆ, ಪ್ರವಾಸಿಗರ ಲೆಕ್ಕ ನೋಡಿದರೆ ಇದು ಸಾಲದು. ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಹೀಗಾಗಿ ಹೆಚ್ಚುವರಿ ಶೌಚಾಲಯ ಬೇಕು.

  • ಪಾರ್ಕಿಂಗ್‌ ಏರಿಯಾದಲ್ಲಿ  ಒಂದು ಸುಸಜ್ಜಿತ ಶೌಚಾಲಯದ ವ್ಯವಸ್ಥೆ
  • ಪ್ರವಾಸಿಗರ  ರಕ್ಷಣೆಗಾಗಿ ಜೆಟ್‌ಸ್ಕೀ (ಜೆಟ್‌ ಸ್ಕೂಟರ್‌)
  • ಹೆಚ್ಚುವರಿ ವಾಹನ ಪಾರ್ಕಿಂಗ್‌ ವ್ಯವಸ್ಥೆ, ದೀಪಗಳ ಅಳವಡಿಕೆ
  • ಬೀಚ್‌ನ ಸ್ವಾಗತ ಗೋಪುರದಿಂದ ಶೌಚಾಲಯದವರೆಗೆ ರಸ್ತೆಯ ಎರಡೂ ಬದಿಯ ಫುಟ್‌ಪಾತ್‌ ನಿರ್ಮಾಣ
  • ಸೂಕ್ತ ಭದ್ರತೆಗಾಗಿ ಪೊಲೀಸ್‌ ಚೌಕಿ ಸ್ಥಾಪನೆ, ಹೆಚ್ಚುವರಿಸಿಸಿ ಕೆಮರಾ
  • ಪ್ರಥಮ ಚಿಕಿತ್ಸಾ ಸೌಲಭ್ಯಗಳು

-ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

HDK (3)

Lokayukta ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಎಚ್ ಡಿಕೆ

1-cantar

Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು

1-male

India vs Bangladesh 2 ನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಅಡ್ಡಿ

Gadinadu-Award

Award: 2023-24, 2024-25ನೇ ಸಾಲಿನ “ಗಡಿನಾಡ ಚೇತನ” ಪ್ರಶಸ್ತಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

4

Malpe: ಬೋಟಿನಲ್ಲಿ ಅಡುಗೆ ಮಾಡುವ ವೇಳೆ ಬಾಣಲೆಗೆ ಬಿದ್ದು ಮೀನುಗಾರ ಸಾವು

1

Udupi: ಕಾರು ಮಾರಾಟದ ಹೆಸರಿನಲ್ಲಿ ವಂಚನೆ

Udayavani.com ‘Nammane Krishna-2024’ Reels Contest Winners Awarded

Udayavani.com ‘ನಮ್ಮನೆ ಕೃಷ್ಣ -2024’ ರೀಲ್ಸ್‌ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ

Udupi: ಅಧಿಕ ಕೆಲಸದೊತ್ತಡದಿಂದ ಮುಕ್ತಿಗೊಳಿಸಲು ಒತ್ತಾಯ

Udupi: ಅಧಿಕ ಕೆಲಸದೊತ್ತಡದಿಂದ ಮುಕ್ತಿಗೊಳಿಸಲು ಒತ್ತಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rain: ದಕ್ಷಿಣ ಕನ್ನಡ, ಉಡುಪಿ: ಮಳೆ ಇಳಿಮುಖ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

Aranthodu: ಕಾಡಾನೆ ಹಾವಳಿ; ಕೃಷಿಗೆ ಹಾನಿ

Aranthodu: ಕಾಡಾನೆ ಹಾವಳಿ; ಕೃಷಿಗೆ ಹಾನಿ

4

Malpe: ಬೋಟಿನಲ್ಲಿ ಅಡುಗೆ ಮಾಡುವ ವೇಳೆ ಬಾಣಲೆಗೆ ಬಿದ್ದು ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.