Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಕ್ರಿಸ್ಮಸ್ ಸಂಭ್ರಮ ಹೆಚ್ಚಿಸುವ ಸಂಗೀತ; ಅನ್ಯಧರ್ಮೀಯರಿಂದಲೂ ಆಹ್ವಾನ
Team Udayavani, Dec 22, 2024, 5:44 PM IST
ಮಲ್ಪೆ: ಕ್ರಿಸ್ಮಸ್ ಹತ್ತಿರ ಬರುತ್ತಿದ್ದಂತೆಯೇ ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ರಾತ್ರಿ ವೇಳೆ ಕ್ಯಾರೋಲ್ (ರಾಗದ ಕೂಟ) ಸದ್ದು ಕೇಳಿಬರುತ್ತದೆ. ಮಕ್ಕಳಿಗೆ ಮನರಂಜನೆ ನೀಡುವ, ಅಬಾಲ ವೃದ್ಧರಾದಿಯಾಗಿ ಸಂಭ್ರಮಿಸುವ ಕ್ಯಾರೋಲ್ ಉಡುಪಿಯ ಎಲ್ಲ ಭಾಗಗಳಲ್ಲಿ ಭಾರೀ ಜನಾಕರ್ಷಣೆ ಪಡೆದಿದೆ.
ಮಲ್ಪೆ ಭಾಗದಲ್ಲಿ ಇದು ಕೇವಲ ಕ್ರಿಶ್ಚಿಯನ್ನರ ಸಂಭ್ರಮವಲ್ಲ. ಕೆಲವು ಕಡೆ ಹಿಂದೂಗಳು ಮತ್ತು ಮುಸ್ಲಿಮರು ಕೂಡ ಈ ತಂಡಗಳನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಹಿಂದೆ ಪುರುಷರು ಮಾತ್ರ ಈ ರಾಗದ ಕೂಟದಲ್ಲಿ ಭಾಗವಹಿಸುತ್ತಿದ್ದರು. ಈಗ ಮಕ್ಕಳು, ಮಹಿಳೆಯರು, ಪುರುಷರು ಹೀಗೆ ಹಿರಿಕಿರಿಯರೆಲ್ಲರೂ ಭಾಗವಹಿಸುತ್ತಾರೆ. ಅನ್ಯ ಧರ್ಮೀಯರು ಕೂಡ ನಮ್ಮನ್ನು ಮನೆಗೆ ಆಹ್ವಾನಿಸುತ್ತಾರೆ. ನಗರ ಪ್ರದೇಶದಲ್ಲಿ ಈ ಕೂಟದವರು ಮನೆ ಮನೆಗೆ ತೆರಳುವ ಬದಲು ಒಂದೆಡೆ ದೇವಾಲಯ ಅಥವಾ ಸಭಾಂಗಣಗಳಲ್ಲಿ ತಮ್ಮ ಸದಸ್ಯರನ್ನು ಸೇರಿಸಿ ಈಗ ಕ್ರಿಸ್ಮಸ್ ಕ್ಯಾರೋಲ್ ನಡೆಸಿ ಸಂಭ್ರಮಿಸುತ್ತಾರೆ ಎನ್ನುತ್ತಾರೆ ಮಲ್ಪೆ ಯುಬಿಎಂ ಚರ್ಚ್‌ನ ಧರ್ಮಗುರುಗಳಾದ ಕುಮಾರ್ ಸಲಿನ್ಸ್.
ಸಾಂತಾಕ್ಲಾಸ್ ಆಕರ್ಷಣೆ
ಕ್ರಿಸ್ಮಸ್ ಕ್ಯಾರೋಲ್‌ನಲ್ಲಿ ಸಾಂತಾಕ್ಲಾಸ್ ಪ್ರಮುಖ ಆಕರ್ಷಣೆ. ರಾಗದ ಕೂಟದಲ್ಲಿರುವ ಎಲ್ಲ ಜನರಿಗೆ ಮನೆಯವರು ತಿಂಡಿ, ಪಾನೀಯ ಹಾಗೂ ಇನ್ನು ಕೆಲವರು ಊಟದ ವ್ಯವಸ್ಥೆಯನ್ನು ಮಾಡುವುದಲ್ಲದೆ ತಮ್ಮ ಶಕಾöನುಸಾರ ಕಾಣಿಕೆಯನ್ನು ನೀಡುತ್ತಾರೆ. ಈ ಹಿಂದೆ ರಾತ್ರಿ ಇಡೀ ನಡೆಯುತಿದ್ದ ಈ ರಾಗದ ಕೂಟ ಇದೀಗ ತಡರಾತ್ರಿ 1 ಗಂಟೆಯವರೆಗೆ ಇರುತ್ತದೆ. ಒಂದು ಮನೆಯಲ್ಲಿ ಕನಿಷ್ಠ 10 ನಿಮಿಷದ ಕಾರ್ಯಕ್ರಮ ನೀಡುತ್ತಾರೆ.
ಕ್ಯಾರೋಲ್ ಎಂದರೇನು?
ಚರ್ಚ್‌ನ ಗಾಯನ ವೃಂದದವರು ಆ ದೇವಾಲಯಕ್ಕೆ ಸಂಬಂಧಪಟ್ಟ ಮನೆಗಳಿಗೆ ರಾತ್ರಿ ಹೊತ್ತಿನಲ್ಲಿ ತೆರಳಿ ಯೇಸು ಕ್ರಿಸ್ತರ ಜನನವನ್ನು ಸಾರುವ ಸಂಗೀತವನ್ನು ಹಾಡಿ, ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರುವುದೇ ಕ್ರಿಸ್ಮಸ್ ಕ್ಯಾರೋಲ್. ಸ್ಥಳೀಯ ಭಾಷೆಯಲ್ಲಿ ರಾಗದ ಕೂಟ ಎಂದು ಕರೆಯುತ್ತಾರೆ. ಈ ತಂಡದಲ್ಲಿ ಸುಮಾರು 20 ಜನರಿರುತ್ತಾರೆ.
ನಿರಂತರ ಕಾರ್ಯಕ್ರಮ
ಕಳೆದ 35 ವರ್ಷಗಳಿಂದ ಇಂದಿನವರೆಗೂ ನಿರಂತರವಾಗಿ ತಂಡ ನಮ್ಮ ಮನೆಗೆ ಬಂದು ಸಂಗೀತ ಕಾರ್ಯಕ್ರಮ ನೀಡುತ್ತಿದೆ. ನಮ್ಮ ಮನೆಗೆ ಮಾತ್ರವಲ್ಲ ಸುತ್ತಮುತ್ತ ಇರುವ 4-5 ಮನೆಗಳಿಗೆ ಹೋಗುತ್ತಾರೆ.
– ಪೂರ್ಣಿಮಾ ನಾರಾಯಣ, ಶಿಕ್ಷಕಿ, ಮಲ್ಪೆ-ಕೊಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.